ಪ್ಯಾರಿಸ್: ದಾಖಲೆ ಅವಧಿಯ ಫೈನಲ್ ಪಂದ್ಯದಲ್ಲಿ, ಭಾನುವಾರ ಅಮೋಘವಾಗಿ ಪ್ರತಿ ಹೋರಾಟ ತೋರಿದ ಹಾಲಿ ಚಾಂಪಿ ಯನ್ ಕಾರ್ಲೋಸ್ ಅಲ್ಕರಾಜ್ ಅವರು 4-6, 6-7 (4-7), 6-4, 7-6 (7-3), 7-6 (10-2)80 ಅಗ್ರ ಶ್ರೇಯಾಂಕದ ಯಾನಿಕ್ ಸಿನ್ನರ್ ಅವರನ್ನು ಸೋಲಿಸಿ, ಫ್ರೆಂಚ್ ಓಪನ್ ಟೆನಿಸ್ ಪುರುಷರ ಸಿಂಗಲ್ಸ್ ಪ್ರಶಸ್ತಿ ಗೆದ್ದುಕೊಂಡರು. ಮೊದಲೆರಡು ಸೆಟ್ ಕಳೆದುಕೊಂಡ ಸ್ಪೇನ್ ಆಟಗಾರ ನಂತರ ಮೂರು ಬಾರಿ ಮ್ಯಾಚ್ ಪಾಯಿಂಟ್ ರಕ್ಷಿಸಿ ಸೋಲಿನಂಚಿನಿಂದ ಪಾರಾದರು. ಬಳಿಕ, ದಿಟ್ಟ ಆಟವಾಡಿ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಈ ಪಂದ್ಯ 5 ಗಂಟೆ 29 ನಿಮಿಷ ನಡೆದಿದ್ದು, ಫ್ರೆಂಚ್ ಓಪನ್ ಟೂರ್ನಿಯ ಓಪನ್ ಯುಗದ ದಾಖಲೆಯಾಗಿದೆ.
1982ರ ಫೈನಲ್‌ನಲ್ಲಿ, ಸ್ವೀಡನ್‌ನ ಮ್ಯಾಟ್ಸ್ ವಿಲಾಂಡರ್ ಅವರು ಅರ್ಜೆಂಟೀನಾದ ಗಿಲೆರ್ಮೊ ವಿಲಾಸ್ ವಿರುದ್ಧ 4 ಗಂಟೆ 42 ನಿಮಿಷ ನಡೆದಿದ್ದ ಪಂದ್ಯದಲ್ಲಿ ಗೆಲುವು ದಾಖಲಿಸಿದ್ದು ಈವರೆಗಿನ ದಾಖಲೆಯಾಗಿತ್ತು. ಸರ್ಬಿಯಾದ ದಿಗ್ಗಜ ನೊವಾಕ್ ಜೊಕೊವಿಚ್ ಅವರನ್ನು ಮಣಿಸಿ, ರೋಲ್ಯಾಂಡ್ ಗ್ಯಾರೋಸ್‌ನಲ್ಲಿ ಮೊದಲ ಬಾರಿ ಫೈನಲ್‌ಗೇರಿದ್ದ ಸಿನ್ನರ್ ನಿರಾಶೆ ಅನುಭವಿಸಬೇಕಾಯಿತು. ಅವರು, ಗ್ರಾನ್ ಸ್ಲಾಮ್ ಫೈನಲ್‌ನಲ್ಲಿ ಇದೇ ಮೊದಲ ಬಾರಿಗೆ ಸೋಲನುಭವಿಸಿದರು.
ರೋಲಂಡ್ ಗ್ಯಾರೋಸ್‌ನಲ್ಲಿ 2024 ರಲ್ಲೂ ಚಾಂಪಿಯನ್ ಆಗಿದ್ದ ಅಲ್ಕರಾಜ್‌ಗೆ ಇದು ಐದನೇ ಟ್ರ್ಯಾನ್‌ಸ್ಲಾಮ್ ಪ್ರಶಸ್ತಿಯಾಗಿದೆ. ಒಲಿಂಪಿಕ್ಸ್ ಚಿನ್ನದ ಪದಕವಿಜೇತ ಆಟಗಾರ್ತಿ ಸಾರಾ ಎರಾನಿ ಮತ್ತು ಜಾಸ್ಮಿನ್ ಪಾವೊಲಿನಿ ಫ್ರೆಂಚ್ ಓಪನ್ ಮಹಿಳಾ ವಿಭಾಗದ ಪ್ರಶಸ್ತಿಯನ್ನು ಮೊದಲ ಸಲ ಗೆದ್ದರು.