image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ವಿಂಬಲ್ಡನ್‌ ಟೆನಿಸ್ ಟೂರ್ನಿ ಮೊದಲ ಸುತ್ತಿನಲ್ಲೇ ಹೊರಬಿದ್ದ ಫ್ರಾನ್ಸ್‌ನ ಲೋಯಿಸ್‌ ವಸ್ಪೂನ್

ವಿಂಬಲ್ಡನ್‌ ಟೆನಿಸ್ ಟೂರ್ನಿ ಮೊದಲ ಸುತ್ತಿನಲ್ಲೇ ಹೊರಬಿದ್ದ ಫ್ರಾನ್ಸ್‌ನ ಲೋಯಿಸ್‌ ವಸ್ಪೂನ್

ಲಂಡನ್: ಫ್ರೆಂಚ್ ಓಪನ್‌ನಲ್ಲಿ ಅನಿರೀಕ್ಷಿತವಾಗಿ ಸೆಮಿಫೈನಲ್‌ ತಲುಪಿದ್ದ ಫ್ರಾನ್ಸ್‌ನ ಲೋಯಿಸ್‌ ವಸ್ಪೂನ್ ಅವರು ವಿಂಬಲ್ಸನ್‌ ಟೆನಿಸ್ ಟೂರ್ನಿ ಕ್ವಾಲಿಫೈಯರ್‌ನ ಮೊದಲ ಸುತ್ತಿನಲ್ಲೇ ಹೊರಬಿದ್ದರು. ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಕೆನಡಾದ ಕಾರ್ಸನ್ 6-2, 6-7 (1/7), 6-400 2 ಕ್ರಮಾಂಕದಲ್ಲಿ 65ನೇ ಸ್ಥಾನದಲ್ಲಿ ರುವ ವಸ್ಪೂನ್ ಅವರಿಗೆ ಆಘಾತ ನೀಡಿದರು. ಕಾರ್ಸನ್ 197ನೇ ಕ್ರಮಾಂಕ ಹೊಂದಿದ್ದಾರೆ.

ಫ್ರೆಂಚ್ ಓಪನ್‌ಗೆ ವೈಲ್ಡ್‌ಕಾರ್ಡ್ ಪ್ರವೇಶ ಪಡೆದಿದ್ದ 22 ವರ್ಷ ವಯಸ್ಸಿನ ವಸೂನ್ ಅವರು ಮೂರನೇ ಶ್ರೇಯಾಂಕದ ಜೆಸ್ಸಿಕಾ ಪೆಗುಲಾ ಮತ್ತು ಆರನೇ ಶ್ರೇಯಾಂಕದ ಮೀರಾ ಆಂದ್ರೀವಾ ಅವರಿಗೆ ಆಘಾತ ನೀಡಿದ್ದರು. ಸೆಮಿಫೈನಲ್‌ನಲ್ಲಿ ಅಮೆರಿಕದ ಕೊಕೊ ಗಾಫ್ ಅವರಿಗೆ ಮಣಿದಿದ್ದರು. ಈ ಸಾಧನೆಯಿಂದಾಗಿ ವಸ್ಪೂನ್, ಜೂನ್ ಎರಡನೇ ವಾರ ಪ್ರಕಟವಾದ ಡಬ್ಲ್ಯುಟಿಎ ಬ್ಯಾಂಕಿಂಗ್‌ನಲ್ಲಿ 361ನೇ ಸ್ಥಾನದಿಂದ 65ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದರು.

Category
ಕರಾವಳಿ ತರಂಗಿಣಿ