ಹೈದೆರಾಬಾದ್ : ಇಂಗ್ಲೆಂಡ್ ಎದುರಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ತಂಡವು 97 ರನ್‌ಗಳಿಂದ ಇಂಗ್ಲೆಂಡ್ ಎದುರು ಜಯಿಸಿತು. ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ಹಂಗಾಮಿ ನಾಯಕಿಯೂ ಆಗಿರುವ ಮಂದಾನ (112; 62ಎಸೆತ) ಅವರ ಶತಕದ ಬಲದಿಂದ ಭಾರತ ತಂಡವು 20 ಓವರ್‌ಗಳಲ್ಲಿ 5ಕ್ಕೆ210 ರನ್ ಗಳಿಸಿತು. ಇದಕ್ಕುತ್ತರವಾಗಿ ಇಂಗ್ಲೆಂಡ್ ತಂಡಕ್ಕೆ 14.5 ಓವರ್‌ಗಳಲ್ಲಿ 113 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಎಡಗೈ ಸ್ಪಿನ್ನರ್ ಶ್ರೀಚರಣಿ ನಾಲ್ಕು ವಿಕೆಟ್ ಗಳಿಸಿ ಆತಿಥೇಯ ತಂಡವನ್ನು ನಿಯಂತ್ರಿಸಿದರು. ಇಂಗ್ಲಂಡ್ ತಂಡದ ನ್ಯಾಟ್ ಶಿವರ್ ಬ್ರಂಟ್ (66; 42ಎ, 4X10) ಅವರು ಅರ್ಧಶತಕ ಗಳಿಸಿದರು. ಟಾಸ್ ಗೆದ್ದ ಇಂಗ್ಲೆಂಡ್ ಮಹಿಳಾ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಸ್ಮೃತಿ ಮತ್ತು ಶಫಾಲಿ ವರ್ಮಾ (20;22ಎ) ಮೊದಲ ವಿಕೆಟ್ ಜೊತೆಯಾಟದಲ್ಲಿ 77 ರನ್ ಕಲೆಹಾಕಿದರು. ಲಯ ಕಂಡುಕೊಳ್ಳುವ ಪ್ರಯತ್ನದಲ್ಲಿರುವ ಶಫಾಲಿ ಮತ್ತೊಮ್ಮೆ ದೊಡ್ಡ ಮೊತ್ತ ಕಲೆಹಾಕುವಲ್ಲಿ ವಿಫಲರಾದರು.
ಆದರೆ ಸ್ಮೃತಿ ಮಾತ್ರ ಅಮೋಘ ಬ್ಯಾಟಿಂಗ್ ಮಾಡಿದರು. ಮಹಿಳಾ ಟಿ20 ಮಾದರಿಯಲ್ಲಿ ದೊಡ್ಡ ವೈಯಕ್ತಿಕ ಸ್ಕೋರ್ ದಾಖಲಿಸಿದರು. ಈ ಹಾದಿಯಲ್ಲಿ ಅವರು ಹರ್ಮನ್‌ಪ್ರೀತ್ ಕೌರ್ (103 ರನ್) ಅವರನ್ನು ಹಿಂದಿಕ್ಕಿದರು. ಮಂದಾನ ಅವರಿಗೆ ಇದು ವೈಯಕ್ತಿಕ ಶ್ರೇಷ್ಠ ಸ್ಕೋರ್ ಕೂಡ ಹೌದು. ಈ ಹಿಂದೆ ಅವರ ವೈಯಕ್ತಿಕ ಸ್ಕೋರ್ 87 ರನ್‌ಗಳಾಗಿದ್ದವು. ಶಫಾಲಿ ಔಟಾದ ನಂತರ ಮಂದಾನ ಅವರಿಗೆ ಹರ್ಲಿನ್ ಡಿಯೊಲ್ (43; 23ಎಸೆತ) ಉತ್ತಮ ಜೊತೆ ನೀಡಿದರು. ಹರ್ಲಿನ್ ಅವರು 26 ರನ್ ಗಳಿಸಿದ್ದ ಸಂದರ್ಭದಲ್ಲಿ ಡ್ಯಾನಿ ವೈಟ್ ಹಾಜ್ ಅವರಿಂದ ಒಂದು 'ಜೀವದಾನ' ಪಡೆದರು. ಇದರಿಂದಾಗಿ ಹರ್ಲಿನ್ ಮತ್ತು ಸ್ಮೃತಿ ಎರಡನೇ ವಿಕೆಟ್ ಜೊತೆಯಾಟದಲ್ಲಿ 94 ರನ್ ಸೇರಿಸಿದರು. ಆದರೆ ಮಂದಾನ ಮಾತ್ರ ಬೀಡುಬೀಸಾಗಿ ಬ್ಯಾಟಿಂಗ್ ಮಾಡಿದರು. ಎದುರಾಳಿ ಫೀಲ್ಡರ್‌ಗಳಿಗೆ ಯಾವುದೇ ಅವಕಾಶವನ್ನೂ ಕೊಡಲಿಲ್ಲ. ಎಡಗೈ ಸ್ಪಿನ್ನರ್ ಲಿನ್ನೆ ಸ್ಮಿತ್ ಅವರು ಹಾಕಿದ ನಾಲ್ಕನೇ ಓವರ್‌ನಲ್ಲಿ ಮೂರು ಬೌಂಡರಿ ಬಾರಿಸಿದ ಸ್ಮಿತ್ ತಮ್ಮ ರನ್ ಗಳಿಕೆಯ ವೇಗವನ್ನು ಹೆಚ್ಚಿಸುತ್ತಲೇ ಸಾಗಿದರು.
ಆತಿಥೇಯ ತಂಡದ ಮತ್ತೊಬ್ಬ ಎಡಗೈ ಸ್ಪಿನ್ನರ್ ಸೋಫಿ ಎಕ್ಸೆಸ್ಟೋನ್ ಅವರು ಬೌಲಿಂಗ್ ಮಾಡಿದ ಏಳನೇ ಓವರ್‌ನಲ್ಲಿ ಎರಡು ಸಿಕ್ಸರ್ ಬಾರಿಸಿದರು. ಸ್ಮೃತಿ ಅವರು ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ನ್ಯಾಟ್ ಶಿರ್ವ ಬ್ರಂಟ್ ಅವರಿಗೆ ಕ್ಯಾಚಿತ್ತರು. ಅದಕ್ಕೂ ಮುನ್ನ ರಿಚಾ ಘೋಷ್ (12 ರನ್) ಔಟಾದರು. ಜಿಮಿಮಾ ರಾಡ್ರಿಗಸ್ ಖಾತೆಯನ್ನೂ ತೆರೆಯದೇ ನಿರ್ಗಮಿಸಿದರು. ಇವರಿಬ್ಬರ ವಿಕೆಟ್‌ಗಳನ್ನು ಲಾರೆನ್ ಬೆಲ್ ಅವರು ತಮ್ಮ ಒಂದೇ ಓವರ್‌ನಲ್ಲಿ ಕಬಳಿಸಿದರು.
ಸ್ಕೊರ್ ವಿವರ ಇಂತಿದೆ : ಭಾರತ 20 ಓವರ್‌ಗಳಲ್ಲಿ 5ಕ್ಕೆ210 (ಶಫಾಲಿ ವರ್ಮಾ 20, ಸ್ಮೃತಿ ಮಂದಾನ 112, ಹರ್ಲೀನ್ ಡಿಯೊಲ್ 43, ಲಾರೆನ್ ಬೆಲ್ 27ಕ್ಕೆ3) ಇಂಗ್ಲೆಂಡ್: 14.5 ಓವರ್‌ಗಳಲ್ಲಿ 113 (ನ್ಯಾಟ್ ಶಿವರ್ ಬ್ರಂಟ್ 66, ಶ್ರೀಚರಣಿ 12ಕ್ಕೆ4, ದೀಪ್ತಿ ಶರ್ಮಾ 32ಕ್ಕೆ2, ರಾಧಾ ಯಾದವ್ 15ಕ್ಕೆ2)