image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬೆಂಗಳೂರಿನಲ್ಲಿ ನೀರಜ್​ ಚೋಪ್ರಾ ಕ್ಲಾಸಿಕ್​ 2025 ಅಂತರಾಷ್ಟ್ರೀಯ ಜಾವೆಲಿನ್​ ಸ್ಪರ್ಧೆ

ಬೆಂಗಳೂರಿನಲ್ಲಿ ನೀರಜ್​ ಚೋಪ್ರಾ ಕ್ಲಾಸಿಕ್​ 2025 ಅಂತರಾಷ್ಟ್ರೀಯ ಜಾವೆಲಿನ್​ ಸ್ಪರ್ಧೆ

ಬೆಂಗಳೂರು: ಭಾರತೀಯ ಕ್ರೀಡಾ ಇತಿಹಾಸದಲ್ಲೇ ಮೊದಲ ಅಂತರಾಷ್ಟ್ರೀಯ ಜಾವೆಲಿನ್ ಸ್ಪರ್ಧೆಗೆ ಬೆಂಗಳೂರು ಸಜ್ಜಾಗಿದೆ. ಬಹು ನಿರೀಕ್ಷಿತ ನೀರಜ್ ಚೋಪ್ರಾ ಕ್ಲಾಸಿಕ್ - 2025, ಜುಲೈ 5ರಂದು ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ಆರಂಭವಾಗಲಿದೆ. ಎರಡು ಬಾರಿ ಒಲಿಂಪಿಕ್ಸ್‌ ಪದಕ ವಿಜೇತ ನೀರಜ್ ಚೋಪ್ರಾ ಮತ್ತು ಜೆಎಸ್‌ಡಬ್ಲ್ಯೂ ಸ್ಪೋರ್ಟ್ಸ್ ಜಂಟಿಯಾಗಿ ಆಯೋಜಿಸಿರುವ ಮತ್ತು ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾದಿಂದ ಅನುಮೋದಿಸಲ್ಪಟ್ಟಿರುವ ಈ ಐತಿಹಾಸಿಕ ಚಾಂಪಿಯನ್​ ಶಿಪ್​ನಲ್ಲಿ ದೇಶ ವಿದೇಶಗಳ ಅಗ್ರ ಜಾವೆಲಿನ್ ಎಸೆತಗಾರರು ಭಾಗಿಯಾಗುತ್ತಿದ್ದಾರೆ.

 ಭಾಗವಹಿಸುವವರ ವಿವರ ಇಂತಿದೆ.

ಕರ್ಟಿಸ್ ಥಾಂಪ್ಸನ್ (ಯುಎಸ್ಎ): ಕರ್ಟಿಸ್ ಥಾಂಪ್ಸನ್ ಅಗ್ರ ಶ್ರೇಯಾಂಕಿತ ಅಮೇರಿಕನ್ ಜಾವೆಲಿನ್ ಎಸೆತಗಾರ, 2023ರ ಪ್ಯಾನ್ ಅಮೇರಿಕನ್ ಗೇಮ್ಸ್ ಚಾಂಪಿಯನ್ ಆಗಿದ್ದಾರೆ. (ವೈಯಕ್ತಿಕ ಅತ್ಯುತ್ತಮ ಥ್ರೋ - 87.76 ಮೀ.)

ಮಾರ್ಟಿನ್ ಕೊನೆಕ್ನಿ (ಜೆಕ್ ರಿಪಬ್ಲಿಕ್): ಜೆಕ್ ಗಣರಾಜ್ಯದವರಾದ 27 ವರ್ಷದ ಮಾರ್ಟಿನ್ ಕೊನೆಕ್ನಿ ಜಾವೆಲಿನ್‌ನಲ್ಲಿ ಸ್ಪರ್ಧಾತ್ಮಕ ಕ್ರೀಡಾಪಟುವಾಗಿ ಗುರುತಿಸಿಕೊಂಡಿರುವ ಅಥ್ಲೀಟ್. (ವೈಯಕ್ತಿಕ ಅತ್ಯುತ್ತಮ ದಾಖಲೆ - 80.59ಮೀ)

ಲೂಯಿಜ್ ಮೌರಿಸಿಯೊ ಡಾ ಸಿಲ್ವಾ (ಬ್ರೆಜಿಲ್): ವಿವಿಧ ವಯೋಮಾನದ ವಿಭಾಗಗಳಲ್ಲಿ ದಕ್ಷಿಣ ಅಮೇರಿಕನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ಗಳಲ್ಲಿ ಬಹು ಪೋಡಿಯಂ ಫಿನಿಶ್‌ಗಳನ್ನು ಹೊಂದಿರುವ ಅಥ್ಲೀಟ್. (ವೈಯಕ್ತಿಕ ಅತ್ಯುತ್ತಮ ಸಾಧನೆ - 86.62 ಮೀ.)

ಥಾಮಸ್ ರೋಹ್ಲರ್ (ಜರ್ಮನಿ): ಜರ್ಮನಿಯ ಥಾಮಸ್ ರೋಹ್ಲರ್ 2016ರ ಒಲಿಂಪಿಕ್ಸ್‌ನ ಚಾಂಪಿಯನ್ ಮತ್ತು ಜಾವೆಲಿನ್ ಕ್ರೀಡೆಯ ಸಾರ್ವಕಾಲಿಕ ಶ್ರೇಷ್ಠರಲ್ಲಿ ಒಬ್ಬರು. ಇವರ ಅತ್ಯುತ್ತಮ ಜಾವೆಲಿನ್​ ಎಸೆತ 93.90 ಮೀ. ಆಗಿದೆ

ಜೂಲಿಯಸ್ ಯೆಗೊ (ಕೀನ್ಯಾ): 2015ರ ವಿಶ್ವ ಚಾಂಪಿಯನ್ ಮತ್ತು 2016ರ ಒಲಿಂಪಿಕ್ಸ್‌ನ ಬೆಳ್ಳಿ ಪದಕ ವಿಜೇತ ಆಗಿದ್ದಾರೆ. (ವೈಯಕ್ತಿಕ ಅತ್ಯುತ್ತಮ - 92.72 ಮೀ.)

ರುಮೇಶ್ ಪತಿರಾಜ್ (ಶ್ರೀಲಂಕಾ): ಏಷ್ಯಾ ಉಪಖಂಡದ ಉದಯೋನ್ಮುಖ ತಾರೆ. ಕಳೆದ ವರ್ಷ ನಡೆದ ಏಷ್ಯನ್ ಥ್ರೋಯಿಂಗ್ ಚಾಂಪಿಯನ್‌ಶಿಪ್‌ನ ಚಿನ್ನದ ಪದಕ ವಿಜೇತ‌. (ವೈಯಕ್ತಿಕ ಅತ್ಯುತ್ತಮ ಸಾಧನೆ 85.45 ಮೀ.)

ಸಿಪ್ರಿಯನ್ ಮ್ರ್ಜಿಗ್ಲೋಡ್ (ಪೋಲೆಂಡ್): 27 ವರ್ಷದ ಪೋಲಿಷ್ ಅಥ್ಲೀಟ್ ಸಿಪ್ರಿಯನ್ ಯುರೋಪಿಯನ್ U23 ಚಾಂಪಿಯನ್ ಆಗಿದ್ದು, 2019ರಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. (ವೈಯಕ್ತಿಕ ಅತ್ಯುತ್ತಮ ಸಾಧನೆ - 85.92 ಮೀ.)

ನೀರಜ್ ಚೋಪ್ರಾ: ಒಲಿಂಪಿಕ್ಸ್ ಚಿನ್ನದ ಪದಕ ಗೆದ್ದ ದೇಶದ ಮೊದಲ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್. ವಿಶ್ವ ಚಾಂಪಿಯನ್, ಡೈಮಂಡ್ ಲೀಗ್ ವಿಜೇತ. (ವೈಯಕ್ತಿಕ ಅತ್ಯುತ್ತಮ ಸಾಧನೆ 90.23 ಮೀ.)

ಸಚಿನ್ ಯಾದವ್: 25 ವರ್ಷದ ಸಚಿನ್, ಏಷ್ಯನ್ ಚಾಂಪಿಯನ್‌ಶಿಪ್ ಬೆಳ್ಳಿ ಪದಕ ವಿಜೇತ ಇತ್ತೀಚೆಗೆ ಈ ವರ್ಷದ ಫೆಡರೇಶನ್ ಕಪ್ ಮತ್ತು ರಾಷ್ಟ್ರೀಯ ಕ್ರೀಡಾಕೂಟ ಎರಡರಲ್ಲೂ ಚಿನ್ನದ ಪದಕಗಳನ್ನು ಗೆದ್ದಿರುವ ಅಥ್ಲೀಟ್.(ವೈಯಕ್ತಿಕ ಅತ್ಯುತ್ತಮ ಪ್ರದರ್ಶನ 85.16 ಮೀ.)

ರೋಹಿತ್ ಯಾದವ್: 2023ರ ತಮ್ಮ 83.40 ಮೀ. ವೈಯಕ್ತಿಕ ಅತ್ಯುತ್ತಮ ಪ್ರದರ್ಶನದೊಂದಿಗೆ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಅಥ್ಲೀಟ್. 2025ರ ರಾಷ್ಟ್ರೀಯ ಕ್ರೀಡಾಕೂಟದಲ್ಲಿ 80.47 ಮೀ. ನೊಂದಿಗೆ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ.

ಸಾಹಿಲ್ ಸಿಲ್ವಾಲ್: 24 ವರ್ಷದ ಸಾಹಿಲ್, 80 ಮೀ. ವಿಭಾಗದಲ್ಲಿ ಮತ್ತೊಂದು ಭರವಸೆಯ ಪ್ರತಿಭೆ. ಕಳೆದ ಅಂತರ್ ರಾಜ್ಯ ಚಾಂಪಿಯನ್ಶಿಪ್‌ನಲ್ಲಿ ಚಿನ್ನ ಗೆದ್ದ ಸಾಧನೆಯಿಂದ 81.81 ಮೀ. ವೈಯಕ್ತಿಕ ಅತ್ಯುತ್ತಮ ಪ್ರದರ್ಶನವನ್ನು ಹೊಂದಿದ್ದಾರೆ. ಜರ್ಮನಿಯಲ್ಲಿ ನಡೆದ ವಿಂಕೆಲ್‌ಮನ್ ಗೇಮ್ಸ್ 2024ರ ಅಥ್ಲೆಟಿಕ್ಸ್ ಮೀಟ್‌ನಲ್ಲಿ 75.36 ಮೀ. ಥ್ರೋನೊಂದಿಗೆ ಚಿನ್ನದ ಪದಕವನ್ನು ಗೆದ್ದಿರುವ ಅಥ್ಲೀಟ್ ಆಗಿದ್ದಾರೆ.

ಯಶ್ವೀರ್ ಸಿಂಗ್: ಇದೇ ವರ್ಷ ಕೊರಿಯಾದ ಗುಮಿಯಲ್ಲಿ ನಡೆದ ಏಷ್ಯನ್ ಚಾಂಪಿಯನ್ಶಿಪ್‌ನಲ್ಲಿ 82.57 ಮೀ ದೂರದ ಎಸೆತದ ಮೂಲಕ ವೈಯಕ್ತಿಕ ಅತ್ಯುತ್ತಮ ಸಾಧನೆ ಹೊಂದಿದ್ದಾರೆ.

Category
ಕರಾವಳಿ ತರಂಗಿಣಿ