image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಟೇಬಲ್ ಟೆನಿಸ್ ನಲ್ಲಿ ಅಭಿನವ್ ಕೆ.ಮೂರ್ತಿ ಗೆ ಪುರುಷರ ಸಿಂಗಲ್ಸ್ ಪ್ರಶಸ್ತಿ ಮತ್ತು ವೇದಾಲಕ್ಷ್ಮಿಗೆ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿ

ಟೇಬಲ್ ಟೆನಿಸ್ ನಲ್ಲಿ ಅಭಿನವ್ ಕೆ.ಮೂರ್ತಿ ಗೆ ಪುರುಷರ ಸಿಂಗಲ್ಸ್ ಪ್ರಶಸ್ತಿ ಮತ್ತು ವೇದಾಲಕ್ಷ್ಮಿಗೆ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿ

ಬೆಂಗಳೂರು: ಅಭಿನವ್ ಕೆ.ಮೂರ್ತಿ ಅವರು ತೀವ್ರ ಹೋರಾಟದ ಪಂದ್ಯದಲ್ಲಿ ವಿಭಾಸ್ ವಿ.ಜಿ ಅವರನ್ನು ಸೋಲಿಸಿ ಕರ್ನಾಟಕ ರಾಜ್ಯ ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಗುರುವಾರ ಪುರುಷರ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡರು. ಮಹಿಳೆಯರ ಸಿಂಗಲ್ಸ್ ಪ್ರಶಸ್ತಿ ವೇದಾಲಕ್ಷ್ಮಿ ಡಿ.ಕೆ. ಅವರ ಪಾಲಾಯಿತು.

19 ವರ್ಷದೊಳಗಿನವ ಸಿಂಗಲ್ಸ್‌ನಲ್ಲಿ ಬುಧವಾರ ಚಾಂಪಿಯನ್‌ ಆಗಿದ್ದ ಅಭಿನವ್, ವಿ.ವಿ.ಪುರಂನ ಮ್ಯಾಚ್ ಪಾಯಿಂಟ್ ಅಕಾಡೆಮಿಯಲ್ಲಿ ನಡೆದ ಟೂರ್ನಿಯ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ವಿಭಾಸ್ ಅವರನ್ನು 9-11, 11-7, 9-11, 9-11, 11-9, 11-7, 13-11 ರಿಂದ ಸೋಲಿಸಿದರು. ಸೆಮಿಫೈನಲ್‌ನಲ್ಲಿ ಪಂದ್ಯಗಳಲ್ಲಿ ವಿಭಾಸ್ 11-7, 10-12, 6-11, 11-7, 7-11, 11-7, 13-11 ಆಕಾಶ್ ಕೆ.ಜೆ. ಅವರನ್ನು ಸೋಲಿಸಿದರೆ, ಅಭಿನವ್ 11-5, 11-5, 11-9, 11-7 ರಿಂದ ಕೆ.ಕಲೈವಣ್ಣನ್‌ ಅವರನ್ನು ಹಿಮ್ಮೆಟ್ಟಿಸಿದರು.

ಮಹಿಳೆಯ ಸಿಂಗಲ್ಸ್ ಫೈನಲ್‌ನಲ್ಲಿ ವೇದಾಲಕ್ಷ್ಮಿ 9-11, 14-12, 12-10, 11-5, 11-9 00 2 ಸೋಲಿಸಿದರು. ಸೆಮಿಫೈನಲ್ ಪಂದ್ಯಗಳಲ್ಲಿ ವೇದಾಲಕ್ಷ್ಮಿ 11-7, 7-11, 11-9, 3-11, 11-4, 11-5 00 & 22; 2 8-11, 10-12, 6-11, 11-9, 12-10, 11-9, 11-8 ರಿಂದ ನೀತಿ ಅಗರವಾಲ್ ವಿರುದ್ಧ ಜಯಗಳಿಸಿದ್ದರು.

Category
ಕರಾವಳಿ ತರಂಗಿಣಿ