image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ರಾಜ್ಯಮಟ್ಟದ ವಿಜಯನಗರ ಕಪ್ ಅಂಧರ ಮುಕ್ತ ಚೆಸ್ ಟೂರ್ನಿಯಲ್ಲಿ ಮೂರನೇ ಸುತ್ತಿಗೆ ಕೃಷ್ಣ ಉಡುಪ ಮತ್ತು ವೃತಿ ಜೈನ್ ಪ್ರವೇಶ...

ರಾಜ್ಯಮಟ್ಟದ ವಿಜಯನಗರ ಕಪ್ ಅಂಧರ ಮುಕ್ತ ಚೆಸ್ ಟೂರ್ನಿಯಲ್ಲಿ ಮೂರನೇ ಸುತ್ತಿಗೆ ಕೃಷ್ಣ ಉಡುಪ ಮತ್ತು ವೃತಿ ಜೈನ್ ಪ್ರವೇಶ...

ವಿಜಯನಗರ : ಶಿವಮೊಗ್ಗದ ಕೃಷ್ಣ ಉಡುಪ ಮತ್ತು ವೃತಿ ಜೈನ್ ಅವರು ಇಲ್ಲಿನ ಸೇವಿಯರ್ ಅಂಗವಿಕಲರ ಸೇವಾ ಸಮಿತಿಯು ರೋಟರಿ ಕ್ಲಬ್ ಸಹಯೋಗದಲ್ಲಿ ಹಮ್ಮಿಕೊಂಡಿರುವ ನಾಲ್ಕನೇ ರಾಜ್ಯಮಟ್ಟದ ವಿಜಯನಗರ ಕಪ್ ಅಂಧರ ಮುಕ್ತ ಚೆಸ್ ಟೂರ್ನಿಯಲ್ಲಿ ಮೂರನೇ ಸುತ್ತು ಪ್ರವೇಶಿಸಿದ್ದಾರೆ. ಪುರುಷರ ವಿಭಾಗದಲ್ಲಿ 15 ಮಂದಿ ಹಾಗೂ ಮಹಿಳೆಯರ ವಿಭಾಗದಲ್ಲಿ 5 ಮಂದಿ ಮೂರನೇ ಸುತ್ತು ಪ್ರವೇಶಿಸಿದ್ದಾರೆ. ಈ ಪೈಕಿ 10 ಮಂದಿ ಅಂತರರಾಷ್ಟ್ರೀಯ ಶ್ರೇಯಾಂಕಿತರಾಗಿದ್ದಾರೆ. ಒಟ್ಟು 120 ಮಂದಿ ಸ್ಪರ್ಧಿಗಳು ವಿವಿಧ ಜಿಲ್ಲೆಗಳಿಂದ ಪಾಲ್ಗೊಂಡಿದ್ದಾರೆ. ಸೋಮವಾರ ಟೂರ್ನಿಯು ಕೊನೆಗೊಳ್ಳಲಿದೆ.

ಪುರುಷ ಸ್ಪರ್ಧಾಳುಗಳು

1.ಕೃಷ್ಣ ಉಡುಪ, ಶಿವಮೊಗ್ಗ, 2.ದೊಡ್ಡಿ ಶ್ರಾವಿಕಾ, ಶ್ರೀ ಶಾರದಾದೇವಿ ಸಂಸ್ಥೆ,ಶಿವಮೊಗ್ಗ. 3.ಶಿವನಗೌಡ ಎನ್‌.ಎಂ., ಧಾರವಾಡ. 4.ಜ್ಯೋತಿ ಬಿ.,ಬೆಂಗಳೂರು. 5.ರಮೇಶ್ ಎ.ಆ‌ರ್., ಬೆಂಗಳೂರು. 6.ಕಾರ್ತಿಕ್ ಎಂ.ಜೆ., ಬೆಂಗಳೂರು. 7.ಕಾರ್ತಿಕ್ ಡಿ., ಬೆಂಗಳೂರು. 8. ಲಿಂಗರಾಜು, ಮೈಸೂರು. 9.ಲಕ್ಷ್ಮೀಕಾಂತ್ ಎ.ಸಿಂಪಿ, ಕಲಬುರ್ಗಿ.10.ರವಿಕಿರಣ್, ಬೆಂಗಳೂರು.

ಮಹಿಳಾ ಸ್ಪರ್ಧಾಳುಗಳು

1.ಗಂಗವ್ವ, ಸನಾತನಂ ಟ್ರಸ್ಟ್‌, ಧಾರವಾಡ. 2.ಶಶಿಧರ ಕೆ.ಎಂ., ಮೈಸೂರು. 3.ಕೆಂಚಪ್ಪ ಸನಾತನಂ ಟ್ರಸ್ಟ್‌, ಧಾರವಾಡ. 4.ಕಿರಣ್ ಕುಮಾರ್ ಎ.ಸಿಂಪಿ, ಕಲಬುರ್ಗಿ. 5. ರವೀಶ್ ಪಿ.ಎಸ್., ಕೋಲಾರ. 6.ವೃತಿ ಜೈನ್, ಶಿವಮೊಗ್ಗ. 7.ಧರ್ಮರಾಜು, ತುಮಕೂರು. 8.ಸಚಿನ್ ಜಾಧವ್, ಹುಬ್ಬಳ್ಳಿ. 9.ನವೀನ್ ಮೆರ್ವಾಡೆ, ಗದಗ. 10.ಸಂಗಮೇಶ್, ಶ್ರೀ ಶಾರದಾದೇವಿ ಟ್ರಸ್ಟ್‌, ಶಿವಮೊಗ್ಗ ಭಾಗವಹಿಸಿದ್ದಾರೆ.

Category
ಕರಾವಳಿ ತರಂಗಿಣಿ