ಸ್ಟುಟ್‌ಗಾರ್ಟ್: ಭಾರತದ ಅಗ್ರ ಡಬಲ್ಸ್ ಆಟಗಾರನಾಗಿರುವ ಯುಕಿ ಭಾಂಬ್ರಿ ಮತ್ತು ಅವರ ಅಮೆರಿಕದ ಜೊತೆಗಾರ ರಾಬರ್ಟ್ ಗ್ಯಾಲೊವೆ ಅವರು ಬಾಸ್ ಓಪನ್ ಟೆನಿಸ್ ಟೂರ್ನಿಯ ಡಬಲ್ಸ್ ಪ್ರಿಕ್ವಾರ್ಟ‌್ರಫೈನಲ್‌ನಲ್ಲಿ ಸೋಲುವ ಮೊದಲು ತೀವ್ರ ಪ್ರತಿರೋಧ ಪ್ರದರ್ಶಿಸಿದರು.
ಪಂದ್ಯದಲ್ಲಿ ಇಂಡೊ- ಅಮೆರಿಕನ್ ಜೋಡಿ 6-7 (5), 6-7 (5) ರಿಂದ ಸಾಂಟಿಯಾಗೋ ಗೊನ್ಸಾಲ್ವಝ್ (ಮೆಕ್ಸಿಕೊ)- ಆಸ್ಟಿನ್ ಕ್ರಾಯಿಚೆಕ್ ಜೋಡಿಗೆ ಮಣಿಯಿತು. ಈ ಪಂದ್ಯ 1 ಗಂಟೆ 34 ನಿಮಿಷ ನಡೆಯಿತು. ಅನುಭವಿ ರೋಹನ್ ಬೋಪಣ್ಣ- ಸ್ಯಾಂಡರ್ಸ್ ಗಿಲ್ (ಬೆಲ್ಡಿಯಂ) ಜೋಡಿ, ಶ್ರೀರಾಮ್ ಬಾಲಾಜಿ- ಮಿಗೆಲ್ ರೆಯಿಸ್ ವರೆಲಾ (ಮೆಕ್ಸಿಕೊ) ಜೋಡಿ ಕೂಡ ಈ ಟೂರ್ನಿಯಲ್ಲಿ ಕಣಕ್ಕಿಳಿದಿದೆ.