image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಅಡ್ರಿಯಾನ್ ಕರ್ಮಾಕ‌ರ್ ಗೆ ಐಎಸ್‌ಎಸ್‌ಎಫ್‌ ಜೂನಿಯರ್ ವಿಶ್ವ ಕಪ್ ಶೂಟಿಂಗ್ ಕೂಟದಲ್ಲಿ ಕಂಚಿನ ಪದಕ

ಅಡ್ರಿಯಾನ್ ಕರ್ಮಾಕ‌ರ್ ಗೆ ಐಎಸ್‌ಎಸ್‌ಎಫ್‌ ಜೂನಿಯರ್ ವಿಶ್ವ ಕಪ್ ಶೂಟಿಂಗ್ ಕೂಟದಲ್ಲಿ ಕಂಚಿನ ಪದಕ

ಜರ್ಮನಿ : ಅಡ್ರಿಯಾನ್ ಕರ್ಮಾಕ‌ರ್ ಅವರು ಐಎಸ್‌ಎಸ್‌ಎಫ್‌ ಜೂನಿಯರ್ ವಿಶ್ವ ಕಪ್ ಶೂಟಿಂಗ್ ಕೂಟದ 50 ಮೀ. ರೈಫಲ್ 3 ಪೊಸಿಷನ್ಸ್ ಸ್ಪರ್ಧೆಯಲ್ಲಿ ಶುಕ್ರವಾರ ಕಂಚಿನ ಪದಕ ಗೆದ್ದುಕೊಂಡರು. ಭಾರತ ಪದಕ ಪಟ್ಟಿಯಲ್ಲಿ ಅಗ್ರಸ್ಥಾನ ಉಳಿಸಿಕೊಂಡಿದೆ.

ಮೊದಲ ಬಾರಿ ವಿಶ್ವಕಪ್‌ನಲ್ಲಿ ಪಾಲ್ಗೊಂಡಿರುವ 20 ವರ್ಷ ವಯಸ್ಸಿನ ಅಡ್ರಿಯಾನ್ 446.6 ಪಾಯಿಂಟ್ಸ್ ಕಲೆಹಾಕಿದರು. ಮಾಜಿ ವಿಶ್ವ ಜೂನಿಯ‌ರ್ ಚಾಂಪಿಯನ್ ರೊಮೇನ್ ಅಪ್ರೇರ್ (459.7) ಚಿನ್ನದ ಪದಕ ಗೆದ್ದುಕೊಂಡರೆ, ಎರಡು ಬಾರಿಯ ಪ್ರೋನ್ ಜೂನಿಯರ್ ವಿಶ್ವ ಚಾಂಪಿಯನ್ ಜೆನ್ಸ್ ಒಸೆಟ್ಲಿ ಬೆಳ್ಳಿ (459.1) ತಮ್ಮದಾಗಿಸಿಕೊಂಡರು.

ಅಡ್ರಿಯಾನ್‌ಗೆ ಇದು ಎರಡನೇ ಪದಕ. ಮೊದಲ ದಿನ 50 ಮೀ. ರೈಫಲ್ ಪ್ರೋನ್ ಸ್ಪರ್ಧೆಯಲ್ಲಿ ಬೆಳ್ಳಿ ಗೆದ್ದಿದ್ದರು. ಮೂರು ದಿನಗಳ ಸ್ಪರ್ಧೆಗಳ ನಂತರ ಭಾರತ ಒಂದು ಚಿನ್ನ, ಎರಡು ಬೆಳ್ಳಿ, ಒಂದು ಕಂಚಿನ ಪದಕ ಗೆದ್ದುಕೊಂಡಿದೆ.

Category
ಕರಾವಳಿ ತರಂಗಿಣಿ