ಮಾಂಟೆ ಕಾರ್ಲೊ: ಕರ್ನಾಟಕದ ಕುಶ್ ಮೈನಿ ಅವರು ಇಲ್ಲಿ ನಡೆದ ಐಕಾನಿಕ್ ಮೊನಾಕೊ ಗ್ರಾನ್‌ಪ್ರಿ ಫಾರ್ಮುಲಾ 2 ಸ್ಪಿಂಟ್ ರೇಸ್‌ನಲ್ಲಿ ಪ್ರಶಸ್ತಿ ಗೆದ್ದರು. ಈ ಮೂಲಕ ವಿಶ್ವದ ಅತ್ಯಂತ ಪ್ರತಿಷ್ಠಿತ ಟ್ರ್ಯಾಕ್‌ನಲ್ಲಿ ಜಯ ಸಾಧಿಸಿದ ಭಾರತದ ಮೊದಲ ರೇಸರ್ ಎನ್ನುವ ಹೆಗ್ಗಳಿಕೆಗೆ ಪಾತ್ರರಾದರು. ಮೈನಿ ಋತುವಿನ ಮೊದಲ ಎಫ್2 ಗೆಲುವು ಮತ್ತು ಡ್ಯಾಮ್ಸ್ ಲ್ಯೂಕಾಸ್ ಆಯಿಲ್‌ನೊಂದಿಗೆ ತಮ್ಮ ಮೊದಲ ಪೋಡಿಯಂ ಫಿನಿಷ್ ಮಾಡಿದರು. ಮೊನಾಕೊದ ಕೋಟ್ ಡಿ'ಅಜುರ್‌ನಲ್ಲಿ ರೇಸ್ ನಡೆಯಿತು.
ಬಿಡಬ್ಲ್ಯೂಟಿ ಆಲೈನ್ ಎಫ್ 1 ತಂಡದ ಮೀಸಲು ಚಾಲಕನಾಗಿರುವ ಕುಶ್ ಮೈನಿ, ರೇಸ್‌ದುದ್ದಕ್ಕೂ ತಮ್ಮ ನಿಯಂತ್ರಣ ಮತ್ತು ಕಾರ್ಯತಂತ್ರದಲ್ಲಿ ನಿಖರತೆಯನ್ನು ಪ್ರದರ್ಶಿಸಿದರು. ಈ ಗೆಲುವಿನೊಂದಿಗೆ ಮುಂದಿನ ಫೀಚರ್ ಪಿ-10 ರೇಸ್‌ಗೂ ಅರ್ಹತೆ ಪಡೆದರು. ಪಿ1 ಮತ್ತು ಮೊನಾಕೊದಲ್ಲಿ ಗೆದ್ದ ಮೊದಲ ಭಾರತೀಯನಾಗಿರುವುದು ನಿಜಕ್ಕೂ ವಿಶೇಷ ಗೌರವ ಮತ್ತು ಕನಸು ನನಸಾದ ಕ್ಷಣ. ಬೆಂಬಲಿಸಿದ ಎಲ್ಲರಿಗೂ ಧನ್ಯವಾದ ಹೇಳುತ್ತೇನೆ ಎಂದು ಗೆಲುವಿನ ನಂತರ ಕುಶ್ ಮೈನಿ ಪ್ರತಿಕ್ರಿಯಿಸಿದರು.