image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡ 25 ರನ್​ಗಳಿಂದ ಸೋಲು

ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡ 25 ರನ್​ಗಳಿಂದ ಸೋಲು

ಮುಂಬೈ : ಡೆಲ್ಲಿ ಕ್ಯಾಪಿಟಲ್ಸ್​ ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 25ರನ್​ಗಳಿಂದ ಸೋಲನುಭವಿಸಿದೆ. ಚೆನ್ನೈನ ತವರು ಮೈದಾನ ಚೆಪಾಕ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಚೆನ್ನೈ ವಿರುದ್ಧ 25 ರನ್‌ಗಳಿಂದ ಗೆಲುವು ಸಾಧಿಸಿದೆ. ಡೆಲ್ಲಿ ನೀಡಿದ್ದ 184 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಸಿಎಸ್​ಕೆ 158 ರನ್​ಗಳಿಗೆ ಸೀಮಿತವಾಯಿತು. ತಂಡದ ಪರ ವಿಜಯ್ ಶಂಕರ್ (69) ಏಕಾಂಗಿ ಹೋರಾಟ ಮಾಡಿದರು ಗೆಲುವು ದಕ್ಕಲಿಲ್ಲ.

ಆರಂಭಿಕರಾಗಿ ಬ್ಯಾಟಿಂಗ್​ಗೆ ಬಂದ ರಚಿನ್ ರವೀಂದ್ರ (3), ಡೆವೊನ್ ಕಾನ್ವೆ (13), ರುತುರಾಜ್ ಗಾಯಕ್ವಾಡ್ (5), ಶಿವಂ ದುಬೆ (18) ಮತ್ತು ರವೀಂದ್ರ ಜಡೇಜಾ (2)ರನ್ ಗಳಿಸಿದರು. ಎಂ.ಎಸ್. ಧೋನಿ (30*) ಅಜೇಯರಾಗಿ ಉಳಿದರು.

ದೆಹಲಿ ಬೌಲರ್‌ಗಳಲ್ಲಿ ವಿಪ್ರಾಜ್ ನಿಗಮ್ 2 ವಿಕೆಟ್ ಪಡೆದರೆ, ಮಿಚೆಲ್ ಸ್ಟಾರ್ಕ್, ಮುಖೇಶ್ ಕುಮಾರ್ ಮತ್ತು ಕುಲದೀಪ್ ಯಾದವ್ ತಲಾ ಒಂದು ವಿಕೆಟ್ ಪಡೆದರು. ಇದರೊಂದಿಗೆ ಡೆಲ್ಲಿ ತಂಡ ಈ ಋತುವಿನಲ್ಲಿ ಸತತ ಮೂರನೇ ಗೆಲುವು ದಾಖಲಿಸಿದರೆ ಆದರೆ ಚೆನ್ನೈ ತಂಡ ಹ್ಯಾಟ್ರಿಕ್ ಸೋಲನ್ನು ಕಂಡಿದೆ.

ಇದಕ್ಕೂ ಮುನ್ನ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಡೆಲ್ಲಿ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 183 ರನ್ ಗಳಿಸಿತು. ಕೆ.ಎಲ್. ರಾಹುಲ್ (77) ಸ್ಫೋಟಕ ಬ್ಯಾಟಿಂಗ್​ ಮೂಲಕ ಅರ್ಧಶತಕ ಸಿಡಿಸಿದರೆ.

ಅಭಿಷೇಕ್ ಪೊರೆಲ್ (33) ಕೂಡ ಮಿಂಚಿದರು. ಉಳಿದಂತೆ ಅಕ್ಷರ್ ಪಟೇಲ್ (21) ಮತ್ತು ಸಮೀರ್ ರಿಜ್ವಿ (20), ಟ್ರಿಸ್ಟಾನ್ ಸ್ಟಬ್ಸ್ (22*) ರನ್​ ಕೊಡಿಗೆ ನೀಡಿದರು. ಸಿಎಸ್‌ಕೆ ಪರ ಖಲೀಲ್ ಅಹ್ಮದ್ 2 ವಿಕೆಟ್ ಪಡೆದರೆ, ರವೀಂದ್ರ ಜಡೇಜಾ, ನೂರ್ ಅಹ್ಮದ್ ಮತ್ತು ಮತಿಶಾ ಪತಿರಾನ ತಲಾ ಒಂದು ವಿಕೆಟ್ ಪಡೆದರು.

ಆರಂಭಿಕರಾಗಿ ಬ್ಯಾಟಿಂಗ್​ಗೆ ಬಂದ ಕೆಎಲ್​ ರಾಹುಲ್​ ಚೆನ್ನೈ ಬೌಲರ್​ಗಳನ್ನು ಮನ ಬಂದಂತೆ ದಂಡಿಸಿದರು. ಆರಂಭದಿಂದಲ್ಲೂ ಬ್ಯಾಟ್​ ಬೀಸಿದ ರಾಹುಲ್​ 51 ಎಸೆತಗಳಲ್ಲಿ 6 ಬೌಂಡರಿ 3 ಸಿಕ್ಸರ್​ ಸಹಾಯದಿಂದ 77 ರನ್​ ಚಚ್ಚಿದರು. ಇದರಿಂದಾಗಿ ಡೆಲ್ಲಿ ತಂಡ ಸ್ಫರ್ಧಾತ್ಮಕ ಸ್ಕೋರ್​ ಕಲೆಹಾಕಿತು.

Category
ಕರಾವಳಿ ತರಂಗಿಣಿ