ಮುಂಬೈ : ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೋಲನುಭವಿಸಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಆರ್‌ಸಿಬಿ ನೀಡಿದ್ದ 163 ರನ್ಗಳ ಸಾಮಾನ್ಯ ಗುರಿಯನ್ನು ಬೆನ್ನಟ್ಟಿದ ದೆಹಲಿ ತಂಡ 17.5 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ ಗುರಿಯನ್ನು ತಲುಪಿತು. ಇದರೊಂದಿಗೆ ಸತತ ನಾಲ್ಕನೇ ಪಂದ್ಯವನ್ನು ಗೆದ್ದುಕೊಂಡಿತು.
ಕನ್ನಡಿಗ ಕೆ.ಎಲ್.ರಾಹುಲ್ (93*) ಅದ್ಭುತ ಪ್ರದರ್ಶನ ನೀಡಿದರು. ಸ್ಟಬ್ಸ್ (38*) ಕೂಡ ಮಿಂಚಿದರು. ಬೆಂಗಳೂರು ಪರ ಭುವನೇಶ್ವರ್ ಕುಮಾರ್ 2 ವಿಕೆಟ್ ಪಡೆದರೆ, ಯಶ್ ದಯಾಳ್ ಮತ್ತು ಸುಯಾಶ್ ಶರ್ಮಾ ತಲಾ ಒಂದು ವಿಕೆಟ್ ಪಡೆದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಆರಂಭಿಕ 3.4 ಓವರ್ನಲ್ಲೆ ಸ್ಫೋಟಕ ಬ್ಯಾಟಿಂಗ್ ಮೂಲಕ 61 ರನ್ ಭಾರಿಸಿತು. ಆದರೆ, ಪವರ್ ಪ್ಲೇ ನಂತರ ಬೆಂಗಳೂರು ಸತತವಾಗಿ ವಿಕೆಟ್‌ಗಳನ್ನು ಕಳೆದುಕೊಂಡಿತು ಸಾಮಾನ್ಯ ಮೊತ್ತಕೆ ಕುಸಿಯಿತು.
ಆರಂಭಿಕ ಬ್ಯಾಟರ್ ಫಿಲಿಪ್ ಸಾಲ್ಟ್ (37) ವಿರಾಟ್ ಕೊಹ್ಲಿ (22) ಜೊತೆಗೂಡಿ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಿದರು. ರಜತ್ ಪಾಟಿದಾರ್ (25) ಮತ್ತು ಕೃನಾಲ್ ಪಾಂಡ್ಯ (18) ರನ್ ಗಳಿಸಿದರು.
ದೇವದತ್ ಪಡಿಕ್ಕಲ್ (1), ಲಿವಿಂಗ್‌ಸ್ಟನ್ (4) ಮತ್ತು ಜಿತೇಶ್ ಶರ್ಮಾ (3) ಒಂದು ಅಂಕಿಯ ಸ್ಕೋರ್‌ಗೆ ಸೀಮಿತರಾದರು. ಟಿಮ್ ಡೇವಿಡ್ (37*) ಕೊನೆಯಲ್ಲಿ ಮಿಂಚಿದ್ದರಿಂದ ಆರ್‌ಸಿಬಿ ತಂಡದ ಸ್ಕೋರ್ 150ರ ಗಡಿ ದಾಟಿತು.
ದೆಹಲಿ ಬೌಲರ್‌ಗಳಲ್ಲಿ ವಿಪ್ರಜ್ ನಿಗಮ್ 2 ವಿಕೆಟ್, ಕುಲದೀಪ್ ಯಾದವ್ 2, ಮುಖೇಶ್ ಕುಮಾರ್ ಮತ್ತು ಮೋಹಿತ್ ಶರ್ಮಾ ತಲಾ ಒಂದು ವಿಕೆಟ್ ಪಡೆದರು.