image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಅಂಧರ ಟಿ-20ಯಲ್ಲಿ ಭಾರತಕ್ಕೆ ಸತತ ಎರಡನೇ ಜಯ

ಅಂಧರ ಟಿ-20ಯಲ್ಲಿ ಭಾರತಕ್ಕೆ ಸತತ ಎರಡನೇ ಜಯ

ಚಿಕ್ಕಬಳ್ಳಾಪುರ: ಎ.ರವಿ ಅವರ ಶತಕದ (131, 82 ಎಸೆತ) ನೆರವಿನಿಂದ ಭಾರತ ತಂಡವು, ತಾಲ್ಲೂಕಿನ ಮುದ್ದೇ ನಹಳ್ಳಿಯ ಸಾಯಿ ಕೃಷ್ಣನ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಅಂಧರ ಟಿ-20 ಕ್ರಿಕೆಟ್ ಸರಣಿಯ ಎರಡನೇ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 65 ರನ್‌ಗಳಿಂದ ಸೋಲಿಸಿತು. ಈ ಗೆಲುವಿನಿಂದ ಭಾರತ ಸರಣಿಯಲ್ಲಿ 2-0 ಮುನ್ನಡೆ ಪಡೆಯಿತು. ಟಾಸ್ ಗೆದ್ದ ಮೊದಲು ಬ್ಯಾಟಿಂಗ್ ಮಾಡಿದ 3 ವಿಕೆಟ್‌ಗೆ 215 ರನ್ ಗಳಿಸಿತು. ರವಿ ಅವರಿಗೆ ಸೋನು ರಾವತ್ (25), ಲೋಕೇಶ್ (22) ಬೆಂಬಲ ನೀಡಿದರು. ಈ ಮೊತ್ತ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ಮುಕೇಶ್ ಕುಮಾರ್ ರಾವತ್ (35ಕ್ಕೆ3) ಮತ್ತು ಮನೀಶ್ ಕುಮಾರ್ (8ಕ್ಕೆ2) ಅವರ ದಾಳಿಗೆ ತತ್ತರಿಸಿ 9 ವಿಕೆಟ್‌ಗೆ 150 ರನ್‌ ಗಳಿಸಲಷ್ಟೇ ಶಕ್ತವಾಯಿತು. ಎ.ರವಿ ಪಂದ್ಯ ಶ್ರೇಷ್ಠ ಗೌರವಕ್ಕೆ ಪಾತ್ರರಾದರು.

Category
ಕರಾವಳಿ ತರಂಗಿಣಿ