ಹೈದರಾಬಾದ್: ಐಸಿಸಿ ಪ್ರಶಸ್ತಿಗಳನ್ನು ಗೆಲ್ಲುವಲ್ಲಿ ಪ್ರತಿ ಬಾರಿಯೂ ಎಡವುತ್ತಿದ್ದ ತಂಡವು, ಚೋಕರ್ಸ್ ಎಂಬ ಹಣೆಪಟ್ಟಿ ಕಟ್ಟಿಕೊಂಡಿತ್ತು. ತಾಳ್ಮೆ, ಶ್ರಮ, ಕೌಶಲ್ಯ ಇದ್ದರೆ ಒಂದಲ್ಲಾ ಒಂದು ದಿನ ಗೆದ್ದೇ ಗೆಲ್ಲುತ್ತೇವೆ ಎಂಬುದಕ್ಕೆ ದಕ್ಷಿಣ ಆಫ್ರಿಕಾ ತಂಡವೇ ಮಾದರಿ. ತಂಡದ ಆಟಗಾರರನ್ನೂ ಚೋಕರ್ಸ್ ಎಂದು ಅಭಿಮಾನಿಗಳು ಹೀಯಾಳಿಸಿದ್ದು ಇತಿಹಾಸ. ಅವಮಾನ, ನೋವುಗಳನ್ನು ಮೆಟ್ಟಿನಿಂತ ಹರಿಣಗಳ ತಂಡವು ಕೊನೆಗೂ ಕ್ರಿಕೆಟ್ ಲೋಕದಲ್ಲಿ ತಾನೂ ಕಿಂಗ್ ಎಂಬುದನ್ನು ಸಾಬೀತು ಮಾಡಿತು. 2025ರ ವಿಶ್ವ ಟೆಸ್ಟ್ ಚಾಂಪಿಯನ್ ಫೈನಲ್ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಸೋಲಿಸುವ ಮೂಲಕ ಕ್ಲಾಸ್ ಕ್ರಿಕೆಟ್ಗೆ ಬಾಸ್ ಆಗಿ ಹೊರಹೊಮ್ಮಿತು.
ವಿಶ್ವದ ಬಲಿಷ್ಠ ತಂಡಗಳಲ್ಲಿ ದಕ್ಷಿಣ ಆಫ್ರಿಕಾ ಕೂಡ ಒಂದು. ಗ್ರೇಮ್ ಸ್ಮಿತ್, ಡೇಲ್ ಸ್ಟೇಯ್ನ್, ಎಬಿ ಡಿವಿಲಿಯರ್ಸ್, ಗ್ಯಾರಿ ಕಸ್ಟರ್ನ್, ಜಾಕ್ ಕಾಲಿಸ್, ಶಾನ್ ಪೊಲಾಕ್ ಅವರಂತಹ ದಿಗ್ಗಜ ಕ್ರಿಕೆಟಿಗರು ದೇಶಕ್ಕಾಗಿ ಆಡಿ ನಿವೃತ್ತರಾದರೂ, ಐಸಿಸಿ ಟ್ರೋಫಿಯನ್ನು ಗೆಲ್ಲಿಸಿಕೊಡುವಲ್ಲಿ ಮಾತ್ರ ವಿಫಲವಾಗಿದ್ದರು. ತಂಡದ ಕೌಶಲ್ಯದಲ್ಲಿ ಸಮಸ್ಯೆ ಇಲ್ಲವಾದರೂ ಫೈನಲ್ ಫೋಬಿಯಾ ಮಾತ್ರ ಅವರನ್ನು ಬಿಟ್ಟಿರಲಿಲ್ಲ. ದಕ್ಷಿಣ ಆಫ್ರಿಕಾ ತಂಡವು ಐಸಿಸಿ ಟ್ರೋಫಿಗಳ ಗೆಲುವಿನ ಸಮೀಪಕ್ಕೆ ಬಂದು ಸೋಲು ಕಾಣುವ ಮೂಲಕ ಪ್ರಶಸ್ತಿ ವಂಚಿತವಾಗುತ್ತಿತ್ತು. ಪ್ರಶಸ್ತಿಯ ಗೆಲುವಿನ ಅಂಚಿನಲ್ಲಿ ಎಡವಿದ್ದೆಷ್ಟು ಎಂಬುದನ್ನು ನಾವಿಲ್ಲಿ ನೋಡೋಣ.
ಇದು ನಿಜಕ್ಕೂ ಕ್ರಿಕೆಟ್ ಲೋಕದ ದರೋಡೆ ಎಂದೇ ಕುಖ್ಯಾತಿಯಾಗಿದೆ. ಅಂದಿನ ವಿಶ್ವಕಪ್ ಫೈನಲ್ನಲ್ಲಿ 253 ರನ್‌ಗಳ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾಕ್ಕೆ ಗೆಲುವಿಗೆ 13 ಎಸೆತಗಳಲ್ಲಿ 22 ರನ್ ಬೇಕಾಗಿದ್ದವು. ಈ ವೇಳೆ ಸುರಿಯಿತು. ಡಕ್ವರ್ಥ್ ಲೂಯಿಸ್ ನಿಯಮದಂತೆ ತಂಡಕ್ಕೆ 1 ಎಸೆತದಲ್ಲಿ ಅಸಾಧ್ಯವಾದ 22 ರನ್ ಗುರಿ ನೀಡಲಾಯಿತು. ಮಳೆ ಮತ್ತು ತಾಂತ್ರಿಕ ಲೆಕ್ಕಾಚಾರ ತಂಡದ ಗೆಲುವನ್ನೇ ಕಸಿಯಿತು. ಈ ಟೂರ್ನಿಯಲ್ಲೂ ತಂಡದ ಅದೃಷ್ಟ ಕೆಟ್ಟಿತ್ತು. ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ತಂಡವು ಫೈನಲ್ಗೇರಲು 4 ಎಸೆತಗಳಲ್ಲಿ 1 ರನ್ ಗಳಿಸಿದ್ದರೆ ಸಾಕಿತ್ತು. ಕೈಯಲ್ಲಿ 1 ವಿಕೆಟ್ ಮಾತ್ರ ಬಾಕಿ ಇತ್ತು. ಈ ವೇಳೆ ಆಟಗಾರರ ತಪ್ಪು ನಡೆಯಿಂದಾಗಿ ರನೌಟ್ ಆಗುವ ಮೂಲಕ ತಂಡವು ಫೈನಲ್ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಯಿತು. ಆಸ್ಟ್ರೇಲಿಯಾ ಫೈನಲ್ ತಲುಪಿತು.