ಬೆಂಗಳೂರು: ಆಕಾಶ್ ಅಶೋಕಕುಮಾರ್ ಮತ್ತು ಗೀತಾ ಪೂಜಾರಿ ಅವರು ಇಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯ ಬ್ಯಾಂಕಿಂಗ್ ಟೆನ್‌ಪಿನ್ ಬೌಲಿಂಗ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷ ಮತ್ತು ಮಹಿಳಾ ವಿಭಾಗಗಳಲ್ಲಿ ಮುನ್ನಡೆ ಸಾಧಿಸಿದರು. ಅಮೀಬಾ ಬೌಲಿಂಗ್ ಸೆಂಟರ್‌ನಲ್ಲಿ ನಡೆಯುತ್ತಿರುವ ಟೂರ್ನಿಯ ಮೊದಲ ಸುತ್ತಿನಲ್ಲಿ ಆಕಾಶ್ 1198 ಅಂಕ ಗಳಿಸಿದರು. ಗೀತಾ 950 ಅಂಕ ಸಂಗ್ರಹಿಸಿದರು.
ಪುರುಷರ ಫಲಿತಾಂಶ: ಆಕಾಶ್ ಅಶೋಕ್ (1198)-1, ಪರ್ವೇಜ್ ಅಹಮದ್ (1090)-2, ಅನುರಾಗ್ ಪೋದ್ದಾರ್ (1057)-3, ಚಿರಾಗ್ ಕಾಶಿ (1043)-4 ಮಹಿಳೆಯರ ಫಲಿತಾಂಶ : ಗೀತಾ ಪೂಜಾರಿ (950)-1,ಜೆ. ಪ್ರೀಮಲ್ (940)-2, ಹಿತಾಶಾ. (934)-3, ಸ್ವಾತಿ ನಾಯಕ್ (962)- 4