image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಇಂಗ್ಲೆಂಡ್ ವಿರುದ್ದ ಭರ್ಜರಿ ಗೆಲುವಿನೊಂದಿಗೆ ಸರಣಿ ವಶಕ್ಕೆ ಪಡೆದ ಭಾರತೀಯ ಮಹಿಳಾ ಕ್ರಿಕೆಟ್ ತಂಡ

ಇಂಗ್ಲೆಂಡ್ ವಿರುದ್ದ ಭರ್ಜರಿ ಗೆಲುವಿನೊಂದಿಗೆ ಸರಣಿ ವಶಕ್ಕೆ ಪಡೆದ ಭಾರತೀಯ ಮಹಿಳಾ ಕ್ರಿಕೆಟ್ ತಂಡ

ಮ್ಯಾಂಚೆಸ್ಟ‌ರ್: ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆದ ನಾಲ್ಕನೇ ಟ್ವೆಂಟಿ-20 ಅಂತರರಾಷ್ಟ್ರೀಯ ಪಂದ್ಯದಲ್ಲೂ ಭಾರತ ಮಹಿಳಾ ಕ್ರಿಕೆಟ್ ತಂಡವು ಆರು ವಿಕೆಟ್‌ ಅಂತರದ ಭರ್ಜರಿ ಗೆಲುವು ದಾಖಲಿಸಿದೆ. ಆ ಮೂಲಕ ನಾಯಕಿ ಹರ್ಮನ್‌ಪ್ರೀತ್‌ ಪಡೆಯು ಐದು ಪಂದ್ಯಗಳ ಟಿ20 ಸರಣಿಯಲ್ಲಿ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ 3-1ರ ಅಂತರದಲ್ಲಿ ವಶಪಡಿಸಿಕೊಂಡಿದೆ. ಭಾರತ ಮಹಿಳಾ ಕ್ರಿಕೆಟ್ ತಂಡದ ಚಾರಿತ್ರಿಕ ಸಾಧನೆ ಇದಾಗಿದ್ದು, ಇಂಗ್ಲೆಂಡ್ ವಿರುದ್ಧ ಚೊಚ್ಚಲ ಟಿ20 ಸರಣಿ ಗೆಲುವನ್ನು ದಾಖಲಿಸಿದೆ.

2006ರಲ್ಲಿ ಡರ್ಬಿಯಲ್ಲಿ ನಡೆದ ಏಕಮಾತ್ರ ಪಂದ್ಯದಲ್ಲಿ ಭಾರತ ಗೆಲುವು ದಾಖಲಿಸಿದ್ದರೂ, ಅದಾದ ನಂತರ ನಡೆದ ಎಲ್ಲ ಉಭಯ ಸರಣಿಗಳಲ್ಲೂ (ತವರಿನ ಅಂಗಳ ಸೇರಿದಂತೆ) ಸೋಲನುಭವಿಸಿತ್ತು. ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಇಂಗ್ಲೆಂಡ್ ತಂಡವನ್ನು ಏಳು ವಿಕೆಟ್ ನಷ್ಟಕ್ಕೆ 126 ರನ್‌ಗಳಿಗೆ ಕಟ್ಟಿಹಾಕುವಲ್ಲಿ ಭಾರತ ಯಶಸ್ವಿಯಾಯಿತು. ಭಾರತದ ಪರ ನಾಲ್ಕು ಓವರ್‌ಗಳಲ್ಲಿ ಕೇವಲ 15 ರನ್ ಮಾತ್ರ ಬಿಟ್ಟುಕೊಟ್ಟಿದ್ದ ರಾಧಾ ಯಾದವ್ ಎರಡು ವಿಕೆಟ್ ಗಳಿಸಿದ್ದರಲ್ಲದೆ, ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜರಾದರು.

 ಭಾರತದ ಪರ ಸ್ಮೃತಿ ಮಂದಾನ (32), ಶೆಫಾಲಿ ವರ್ಮಾ (31), ಜೆಮಿಮಾ ರಾಡ್ರಿಗಸ್ (24*) ಹಾಗೂ ಹರ್ಮನ್‌ಪ್ರೀತ್‌ ಕೌರ್ (26) ಉಪಯುಕ್ತ ಕಾಣಿಕೆ ನೀಡಿದರು. ಭಾರತ, ಟ್ರೆಂಟ್‌ ಬ್ರಿಡ್ಜ್‌ನಲ್ಲಿ ನಡೆದ ಸರಣಿಯ ಮೊದಲ ಪಂದ್ಯದಲ್ಲಿ 97 ರನ್ ಅಂತರದ ಜಯ ಗಳಿಸಿದ್ದರೆ ಕೌಂಟಿ ಗೌಂಡ್‌ನಲ್ಲಿ ನಡೆದಿದ್ದ ಎರಡನೇ ಪಂದ್ಯದಲ್ಲಿ 24 ರನ್ ಅಂತರದ ಜಯಭೇರಿ ಮೊಳಗಿಸಿತ್ತು. 

Category
ಕರಾವಳಿ ತರಂಗಿಣಿ