image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ರಾಲೆಂಡ್ ಗ್ಯಾರೋಸ್‌ ಅಂಗಣದಲ್ಲಿ 99ನೇ ಗೆಲುವಿನೊಂದಿಗೆ ಫ್ರೆಂಚ್ ಓಪನ್ ನಲ್ಲಿ ಜೊಕೊವಿಚ್ 4ನೇ ಸುತ್ತಿಗೆ ಲಗ್ಗೆ

ರಾಲೆಂಡ್ ಗ್ಯಾರೋಸ್‌ ಅಂಗಣದಲ್ಲಿ 99ನೇ ಗೆಲುವಿನೊಂದಿಗೆ ಫ್ರೆಂಚ್ ಓಪನ್ ನಲ್ಲಿ ಜೊಕೊವಿಚ್ 4ನೇ ಸುತ್ತಿಗೆ ಲಗ್ಗೆ

ಪ್ಯಾರಿಸ್: ದಾಖಲೆಯ 25ನೇ ಟ್ರ್ಯಾನ್‌ಸ್ಲಾಮ್ ಪ್ರಶಸ್ತಿಯ ಹುಡುಕಾಟದಲ್ಲಿರುವ ಸರ್ಬಿಯಾದ ತಾರೆ ನೊವಾಕ್ ಜೊಕೊವಿಚ್, ಪ್ರತಿಷ್ಠಿತ ಫ್ರೆಂಚ್ ಓಪನ್‌ ಟ್ರ್ಯಾನ್‌ಸ್ಲಾಮ್ ಟೆನಿಸ್ ಟೂರ್ನಿಯಲ್ಲಿ ನಾಲ್ಕನೇ ಸುತ್ತಿಗೆ ಪ್ರವೇಶಿಸಿದ್ದಾರೆ. ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಆರನೇ ಶ್ರೇಯಾಂಕಿತ ಜೊಕೊವಿಚ್ ಅವರು ಆಸ್ಟ್ರೀಯಾದ ಫಿಲಿಪ್ ಮಿಸೋಲಿಕ್ ವಿರುದ್ಧ 6-3, 6-4, 6-2ರ ನೇರ ಸೆಟ್‌ಗಳಲ್ಲಿ ಗೆದ್ದು ಪ್ರಿ-ಕ್ವಾರ್ಟ‌್ರಗೆ ಮುನ್ನಡೆದಿದ್ದಾರೆ.

ಇದರೊಂದಿಗೆ ಮೂರು ಬಾರಿಯ ಚಾಂಪಿಯನ್ ಜೊಕೊವಿಚ್‌, ರಾಲೆಂಡ್ ಗ್ಯಾರೋಸ್‌ ಅಂಗಣದಲ್ಲಿ 99 ಗೆಲುವುಗಳ ಸಾಧನೆ ಮೆರೆದಿದ್ದಾರೆ. 2016, 2021 ಹಾಗೂ 2023ನೇ ಸಾಲಿನಲ್ಲಿ ಜೊಕೊವಿಚ್‌ ಚಾಂಪಿಯನ್‌ ಆಗಿದ್ದರು.

Category
ಕರಾವಳಿ ತರಂಗಿಣಿ