image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಧೋನಿ ಸೇರಿದಂತೆ 7 ಮಂದಿಗೆ ಐಸಿಸಿ 'ಹಾಲ್‌ ಆಫ್‌ ಫೇಮ್' ಗೌರವ

ಧೋನಿ ಸೇರಿದಂತೆ 7 ಮಂದಿಗೆ ಐಸಿಸಿ 'ಹಾಲ್‌ ಆಫ್‌ ಫೇಮ್' ಗೌರವ

ಲಂಡನ್‌: ಭಾರತ ತಂಡದ ಮಾಜಿ ನಾಯಕ ಎಂ.ಎಸ್‌ ಧೋನಿ ಸೇರಿದಂತೆ 7 ಮಂದಿ, ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ (ಐಸಿಸಿ) ಹಾಲ್ ಆಫ್ ಫೇಮ್ ಗೌರವಕ್ಕೆ ಪಾತ್ರರಾಗಿದ್ದಾರೆ. ಲಂಡನ್‌ನಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಐವರು ಪುರುಷರು ಮತ್ತು ಇಬ್ಬರು ಮಹಿಳಾ ಕ್ರಿಕೆಟಿಗರು ಸೇರಿ ಒಟ್ಟು ಏಳು ಮಂದಿಯನ್ನು ಐಸಿಸಿ '2025ರ ಹಾಲ್ ಆಫ್ ಫೇಮ್'ಗೆ ಸೇರಿಸಿದೆ. ಧೋನಿ ಅವರ ಅದ್ಭುತ ನಾಯಕತ್ವ, ಸ್ಮರಣೀಯ ವೃತ್ತಿಜೀವನ ಮತ್ತು ಕ್ರಿಕೆಟ್‌ಗೆ ನೀಡಿದ ಕೊಡುಗೆಗಾಗಿ ಈ ಗೌರವವನ್ನು ನೀಡಲಾಗಿದೆ ಎಂದು ಐಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ. 

ಧೋನಿ ಅವರ ನಾಯಕತ್ವದಲ್ಲಿ ಭಾರತ 2007ರ ಟಿ-20 ವಿಶ್ವಕಪ್, 2011ರ ಏಕದಿನ ವಿಶ್ವಕಪ್ ಮತ್ತು 2013ರ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದು ಬೀಗಿತ್ತು. 2004ರಲ್ಲಿ ಭಾರತ ಪರ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಧೋನಿ ಅವರು, 90 ಟೆಸ್ಟ್ ಪಂದ್ಯಗಳಲ್ಲಿ 4876 ರನ್, 350 ಏಕದಿನ ಪಂದ್ಯಗಳಲ್ಲಿ 10,773 ರನ್ (ಇದರಲ್ಲಿ 10 ಶತಕ, 73 ಅರ್ಧಶತಕ ಸೇರಿವೆ) ಮತ್ತು 98 ಟಿ-20 ಪಂದ್ಯಗಲ್ಲಿ 1,617 ರನ್‌ಗಳನ್ನು ಕಲೆಹಾಕಿದ್ದಾರೆ. ಇನ್ನು ವಿಕೆಟ್ ಕೀಪರ್ ಆಗಿ 824 ವಿಕೆಟ್ ಗಬಳಿಸಿದ್ದಾರೆ.

2019ರ ಏಕದಿನ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ ಕೊನೆ ಬಾರಿ ಭಾರತವನ್ನು ಪ್ರತಿನಿಧಿಸಿದ್ದ ಧೋನಿ, 2020ರಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು. ಕ್ರಿಕೆಟ್‌ನ ಅತ್ಯುನ್ನತ ಸಂಸ್ಥೆಯಾದ ಐಸಿಸಿ 2009ರಲ್ಲಿ ಹಾಲ್ ಆಫ್ ಫೇಮ್ ಅನ್ನು ಆರಂಭಿಸಿತು. ಕ್ರಿಕೆಟ್ ಅನ್ನು ಹೊಸ ಎತ್ತರಕ್ಕೆ ಕೊಂಡೊಯ್ದ ಗಣ್ಯರನ್ನು ಈ ಕ್ಲಬ್‌ನಲ್ಲಿ ಸೇರಿಸಲಾಗುತ್ತದೆ. ಇಲ್ಲಿಯವರೆಗೆ ಒಟ್ಟು 115 ಕ್ರಿಕೆಟಿಗರನ್ನು ಹಾಲ್‌ ಆಫ್ ಫೇಮ್‌ಗೆ ಸೇರಿಸಲಾಗಿದೆ. 2025ರ ಹಾಲ್ ಆಫ್ ಫೇಮ್ ಗೌರವಕ್ಕೆ ಪಾತ್ರರಾದವರು ಮಹೇಂದ್ರ ಸಿಂಗ್ ಧೋನಿ, ಗ್ರೇಮ್ ಸ್ಮಿತ್ -ದಕ್ಷಿಣ ಆಫ್ರಿಕಾ, ಹಾಶಿಮ್ ಆಮ್ಲಾ-ದಕ್ಷಿಣ ಆಫ್ರಿಕಾ, ಮ್ಯಾಥ ಹೇಡನ್-ಆಸ್ಟ್ರೇಲಿಯಾ, ಡೇನಿಯಲ್ ವೆಟ್ಟೋರಿ- ನ್ಯೂಜಿಲೆಂಡ್, ಸಾರಾ ಟೇಲರ್-ಇಂಗ್ಲೆಂಡ್, ಸನಾ ಮಿರ್ -ಪಾಕಿಸ್ತಾನ.

Category
ಕರಾವಳಿ ತರಂಗಿಣಿ