image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಹಾಕಿ : ಆಸ್ಟ್ರೇಲಿಯಾಕ್ಕೆ ಮಣಿದ ಭಾರತದ ವನಿತೆಯರು

ಹಾಕಿ : ಆಸ್ಟ್ರೇಲಿಯಾಕ್ಕೆ ಮಣಿದ ಭಾರತದ ವನಿತೆಯರು

ಪರ್ತ್‌: ಭಾರತದ ವನಿತೆಯರು ಹಾಕಿ(hockey) ಪಂದ್ಯದಲ್ಲಿ 0-2 ಗೋಲುಗಳಿಂದ ಆಸ್ಟ್ರೇಲಿಯಾ ವಿರುದ್ಧ ಪರಾಭವಗೊಂಡರು. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ ಆತಿಥೇಯ ತಂಡವು 1-0 ಮುನ್ನಡೆ ಪಡೆಯಿತು.

ಪರ್ತ್ ಹಾಕಿ ಕ್ರೀಡಾಂಗಣದಲ್ಲಿ(perth hockey ground) ನಡೆದ ಪಂದ್ಯದಲ್ಲಿ ಹರೇಂದ್ರ ಸಿಂಗ್ ಮಾರ್ಗದರ್ಶನದ ಭಾರತ ತಂಡವು ಕಠಿಣ ಹೋರಾಟ ನಡೆಸಿದರೂ, ಎದುರಾಳಿ ತಂಡದ ಸಾಂಘಿಕ ಆಟದ ಮುಂದೆ ನಿರುತ್ತರರಾದರು.

ಪಂದ್ಯದ ಒಂಬತ್ತನೇ ನಿಮಿಷದಲ್ಲಿ ಕೋರ್ಟ್ನ ಸ್ಕೋನೆಲ್ ಅವರು ಫೀಲ್ಡ್ ಗೋಲು(field goal) ಮೂಲಕ ಆತಿಥೇಯ ತಂಡಕ್ಕೆ ಮುನ್ನಡೆ ಒದಗಿಸಿದರು. ಎರಡು ಮತ್ತು ಮೂರನೇ ಕ್ವಾರ್ಟ‌್ರನಲ್ಲಿ ಯಾವುದೇ ತಂಡಕ್ಕೆ ಗೋಲು ಸಿಗಲಿಲ್ಲ. ಕೊನೆಯ ಕಾರ್ಟ‌್ರನಲ್ಲಿ ಗ್ರೇಸ್ ಸ್ಟೀವರ್ಟ್ (52ನೇ ನಿಮಿಷ) ಚೆಂಡನ್ನು ಗುರಿ ಸೇರಿಸಿ ಆಸ್ಟ್ರೇಲಿಯಾ ತಂಡದ ಮುನ್ನಡೆಯನ್ನು ಹೆಚ್ಚಿಸಿದರು.

ಇದಕ್ಕೂ ಮೊದಲು ಎರಡು ಅಭ್ಯಾಸ ಪಂದ್ಯದಲ್ಲಿ ಭಾರತ ತಂಡವು ಕ್ರಮವಾಗಿ 3–5, 2-3ರಿಂದ ಆಸ್ಟ್ರೇಲಿಯಾ(Australia) 'ಎ' ವಿರುದ್ಧ ಸೋತಿತ್ತು. ಆಸ್ಟ್ರೇಲಿಯಾದ ಪ್ರಮುಖ ತಂಡದ ವಿರುದ್ಧವೂ ಸಲೀಮಾ ಟೆಟೆ ಬಳಗ ನಿರಾಸೆ ಅನುಭವಿಸಿತು. ಎರಡನೇ ಕ್ವಾರ್ಟ‌್ರನಲ್ಲಿ ಸಿಕ್ಕ ಎರಡು ಪೆನಾಲ್ಟಿ ಕಾರ್ನ‌ರ್ ಅವಕಾಶವನ್ನು ಕೈಚೆಲ್ಲಿದ್ದು ಭಾರತಕ್ಕೆ ದುಬಾರಿಯಾಯಿತು. ಎರಡನೇ ಪಂದ್ಯ ಶನಿವಾರ ನಡೆಯಲಿದೆ.

Category
ಕರಾವಳಿ ತರಂಗಿಣಿ