image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಲಾಸ್​ ಏಂಜಲೀಸ್​ ಒಲಿಂಪಿಕ್ಸ್​ ವೇಳಾಪಟ್ಟಿ ಪ್ರಕಟ

ಲಾಸ್​ ಏಂಜಲೀಸ್​ ಒಲಿಂಪಿಕ್ಸ್​ ವೇಳಾಪಟ್ಟಿ ಪ್ರಕಟ

ಲಾಸ್ ಎಂಜಲೀಸ್ : ಲಾಸ್​ ಎಂಜಲೀಸ್ ಒಲಿಂಪಿಕ್ಸ್​ನ ಸಂಪೂರ್ಣ ವೇಳಾಪಟ್ಟಿಯನ್ನು ಇಂದು ಬಿಡುಗಡೆ ಗೊಳಿಸಲಾಗಿದ್ದು ಕ್ರಿಕೆಟ್​ ಸೇರಿ ಕ್ರೀಡಾಕೂಟದಲ್ಲಿ ನಡೆಯಲಿರುವ ಪಂದ್ಯಾವಳಿಗಳ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಒಲಿಂಪಿಕ್ಸ್​ ಕ್ರೀಡಾಕೂಟಗಳು ಜುಲೈ 12 ರಿಂದ ಪ್ರಾರಂಭವಾಗಲಿದ್ದು ಜುಲೈ 30 ರವರೆಗೆ ನಡೆಯಲಿವೆ. 1900ನೇ ಇಸವಿಯ ನಂತರ ಒಲಿಂಪಿಕ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಆಡುತ್ತಿರುವುದು ಇದೇ ಮೊದಲು. ಈ ಕ್ರೀಡಾಕೂಟದಲ್ಲಿ ಕ್ರಿಕೆಟ್ ಪಂದ್ಯವು ಜುಲೈ 12 ರಿಂದ ಪ್ರಾರಂಭವಾಗಲಿದೆ. ಮಹಿಳಾ ತಂಡದ ಫೈನಲ್​ ಪಂದ್ಯವು 20 ರಂದು ನಡೆಯಲಿದ್ದು, ಪುರುಷರ ಫೈನಲ್​ ಪಂದ್ಯ 29 ರಂದು ನಡೆಯಲಿದೆ.

ಒಲಿಂಪಿಕ್ ಸಮಿತಿಯು 6 ಪುರುಷ ಮತ್ತು 6 ಮಹಿಳಾ ಕ್ರಿಕೆಟ್ ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ ಎಂದು ಘೋಷಿಸಿತ್ತು. ಪ್ರತಿ ತಂಡವು ತಲಾ 15 ಸದಸ್ಯರನ್ನು ಹೊಂದಿರುತ್ತದೆ. ಆದರೆ 6 ತಂಡಗಳಲ್ಲಿ ಯಾವುದು ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುತ್ತದೆ ಎಂಬುದನ್ನು ಸಮಿತಿ ಇನ್ನೂ ನಿರ್ಧರಿಸಿಲ್ಲ.

ಟಿ20 ಮಾದರಿಯಲ್ಲಿ ನಡೆಯಲಿರುವ ಈ ಪಂದ್ಯಗಳು ಲಾಸ್ ಏಂಜಲೀಸ್‌ನಿಂದ ಸುಮಾರು 50 ಕಿಲೋಮೀಟರ್ ದೂರದಲ್ಲಿರುವ ಪೊಮೆನಾದ ಫೇರ್‌ಗ್ರೌಂಡ್ ಕ್ರೀಡಾಂಗಣದಲ್ಲಿ ನಡೆಯಲಿವೆ. LA28 ಸಂಘಟನಾ ಸಮಿತಿಯ ಪ್ರಕಾರ, ಒಂದೇ ದಿನದಲ್ಲಿ ಎರಡು ಪಂದ್ಯಗಳನ್ನು ಆಯೋಜಿಸಲಾಗುತ್ತದೆ. ಜುಲೈ 14 ಮತ್ತು 21 ರಂದು ಯಾವುದೇ ಪಂದ್ಯಗಳು ನಡೆಯುವುದಿಲ್ಲ.

ಬರೋಬ್ಬರಿ 128 ವರ್ಷಗಳ ಹಿಂದೆ ಅಂದರೆ 1900ರ ಇಸವಿಯಲ್ಲಿ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಕ್ರಿಕೆಟ್ ಪಂದ್ಯ ನಡೆದಿತ್ತು. ಇದರಲ್ಲಿ ಕೇವಲ ಎರಡು ತಂಡಗಳು ಮಾತ್ರ ಭಾಗಿಯಾಗಿದ್ದವು. ಒಲಿಂಪಿಕ್ಸ್‌ನಲ್ಲಿ ಎರಡು ದಿನಗಳ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ಮತ್ತು ಫ್ರಾನ್ಸ್ ಮಾತ್ರ ಪರಸ್ಪರ ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ಗ್ರೇಟ್ ಬ್ರಿಟನ್ ಚಿನ್ನದ ಪದಕ ಗೆದ್ದಿತು. ಕ್ರಿಕೆಟ್‌ನಲ್ಲಿ ಚಿನ್ನದ ಪದಕ ಗೆದ್ದ ಏಕೈಕ ತಂಡ ಎಂಬ ದಾಖಲೆಯನ್ನು ಬರೆದಿದೆ.

ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ಐದು ಹೊಸ ಕ್ರೀಡೆಗಳ ಸೇರ್ಪಡೆಯಾಗಿದೆ. ಕ್ರಿಕೆಟ್ ಜೊತೆಗೆ, ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (ಐಒಸಿ) ಲಾಸ್ ಏಂಜಲೀಸ್ 2028ರ ಒಲಿಂಪಿಕ್ಸ್‌ನಲ್ಲಿ ಬೇಸ್‌ಬಾಲ್/ಸಾಫ್ಟ್‌ಬಾಲ್, ಫ್ಲ್ಯಾಗ್ ಫುಟ್‌ಬಾಲ್, ಲ್ಯಾಕ್ರೋಸ್ (ಸಿಕ್ಸರ್‌ಗಳು) ಮತ್ತು ಸ್ಕ್ವ್ಯಾಷ್‌ ಕ್ರೀಡೆಗಳನ್ನು ಸಹ ಸೇರಿಸಿದೆ.

Category
ಕರಾವಳಿ ತರಂಗಿಣಿ