image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಟೇಲರ್ ಪ್ರಿಟ್ಸ್, ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಸತತ ಎರಡನೇ ಬಾರಿ ಕ್ವಾರ್ಟ‌ರ್ ಫೈನಲ್ ಗೆ

ಟೇಲರ್ ಪ್ರಿಟ್ಸ್, ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಸತತ ಎರಡನೇ ಬಾರಿ ಕ್ವಾರ್ಟ‌ರ್ ಫೈನಲ್ ಗೆ

ಲಂಡನ್ : ಅಮೆರಿಕ ಓಪನ್ ರನ್ನರ್ ಅಪ್ ಟೇಲರ್ ಪ್ರಿಟ್ಸ್, ವಿಂಬಲ್ಡನ್ ಟೆನಿಸ್ ಟೂರ್ನಿಯಲ್ಲಿ ಸತತ ಎರಡನೇ ಬಾರಿ ಕ್ವಾರ್ಟ‌ರ್ ಫೈನಲ್ ತಲುಪಿದರು. ರಷ್ಯಾದ ಕರೆನ್ ಕಚನೋವ್ ಅವರೂ ಹೆಚ್ಚಿನ ಪ್ರಯಾಸವಿಲ್ಲದೆ ಎಂಟರ ಘಟ್ಟಕ್ಕೆ ಮುನ್ನಡೆದರು. ಪುರುಷರ ಸಿಂಗಲ್ಸ್‌ನಲ್ಲಿ ಐದನೇ ಶ್ರೇಯಾಂಕದ ಪ್ರಿಟ್ಸ್ 6-1, 3-0ಯಿಂದ ಮುನ್ನಡೆಯಲ್ಲಿದ್ದಾಗ ಎದುರಾಳಿ ಆಟಗಾರ ಜೋರ್ಡಾನ್ ಥಾಂಪ್ಸನ್ (ಆಸ್ಟ್ರೇಲಿಯಾ) ಗಾಯದಿಂದಾಗಿ ಸ್ಪರ್ಧೆಯಿಂದ ಹಿಂದೆ ಸರಿದರು. ಇದರಿಂದಾಗಿ ವಾಕ್‌ಓವ‌ರ್ ಪಡೆದ ಅಮೆರಿಕದ 27 ವರ್ಷ ವಯಸ್ಸಿನ ಪ್ರಿಟ್ಸ್, ಆಲ್ ಇಂಗ್ಲೆಂಡ್ ಕ್ಲಬ್‌ನಲ್ಲಿ ನಾಲ್ಕು ವರ್ಷಗಳಲ್ಲಿ ಮೂರನೇ ಬಾರಿ ಎಂಟರ ಘಟ್ಟ ಪ್ರವೇಶಿಸಿದಂತಾಗಿದೆ.

ವಿಶ್ವ ಕ್ರಮಾಂಕದಲ್ಲಿ 44ನೇ ಸ್ಥಾನದಲ್ಲಿರುವ ಥಾಂಪ್ಸನ್‌ ಇದೇ ಮೊದಲ ಬಾರಿ ವಿಂಬಲ್ಡನ್‌ನಲ್ಲಿ ನಾಲ್ಕನೇ ಸುತ್ತು ಪ್ರವೇಶಿಸಿದ್ದರು. 31 ವರ್ಷ ವಯಸ್ಸಿನ ಅವರು, ಶನಿವಾರ ಫ್ರಾನ್ಸ್‌ನ ಪಿಯ‌ರ್ ಡ್ಯೂಸ್ ಹರ್ಬಟ್್ರ ಜೊತೆಗೂಡಿ ದೀರ್ಘ ಡಬಲ್ಸ್ ಪಂದ್ಯ ಆಡಿದ್ದರು. ಬೆನ್ನು ಮತ್ತು ಕಾಲು ನೋವಿನೊಂದಿಗೆ ಸಿಂಗಲ್ಸ್ ಸ್ಪರ್ಧೆಗೆ ಇಳಿದಿದ್ದ ಅವರು, 41 ನಿಮಿಷ ಹೋರಾಟ ನಡೆಸಿ ನಂತರ ಹೊರನಡೆದರು. ಸೆಮಿಫೈನಲ್ ತಲುಪುವ ಗುರಿ ಹೊಂದಿ ರುವ ಪ್ರಿಡ್ಜ್ ಅವರಿಗೆ ಮುಂದಿನ ಸುತ್ತಿನಲ್ಲಿ 17ನೇ ಶ್ರೇಯಾಂಕದ ಕಚನೋವ್ ಎದುರಾಳಿಯಾಗಿದ್ದಾರೆ.

Category
ಕರಾವಳಿ ತರಂಗಿಣಿ