ಮುಂಬೈ : ಐಪಿಎಲ್(ipl) 2025ರ ಭಾಗವಾಗಿ ಗುರುವಾರ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ 80 ರನ್‌ಗಳಿಂದ ಭರ್ಜರಿ ಗೆಲುವು ಸಾಧಿಸಿದೆ. ಕೆಕೆಆರ್ ನೀಡಿದ್ದ 201 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಸನ್‌ರೈಸರ್ಸ್(sunrisers) 16.4 ಓವರ್‌ಗಳಲ್ಲಿ 120 ರನ್‌ಗಳಿಗೆ ಆಲೌಟ್(all out) ಆಯಿತು.
ಕ್ಲಾಸೆನ್ (33) ತಂಡದ ಪರ ಹೈಸ್ಕೋರರ್ ಎನಿಸಿಕೊಂಡರು. ಕಮಿಂದು ಮೆಂಡಿಸ್ 27 ರನ್ ಕಲೆಹಾಕಿದರು. ಆದರೆ ಉಳಿದ ಬ್ಯಾಟರ್ಗಳು ಅಲ್ಪಮೊತ್ತಕ್ಕೆ ಪೆವಿಲಿಯನ್(pevilion) ಸೇರಿದರು. ಕೋಲ್ಕತ್ತಾ ನೈಟ್ ರೈಡರ್ಸ್(Kolkata knight riders) ಪರ ವೈಭವ್ ಅರೋರಾ 3 ವಿಕೆಟ್, ವರುಣ್ ಚಕ್ರವರ್ತಿ 3, ರಸೆಲ್ 2, ಹರ್ಷಿತ್ ರಾಣಾ ಮತ್ತು ಸುನಿಲ್ ನರೈನ್ ತಲಾ ಒಂದು ವಿಕೆಟ್ ಪಡೆದರು.
ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 200 ರನ್ ಗಳಿಸಿತು. ತಂಡದ ಪರ ವೆಂಕಟೇಶ್ ಅಯ್ಯರ್ (60), ರಘು ವಂಶಿ (50), ಅಜಿಂಕ್ಯ ರಹಾನೆ (38) ಮತ್ತು ರಿಂಕು ಸಿಂಗ್ (32) ಸ್ಫೋಟಕ ಇನ್ನಿಂಗ್ಸ್ ಆಡಿದರು. ಅಯ್ಯರ್ 29 ಎಸೆತಗಳಲ್ಲಿ 60 ರನ್ (7 ಬೌಂಡರಿ, 3 ಸಿಕ್ಸರ್) ಬಾರಿಸಿದರು. ಹೈದರಾಬಾದ್ ಬೌಲರ್‌ಗಳಲ್ಲಿ ಮೊಹಮ್ಮದ್ ಶಮಿ, ಪ್ಯಾಟ್ ಕಮಿನ್ಸ್, ಜೀಶನ್ ಅನ್ಸಾರಿ, ಹರ್ಷಲ್ ಪಟೇಲ್ ಮತ್ತು ಕಮಿಂದು ಮೆಂಡಿಸ್ ತಲಾ ಒಂದು ವಿಕೆಟ್ ಪಡೆದರು.