image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸಾಕ್ಷ್ಯಾ ಸಂತೋಷ್, ಅರ್ಣವ್ ಮಿಥುನ್, ಕೆ.ಎಸ್.ಸಾಯಿ ಪ್ರಶಾಂತ್ ಮತ್ತು ಸಾತ್ವಿಕ್ ಎಂ. ಗೆ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿ

ಸಾಕ್ಷ್ಯಾ ಸಂತೋಷ್, ಅರ್ಣವ್ ಮಿಥುನ್, ಕೆ.ಎಸ್.ಸಾಯಿ ಪ್ರಶಾಂತ್ ಮತ್ತು ಸಾತ್ವಿಕ್ ಎಂ. ಗೆ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿ

ಬೆಂಗಳೂರು: ಸಾತ್ವಿಕ್ ಎಂ. ಮತ್ತು ಸಾಕ್ಷ್ಯಾ ಸಂತೋಷ್ ಅವರು ಕರ್ನಾಟಕ ರಾಜ್ಯ ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ 13 ವರ್ಷದೊಳಗಿನವರ ಬಾಲಕ ಮತ್ತು ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್‌ಗಳಾಗಿ ಹೊರಹೊಮ್ಮಿದರು. ನಗರದ ವಿ.ವಿ.ಪುರಂನ ಮ್ಯಾಚ್ ಪಾಯಿಂಟ್ ಅಕಾಡೆಮಿಯಲ್ಲಿ ಟೂರ್ನಿಯ ಕೊನೆಯ ದಿನವಾದ ಭಾನುವಾರ ಫೈನಲ್ ಪಂದ್ಯದಲ್ಲಿ ಸಾತ್ವಿಕ್ 12-10, 11-13, 8-11, 11-6, 11-80 ರಿಂದ ಎಂ. ಸಿದ್ಧಾಂತ್ ರನ್ನು ಸೋಲಿಸಿದರು. ಸೆಮಿಫೈನಲ್‌ನಲ್ಲಿ ಸಾತ್ವಿಕ್ 11-8, 11-8, 13-15, 11-8ರಿಂದ ಅಂಕುಶ್ ಬಾಳಿಗಾ ವಿರುದ್ಧ ಸಿದ್ಧಾಂತ್ 5-11, 11-8, 6-11, 12-10, 11-9805 ಸುಚೇತ್ ಸಿ. ವಿರುದ್ಧ ಗೆಲುವು ಸಾಧಿಸಿದರು.

ಬಾಲಕಿಯರ ಫೈನಲ್‌ನಲ್ಲಿ ಸಾಕ್ಷ್ಯಾ 11-7, 11-6, 11-4ರಿಂದ ಮಿಹಿಕಾ ಆ‌ರ್.ಉಡುಪ ಅವರನ್ನು ಮಣಿಸಿದರು. ಸೆಮಿಫೈನಲ್ ನಲ್ಲಿ 2 11-7, 11-6, 10-12, 14-12ರಿಂದ ವಿಭಾ ಟಿ. ಎದುರು; ಸಾಕ್ಷ್ಯಾ 11-6, 11-9, 11-9ರಿಂದ ಯುಕ್ತಾ ಹರ್ಷ ಎದುರು ಜಯ ಸಾಧಿಸಿದರು. ಹೋಪ್ಸ್ ಬಾಲಕರ ವಿಭಾಗದಲ್ಲಿ ಅರ್ಣವ್ ಮಿಥುನ್ ಮತ್ತು ಬಾಲಕಿಯರ ವಿಭಾಗದಲ್ಲಿ ಸಾಕ್ಷ್ಯಾ ಸಂತೋಷ್ ಪ್ರಶಸ್ತಿ ಗೆದ್ದರು. ಅರ್ಣವ್ 11-4, 12-10, 9-11, 11-9ರಿಂದ ಶರ್ವಿಲ್ ಕೆ. ವಿರುದ್ಧ ಗೆಲುವು ಸಾಧಿಸಿದರು. ಪ್ರಶಸ್ತಿ ಸುತ್ತಿನಲ್ಲಿ 11-4, 11-5, 11-8ರಿಂದ ನಂದನ ಬಂಡಿ ಅವರನ್ನು ಮಣಿಸಿದರು.

Category
ಕರಾವಳಿ ತರಂಗಿಣಿ