image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಅಲ್ಕರಾಜ್ ರನ್ನು ಮಣಿಸಿ 2025ರ ವಿಂಬಲ್ಡನ್‌ ಸಿಂಗಲ್ಸ್ ಫೈನಲ್​ನಲ್ಲಿ ಚಾಂಪಿಯನ್ ಆದ ಜಾನಿಸ್ ಸಿನ್ನರ್

ಅಲ್ಕರಾಜ್ ರನ್ನು ಮಣಿಸಿ 2025ರ ವಿಂಬಲ್ಡನ್‌ ಸಿಂಗಲ್ಸ್ ಫೈನಲ್​ನಲ್ಲಿ ಚಾಂಪಿಯನ್ ಆದ ಜಾನಿಸ್ ಸಿನ್ನರ್

ಹೈದರಾಬಾದ್: ಇಟಲಿಯ ಯುವ ಟೆನಿಸ್ ತಾರೆ ಜಾನಿಕ್ ಸಿನ್ನರ್, ಐದು ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಸ್ಪೇನ್‌ ಪಟು ಕಾರ್ಲೋಸ್ ಅಲ್ಕರಾಜ್ ಅವರನ್ನು ಮಣಿಸಿ ಭಾನುವಾರ 2025ರ ವಿಂಬಲ್ಡನ್‌ ಸಿಂಗಲ್ಸ್ ಫೈನಲ್​ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದರು. ಪಂದ್ಯದಲ್ಲಿ ಆರಂಭಿಕ ಹಿನ್ನಡೆ ಅನುಭವಿಸಿದ್ದ ಸಿನ್ನರ್, ಸತತ ಮೂರು ಸೆಟ್‌ಗಳನ್ನು ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದರು. ಇದರೊಂದಿಗೆ, ವಿಂಬಲ್ಡನ್ ಗೆದ್ದ ಮೊದಲ ಇಟಾಲಿಯನ್ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದು ಸಿನ್ನರ್ ಅವರ ನಾಲ್ಕನೇ ಗ್ರ್ಯಾಂಡ್ ಸ್ಲ್ಯಾಮ್ ಆಗಿದ್ದು, ಈಗ ಅವರು ಐದು ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳನ್ನು ಹೊಂದಿರುವ ಕಾರ್ಲೋಸ್ ಅಲ್ಕರಾಜ್‌ಗಿಂತ ಕೇವಲ ಒಂದು ಗ್ರ್ಯಾಂಡ್ ಸ್ಲ್ಯಾಮ್ ಹಿಂದಿದ್ದಾರೆ.

ಮೊದಲ ಸೆಟ್‌ನಲ್ಲಿ 4-6 ಅಂತರದಿಂದ ಸೋಲು ಕಂಡ ಸಿನ್ನರ್, ಬಲವಾದ ಪುನರಾಗಮನದಿಂದ ಮುಂದಿನ ಮೂರು ಸೆಟ್‌ಗಳಲ್ಲಿ ಸ್ಪೇನ್‌ನ ಅಲ್ಕರಾಜ್ ಅವರನ್ನು 6-4, 6-4 ಮತ್ತು 6-4 ಸೆಟ್‌ಗಳಿಂದ ಸೋಲಿಸುವ ಮೂಲಕ ತಮ್ಮ ಮೊದಲ ಪ್ರಶಸ್ತಿ ಗೆದ್ದರು. ಇದರೊಂದಿಗೆ, 2025ರ ಫ್ರೆಂಚ್ ಓಪನ್‌ನಲ್ಲಿ ಕಾರ್ಲೋಸ್ ಅಲ್ಕರಾಜ್ ವಿರುದ್ಧದ ಸೋಲಿಗೆ ಸೇಡು ತೀರಿಸಿಕೊಂಡರು. 2025ರ ವಿಂಬಲ್ಡನ್ ಚಾಂಪಿಯನ್ ಸಿನ್ನರ್ ಅವರಿಗೆ 34 ಕೋಟಿ ರೂ. ಬಹುಮಾನದ ಹಣ ನೀಡಿದರೆ, ರನ್ನರ್ ಅಪ್ ಆದ ಕಾರ್ಲೋಸ್ ಅಲ್ಕರಾಜ್‌ಗೆ 17 ಕೋಟಿ ರೂ. ಬಹುಮಾನ ನೀಡಲಾಗಿದೆ. ಇದರ ಜೊತೆಗೆ, ವಿಂಬಲ್ಡನ್‌ ಸೆಮಿಫೈನಲ್‌ನಲ್ಲಿ ಸೋತ ಆಟಗಾರರಾದ ನೊವಾಕ್ ಜೊಕೊವಿಕ್ ಮತ್ತು ಫ್ರಿಟ್ಜ್‌ಗೆ ತಲಾ 9 ಕೋಟಿ ರೂ. ಸಿಕ್ಕಿತು.

Category
ಕರಾವಳಿ ತರಂಗಿಣಿ