image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ದೋಹಾ ಡೈಮಂಡ್ ಲೀಗ್ ನಲ್ಲಿ ನೀರಜ್‌ಗೆ ಪ್ರಶಸ್ತಿ ಗೆಲ್ಲುವ ಸವಾಲು

ದೋಹಾ ಡೈಮಂಡ್ ಲೀಗ್ ನಲ್ಲಿ ನೀರಜ್‌ಗೆ ಪ್ರಶಸ್ತಿ ಗೆಲ್ಲುವ ಸವಾಲು

ದೋಹಾ: ಜಾವೆಲಿನ್ ತಾರೆ ನೀರಜ್ ಚೋಪ್ರಾ ಅವರು ಡೈಮಂಡ್ ಲೀಗ್ ಕೂಟದಲ್ಲಿ ಉತ್ತಮ ಆರಂಭ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಇಲ್ಲಿ ಅವರಿಗೆ ಪರಿಚಿತರಾಗಿರುವ ಪ್ರಬಲ ಎದುರಾಳಿಗಳ ಕಣವಿದೆ. ಚೋಪ್ರಾ ಅವರಿಗೆ ಇಲ್ಲಿ ಎರಡು ಬಾರಿಯ ವಿಶ್ವ ಚಾಂಪಿಯನ್, ಗ್ರೆನೆಡಾದ ಆ್ಯಂಡರ್ಸನ್‌ ಪೀಟರ್ಸ್, 2024ರ ವಿಜೇತರಾದ ಝಕ್ ಗಣರಾಜ್ಯದ ಯಾಕುಬ್ ವಾಡ್ಲೆಚ್, ಜರ್ಮನಿಯ ಜೂಲಿಯನ್ ವೇಬರ್ ಮತ್ತು ಮ್ಯಾಕ್ಸ್ ದೆಕ್ಕಿಂಗ್, ಕೆನ್ಯಾದ ಜೂಲಿಯಸ್ ಯೆಗೊ ಮತ್ತು ಜಪಾನ್‌ನ ಗೆಂಕಿ ಡೀನ್ ಅವರಿಂದ ಸವಾಲು ಎದುರಾಗಲಿದೆ. 2024ರ ಪ್ಯಾರಿಸ್‌ ಒಲಿಂಪಿಕ್ ಚಾಂಪಿಯನ್ ಅರ್ಷದ್ ನದೀಮ್ ಇಲ್ಲಿ ಭಾಗವಹಿಸುತ್ತಿಲ್ಲ.

ಭಾರತದ ಇನ್ನೊಬ್ಬ ಸ್ಪರ್ಧಿ ಕಿಶೋರ್ ಜೇನಾ ಅವರೂ 11 ಮಂದಿಯ ಕಣದಲ್ಲಿದ್ದಾರೆ. ಆದರೆ ಇತ್ತೀಚಿನ ತಿಂಗಳಲ್ಲಿ ಅವರು ಉತ್ತಮ ಲಯದಲ್ಲಿಲ್ಲ. ಹೋದ ವರ್ಷ ಜೇನಾ ಇಲ್ಲಿ 76.31 ಮೀ. ಪ್ರೊದೊಡನೆ 9ನೇ ಸ್ಥಾನ ಪಡೆದಿದ್ದರು. ಅವರ ವೈಯಕ್ತಿಕ ಶ್ರೇಷ್ಠ ಸಾಧನೆ 87.54 ಮೀ. ಕಳೆದ ವರ್ಷ ವಿಜೇತರಾದ ವಾಡ್ಲೆಚ್ ಈಟಿಯನ್ನು 88.38 ಮೀ. ದೂರ ಎಸೆದಿದ್ದರು. 2023ರ ಆವೃತ್ತಿಯಲ್ಲಿ 88.67 ಮೀ. ಪ್ರೊ ಮೂಲಕ ಇಲ್ಲಿ ಚಾಂಪಿಯನ್ ಆಗಿದ್ದ ನೀರಜ್ ಚೋಪ್ರಾ, ಕಳೆದ ವರ್ಷ 88.36 ಮೀ. ದಾಖಲಿಸಿ ಎರಡನೇ ಸ್ಥಾನ ಪಡೆದಿದ್ದರು. ಚೋಪ್ರಾ ಅವರಿಗೆ ಈಗ ಹಲವು ಬಾರಿಯ ಒಲಿಂಪಿಕ್ ಚಾಂಪಿಯನ್ ಯಾನ್ ಝಲೆಜಿ ಕೋಚ್ ಆಗಿದ್ದಾರೆ.

 

Category
ಕರಾವಳಿ ತರಂಗಿಣಿ