ಮುಂಬೈ : ಐಪಿಎಲ್ನ(ipl) 16ನೇ ಪಂದ್ಯದಲ್ಲಿ ಲಕ್ನೋ ಸೂಪರ್‌ಜೈಂಟ್ಸ್(Lucknow superjaints) ತಂಡ ಮುಂಬೈ ಇಂಡಿಯನ್ಸ್(mumbai indians) ತಂಡವನ್ನು 12 ರನ್‌ಗಳಿಂದ ಮಣಿಸಿದೆ. ಏಕಾನಾ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡು ಲಕ್ನೋಗೆ ಬ್ಯಾಟಿಂಗ್ಗೆ ಆಹ್ವಾನಿಸಿತು. ಮೊದಲು ಬ್ಯಾಟ್ ಮಾಡಿದ ಲಕ್ನೋ ಮಿಚೆಲ್ ಮಾರ್ಷ್ (60), ಮಾಕ್ರಮ್ (53) ಅವರ ಬ್ಯಾಟಿಂಗ್ ಸಹಾಯದಿಂದ 8 ವಿಕೆಟ್ ನಷ್ಟಕ್ಕೆ 203 ರನ್ ಗಳಿಸಿತು.
ಈ ಗುರಿಯನ್ನ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ತಂಡ ಅಂತಿಮ ವರೆಗೆ ಹೋರಾಟ ನಡೆಸಿದರು ಗೆಲುವು ಸಾದ್ಯವಾಗಲಿಲ್ಲ. ಅಂತಿಮ ಓವರ್ನಲ್ಲಿ ಮುಂಬೈ ತಂಡದ ಗೆಲುವಿಗೆ 22ರನ್ ಬೇಕಿತ್ತು. ಆದರೆ ನಾಯಕ ಹಾರ್ದಿಕ್ ಪಾಂಡ್ಯ(hardik pandya) ಕೊನೆಯಲ್ಲಿ ಬೌಂಡರಿ ಬಾರಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿ. ಈ ಓವರ್ನಲ್ಲಿ ಕೇವಲ 10 ರನ್ ಕಲೆಹಾಕಿ 12 ರನ್‌ಗಳಿಂದ ಮುಂಬೈ ತಂಡ ಸೋಲನುಭವಿಸಿತು.
ಬೌಲಿಂಗ್ನಲ್ಲಿ ಮುಂಬೈ ಪರ ಹಾರ್ದಿಕ್ 5 ವಿಕೆಟ್ ಕಬಳಿಸಿದರೇ, ಲಕ್ನೋ ಪರ ಶಾರ್ದೂಲ್ ಠಾಕೂರ್, ಆಕಾಶ್ ದೀಪ್, ಆವೇಶ್ ಖಾನ್, ದಿಗ್ವೇಶ್ ಸಿಂಗ್ ನಾಲ್ವರು ಬೌಲರ್‌ಗಳು ತಲಾ 1 ವಿಕೆಟ್ ಪಡೆದರು.