ಜೋರ್ಡನ್: ಭಾರತದ ಉದಯೋನ್ಮುಖ ಬಾಕ್ಸರ್‌ಗಳು ಇಲ್ಲಿ ನಡೆದ ಜೂನಿಯರ್ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ(junior Asian championship) ಕೊನೆಯ ದಿನವಾದ ಗುರುವಾರ 17 ವರ್ಷದೊಳಗಿನವರ ವಿಭಾಗದಲ್ಲಿ ನಾಲ್ಕು ಚಿನ್ನದ ಪದಕಗಳನ್ನು ಗೆದ್ದು, ಪದಕ(medal) ಪಟ್ಟಿಯಲ್ಲಿ ಎರಡನೇ ಸ್ಥಾನದೊಂದಿಗೆ ಅಭಿಯಾನ ಮುಗಿಸಿದರು.
ಕೂಟದಲ್ಲಿ ಭಾರತವು 15 ಚಿನ್ನ, 6 ಬೆಳ್ಳಿ ಮತ್ತು 22 ಕಂಚಿನ ಪದಕವನ್ನು ಗೆದ್ದಿದೆ. ಪದಕ ಪಟ್ಟಿಯಲ್ಲಿ ಕಜಕಸ್ತಾನ ಅಗ್ರಸ್ಥಾನ(first place) ಪಡೆದರೆ, ಉಜೈಕಿಸ್ತಾನ ಮೂರನೇ ಸ್ಥಾನ ಗಳಿಸಿತು. 17 ವರ್ಷದೊಳಗಿನವರ ವಿಭಾಗದಲ್ಲಿ ಭಾರತದ ಸ್ಪರ್ಧಿಗಳು ನಾಲ್ಕು ಚಿನ್ನ ಗೆದ್ದರು. ಈ ಎಲ್ಲಾ ಪದಕಗಳು ಬಾಲಕಿಯರೇ ಜಯಿಸಿದ್ದು ವಿಶೇಷ.
ಖುಷಿ ಚಂದ್ (46 ಕೆ.ಜಿ) ಫೈನಲ್ ಹಣಾಹಣಿಯಲ್ಲಿ 3-2 ಅಂತರದಿಂದ ಮಂಗೋಲಿಯಾದ ಅಂಜುಲ್ ಅಂಗದಾಸ್ ಅವರನ್ನು ಮಣಿಸಿದರು. ಅಹಾನಾ ಶರ್ಮಾ (50 ಕೆ.ಜಿ) ಮತ್ತು ಜನ್ನತ್ (54 ಕೆ.ಜಿ) ಅವರು ತಲಾ 5-0 ಅಂತರದಿಂದ ಉಜ್ಜಕಿಸ್ತಾನದ ಎದುರಾಳಿಗಳ ವಿರುದ್ಧ ಗೆಲುವು ಸಾಧಿಸಿದರು. ಅಂತಿಮ ಚಿನ್ನವನ್ನು ಅನ್ನಿಕಾ (80 + ಕೆ.ಜಿ) ಗೆದ್ದರು. ಅವರು ಜೋರ್ಡಾನ್‌ನ ಜನ ಅಲಮ್ನಹ್ ಎದುರು ವಿಜಯಶಾಲಿಯಾದರು.