ಲಾರ್ಡ್ಸ್ : ಆಂಡ್ರಸನ್ ಮತ್ತು ತೆಂಡೂಲ್ಕರ್ ಟ್ರೋಫಿ ಭಾಗವಾಗಿ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ ತಂಡ ಸೋಲನ್ನು ಕಂಡಿದೆ. ಐತಿಹಾಸಿಕ ಲಾರ್ಡ್ ಮೈದಾನದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 22 ರನ್ಗಳಿಂದ ಗೆಲುವು ಸಾಧಿಸಿತು. ಇದರೊಂದಿಗೆ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-1 ಅಂತರದಿಂದ ಮುನ್ನಡೆ ಸಾಧಿಸಿದೆ. ಈ ಪಂದ್ಯದಲ್ಲಿ 193 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಭಾರತ 58 ರನ್ಗಳಿಗೆ 4 ವಿಕೆಟ್ಗಳನ್ನು ಕಳೆದುಕೊಂಡು ನಾಲ್ಕನೇ ದಿನದಾಟ ಮುಕ್ತಾಯಗೊಳಿಸಿತು. ನಂತರ ಐದನೇ ದಿನದಂದು ಮೊದಲ ಅವಧಿಯಲ್ಲೇ ಮತ್ತೆ ನಾಲ್ಕು ವಿಕೆಟ್ಗಳನ್ನು ಕಳೆದುಕೊಂಡಿತು. ವೇಗಿ ಜೋಫ್ರಾ ಆರ್ಚರ್ ರಿಷಭ್ ಪಂತ್ ಮತ್ತು ವಾಷಿಂಗ್ಟನ್ ಸುಂದರ್ ಅವರ ವಿಕೆಟ್ ಪಡೆದರೆ, ಬೆನ್ ಸ್ಟೋಕ್ಸ್ ಕೆಎಲ್ ರಾಹುಲ್ ಅವರ ವಿಕೆಟ್ ಮತ್ತು ಕ್ರಿಸ್ ವೋಕ್ಸ್ ನಿತೀಶ್ ರೆಡ್ಡಿ ಅವರ ವಿಕೆಟ್ ಉರುಳಿಸಿದರು ಇದರಿಂದಾಗಿ ಭಾರತ ಊಟದ ಸಮಯದ ವೇಳೆಗೆ ಎಂಟು ವಿಕೆಟ್ ನಷ್ಟಕ್ಕೆ 112 ರನ್ ಗಳಿಸಿ ಸಂಕಷ್ಟದಲ್ಲಿತ್ತು. ಎರಡನೇ ಅವಧಿಯ ಅಂತ್ಯದಲ್ಲಿ, ಸ್ಟೋಕ್ಸ್ ಜಸ್ಪ್ರೀತ್ ಬುಮ್ರಾ ಅವರ ವಿಕೆಟ್ ಪಡೆದು ತಂಡವನ್ನು ಗೆಲುವಿನ ಹತ್ತಿರಕ್ಕೆ ತಂದರು. 74ನೇ ಓವರ್ನ 5ನೇ ಎಸೆತದಲ್ಲಿ ಬಶೀರ್ ಎಸೆದ ಬೌಲ್ ಸಿರಾಜ್ ಬ್ಯಾಟ್ಗೆ ತಾಗಿ ಸ್ಟಂಪ್ಸ್ಗಳಿಗೆ ತಾಕಿತು. ಇದರೊಂದಿಗೆ ಇಂಗ್ಲೆಂಡ್ ಗೆಲುವು ಖಚಿತವಾಯ್ತು. ಜಡೇಜಾ ಇಂಗ್ಲೆಂಡ್‌ನಲ್ಲಿ ಸತತ ನಾಲ್ಕು ಅಥವಾ ಅದಕ್ಕಿಂತ ಹೆಚ್ಚು 50+ ಸ್ಕೋರ್ ಗಳಿಸಿದ ಮೂರನೇ ಭಾರತೀಯ ಬ್ಯಾಟ್ಸ್‌ಮನ್ ಎಂಬ ದಾಖಲೆ ಬರೆದ್ದಾರೆ. ಇದಕ್ಕೂ ಮುನ್ನ ಸೌರವ್ ಗಂಗೂಲಿ ಮತ್ತು ರಿಚಭ್ ಪಂತ್ ಈ ಸಾಧನೆ ಮಾಡಿದ್ದಾರೆ.