ಪ್ಯಾರಿಸ್ : ಸರ್ಬಿಯಾದ ನೊವಾಕ್ ಜೊಕೊವಿಚ್ 3 4 5 2 4-6, 6-3, 6-2, 6-4 ರಿಂದ ಮೂರನೇ ಶ್ರೇಯಾಂಕದ ಜರ್ಮನಿಯ ಆಟಗಾರ ಅಲೆಕ್ಸಾಂಡರ್ ಜ್ವರೇವ್ ಅವರನ್ನು ಸೋಲಿಸಿ ರೋಲೆಂಡ್ ಗ್ಯಾರೋಸ್‌ನಲ್ಲಿ ಪುರುಷರ ಸಿಂಗಲ್ಸ್ ಸೆಮಿಫೈನಲ್ ತಲುಪಿದರು.
ಮೂರೂಕಾಲು ಗಂಟೆಗಳ ದೀರ್ಘ ಸೆಣಸಾಟದಲ್ಲಿ ಗೆದ್ದು, 38 ವರ್ಷ ವಯಸ್ಸಿನ ಜೊಕೊವಿಚ್ ದಾಖಲೆಯ 25ನೇ ಗ್ರಾನ್‌ಸ್ಲಾಮ್ ಪ್ರಶಸ್ತಿಗೆ ಇನ್ನಷ್ಟು ಸನಿಹವಾದರು. ಜೊಕೊವಿಚ್ ಅವರಿಗೆ ಫ್ರೆಂಚ್ ಓಪನ್‌ನಲ್ಲಿ 101ನೇ ಪಂದ್ಯದ ಗೆಲುವು ಇದಾಗಿದೆ.
ಮೂರು ಬಾರಿಯ ಚಾಂಪಿಯನ್ ಜೊಕೊವಿಚ್ ಶುಕ್ರವಾರ ನಡೆಯ ಲಿರುವ ಸೆಮಿಫೈನಲ್‌ನಲ್ಲಿ ವಿಶ್ವದ ಅಗ್ರಮಾನ್ಯ ಆಟಗಾರ ಇಟಲಿಯ ಯಾನಿಕ್ ಸಿನ್ನರ್ ಅವರನ್ನು ಎದುರಿಸಲಿದ್ದಾರೆ. ಹಾಲಿ ಚಾಂಪಿಯನ್, ಎರಡನೇ ಶ್ರೇಯಾಂಕದ ಕಾರ್ಲೋಸ್ ಅಲ್ಕರಾಜ್ ಇನ್ನೊಂದು ಸೆಮಿಫೈನಲ್ ನಲ್ಲಿ ಲೊರೆಂಜೊ ಮುಸೆಟ್ಟಿ (ಇಟಲಿ) ಅವರನ್ನು ಎದುರಿಸಲಿದ್ದಾರೆ.