image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಗೆ ವಿಶ್ವ ಜಾವೆಲಿನ್ ನಲ್ಲಿ ಮತ್ತೊಮ್ಮೆ ಅಗ್ರ ಶ್ರೇಯಾಂಕ

ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಗೆ ವಿಶ್ವ ಜಾವೆಲಿನ್ ನಲ್ಲಿ ಮತ್ತೊಮ್ಮೆ ಅಗ್ರ ಶ್ರೇಯಾಂಕ

ಹೈದರಾಬಾದ್: ವಿಶ್ವ ಅಥ್ಲೆಟಿಕ್ಸ್ ಜಾವೆಲಿನ್ ಥ್ರೋನ ಹೊಸ ರ‍್ಯಾಂಕಿಂಗ್ ಬಿಡುಗಡೆ ಮಾಡಿದೆ. ಇದರಲ್ಲಿ ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಮತ್ತೊಮ್ಮೆ ಅಗ್ರ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್ 17 ರಂದು ಗ್ರೆನಡಾದ ಆಂಡರ್ಸನ್ ಪೀಟರ್ಸ್ ವಿರುದ್ಧ ನೀರಜ್ ಅಗ್ರ ಸ್ಥಾನವನ್ನು ಕಳೆದುಕೊಂಡಿದ್ದರು. ಆದರೆ ಅವರು ಅದ್ಭುತ ಪ್ರದರ್ಶನ ನೀಡಿ ಬ್ರಸೆಲ್ಸ್‌ನಲ್ಲಿ ನಡೆದ ಡೈಮಂಡ್ ಲೀಗ್ 2025 ರ ಫೈನಲ್​ ನಲ್ಲಿ ಗೆಲುವು ಸಾಧಿಸಿದ್ದರಿಂದ ಮತ್ತೆ ಅಗ್ರ ಸ್ಥಾನಕ್ಕೆ ಏರುವಲ್ಲಿ ಯಶಸ್ವಿಯಾಗಿದ್ದಾರೆ. ಹೊಸ ಶ್ರೇಯಾಂಕದಲ್ಲಿ ನೀರಜ್ ಚೋಪ್ರಾ 1445 ಅಂಕಗಳನ್ನು ಹೊಂದಿದ್ದರೆ, ಆಂಡರ್ಸನ್ ಪೀಟರ್ಸ್ 1431 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಅದೇ ಸಮಯದಲ್ಲಿ, ಜರ್ಮನ್ ಅಥ್ಲೀಟ್ ಜೂಲಿಯನ್ ವೆಬರ್ 1407 ಅಂಕಗಳನ್ನು ಹೊಂದಿದ್ದು ಮೂರನೇ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನದ ಅರ್ಷದ್ ನದೀಮ್ 1370 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ.

ನಂಬರ್ ಒನ್ ಸ್ಥಾನ ಪಡೆದುಕೊಂಡಿರುವ ಹಾಲಿ ಚಾಂಪಿಯನ್ ನೀರಜ್ ಅವರ ಮುಂದಿನ ಗುರಿ ಈ ವರ್ಷದ ಸೆಪ್ಟೆಂಬರ್‌ನಲ್ಲಿ ಟೋಕಿಯೊದಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಧ್ವಜವನ್ನು ಹಾರಿಸುವುದಾಗಿದೆ. 2025 ರ ಋತುವು ನೀರಜ್‌ಗೆ ಅದ್ಭುತವಾಗಿದೆ. ಏಕೆಂದರೆ ಅವರು 84.52 ಮೀಟರ್ ದೂರಕ್ಕೆ ಜಾವಲಿನ್​ ಎಸೆಯುವ ಮೂಲಕ ಚಿನ್ನದ ಪದಕ ಗೆದ್ದುಕೊಂಡಿದ್ದರು. ಈ ಮೂಲಕ ಅವರು ಋತುವನ್ನು ಗೆಲುವಿನೊಂದಿಗೆ ಪ್ರಾರಂಭಿಸಿದರು. ನಂತರ ದೋಹಾ ಡೈಮಂಡ್ ಲೀಗ್‌ನಲ್ಲಿ 90.23 ಮೀಟರ್ ಎಸೆಯುವ ಮೂಲಕ ಇತಿಹಾಸ ಸೃಷ್ಟಿಸಿದರು. ಇದು ಅವರ ಮೊದಲ 90 ಮೀಟರ್ ಎಸೆಯುವಿಕೆಯಾಗಿತ್ತು ಎಂಬುದು ಗಮನಿಸಬೇಕಾದ ಅಂಶವಾಗಿದೆ. ಅವರು ವೈಯಕ್ತಿಕವಾಗಿ ತಮ್ಮ ಸಾಧನೆಯನ್ನು ಉತ್ತಮಪಡಿಸಿಕೊಂಡರೂ ಪಂದ್ಯಾವಳಿಯಲ್ಲಿ ಅವರು ಜೂಲಿಯನ್ ವೆಬರ್‌ಗಿಂತ ಹಿಂದುಳಿದಿದ್ದರು. ಆ ನಂತರ ಅವರು ಪ್ಯಾರಿಸ್ ಡೈಮಂಡ್ ಲೀಗ್‌ನಲ್ಲಿ 88.16 ಮೀಟರ್ ದೂರಕ್ಕೆ ಜಾವಲಿನ್​ ಎಸೆಯುವ ಮೂಲಕ ವೆಬರ್‌ ಅವರನ್ನು ಸೋಲಿಸಿ ಪ್ರಶಸ್ತಿ ಪಡೆದುಕೊಂಡರು. ನೀರಜ್ ಒಸ್ಟ್ರಾವಾ ಗೋಲ್ಡನ್ ಸ್ಪೈಕ್‌ನಲ್ಲಿ ತಮ್ಮ ಗೆಲುವಿನ ಓಟವನ್ನು ಮುಂದುವರೆಸಿದರು.

Category
ಕರಾವಳಿ ತರಂಗಿಣಿ