image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕರ್ನಾಟಕದ ಕುಸ್ತಿಪಟುಗಳಿಗೆ ನಾಗುರದಲ್ಲಿ ನಡೆದ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಒಂದು ಚಿನ್ನ ಸೇರಿ ಐದು ಪದಕ

ಕರ್ನಾಟಕದ ಕುಸ್ತಿಪಟುಗಳಿಗೆ ನಾಗುರದಲ್ಲಿ ನಡೆದ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಒಂದು ಚಿನ್ನ ಸೇರಿ ಐದು ಪದಕ

ಬೆಂಗಳೂರು: ಕರ್ನಾಟಕದ ಉದಯೋನ್ಮುಖ ಕುಸ್ತಿಪಟುಗಳು ನಾಗುರದಲ್ಲಿ ಈಚೆಗೆ ನಡೆದ 15 ವರ್ಷದೊಳಗಿನವರ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಒಂದು ಚಿನ್ನ ಸೇರಿದಂತೆ ಐದು ಪದಕಗಳನ್ನು ಗೆದ್ದಿದ್ದಾರೆ. ಕರ್ನಾಟಕದ ತೈಮ್ಮೆಶಿ ಜಿ.ಎಂ. ಅವರು ಗ್ರೀಕೊ-ರೋಮನ್ 62 ಕೆ.ಜಿ ವಿಭಾಗದ ಫೈನಲ್‌ನಲ್ಲಿ 6-1ರಿಂದ ಮಹಾರಾಷ್ಟ್ರದ ದರ್ಪ್ಸ್ ಚೌಧರಿ ವಿರುದ್ಧ ಗೆದ್ದು, ಚಿನ್ನಕ್ಕೆ ಕೊರಳೊಡ್ಡಿದರು.

ಮಹಿಳಾ ಕುಸ್ತಿ ವಿಭಾಗದಲ್ಲಿ ಸುಶ್ಮಿತಾ ಕಮ್ಮಾರ್ (36 ಕೆ.ಜಿ) ಬೆಳ್ಳಿ ಪದಕ ಗೆದ್ದರು. ಫ್ರೀಸ್ಟೈಲ್ ಕುಸ್ತಿಯಲ್ಲಿ (52 ಕೆ.ಜಿ) ಮೋಹನ್‌ ರಾಜ್, ಗ್ರೀಕೊ-ರೋಮನ್ (48 ಕೆ.ಜಿ) ವಿಭಾಗದಲ್ಲಿ ಯಂಕಪ್ಪ ಕೂಡಗಿ, ಮಹಿಳಾ ಕುಸ್ತಿ (50 ಕೆ.ಜಿ) ವಿಭಾಗದಲ್ಲಿ ಪುಷ್ಪಾ ನಾಯಕ್ ಅವರು ಕಂಚಿನ ಪದಕ ಜಯಿಸಿದರು. ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್‌ಐ) ಆಶ್ರಯದಲ್ಲಿ ಮಹಾರಾಷ್ಟ್ರ ಕುಸ್ತಿಗಿರಿ ಸಂಘವು ಜೂನ್ 20 ರಿಂದ 22ರವರೆಗೆ ಈ ಟೂರ್ನಿಯನ್ನು ನಾಗುರದಲ್ಲಿ ಆಯೋಜಿಸಿತ್ತು.

Category
ಕರಾವಳಿ ತರಂಗಿಣಿ