image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

12ನೇ ಐಪಿಎಲ್‌ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 8 ವಿಕೆಟ್​ಗಳ ಭರ್ಜರಿ ಗೆಲುವು

12ನೇ ಐಪಿಎಲ್‌ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ 8 ವಿಕೆಟ್​ಗಳ ಭರ್ಜರಿ ಗೆಲುವು

ಮುಂಬೈ : ವಾಂಖೆಡೆ (wankhede) ಕ್ರೀಡಾಂಗಣದಲ್ಲಿ ನಡೆದ 12ನೇ ಐಪಿಎಲ್‌ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (kolkatta knight riders)ವಿರುದ್ಧ ಮುಂಬೈ ಇಂಡಿಯನ್ಸ್(mumbai indians) 8 ವಿಕೆಟ್​ಗಳ ಭರ್ಜರಿ ಗೆಲುವು ಸಾಧಿಸಿದೆ. ಇದರೊಂದಿಗೆ ಈ ಋತುವಿನಲ್ಲಿ ಮುಂಬೈ ತನ್ನ ಮೊದಲ ಗೆಲುವು ಸಾಧಿಸಿದೆ. ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್(KKR) ಸಾಧಾರಣ ಮೊತ್ತ ಕಲೆಹಾಕಿತು. ಈ ಗುರಿಯನ್ನು ಮುಂಬೈ 43 ಎಸೆತಗಳು ಬಾಕಿ ಇರುವಾಗಲೇ ಬೆನ್ನಟ್ಟಿತು.

ಟಾಸ್ ಗೆದ್ದ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ(HARDIK PANDYA) ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಇದರಿಂದ ಕೆಕೆಆರ್‌ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆಯಿತು. ಟ್ರೆಂಟ್ ಬೌಲ್ಟ್ ಎಸೆತದಲ್ಲಿ ಸುನಿಲ್ ನರೈನ್(sunil narine) ಕ್ಲೀನ್ ಬೌಲ್ಡ್ ಆದರು. ಇದರೊಂದಿಗೆ ಕೋಲ್ಕತ್ತಾ ಮೊದಲ ಓವರ್‌ನಲ್ಲಿಯೇ ಹಿನ್ನಡೆ ಅನುಭವಿಸಿತು. ಸುನಿಲ್ ನರೈನ್ ನಂತರ, ಕ್ವಿಂಟನ್ ಡಿ ಕಾಕ್ ಕೂಡ ವಿಕೆಟ್​ ಒಪ್ಪಿಸಿದರು. ದೀಪಕ್ ಚಹಾರ್(deepak chahar) ಅವರ ವಿಕೆಟ್ ಪಡೆದರು. ಇದರೊಂದಿಗೆ, ಕೋಲ್ಕತ್ತಾದ ಇಬ್ಬರೂ ಆರಂಭಿಕರು ಇನ್ನಿಂಗ್ಸ್‌ನ ಮೊದಲ 7 ಎಸೆತಗಳಲ್ಲಿ ಪೆವಿಲಿಯನ್‌ಗೆ(pavilion) ಮರಳಿದರು.

ಕೋಲ್ಕತ್ತಾ ನಾಯಕ ಅಜಿಂಕ್ಯ ರಹಾನೆ(ajinkya rahane) ಕೂಡ 7 ಎಸೆತಗಳಲ್ಲಿ 11 ರನ್ ಗಳಿಸಿ ಪೆವಿಲಿಯನ್​ಗೆ ಮರಳಿದರು. 10 ಓವರ್‌ಗಳ ಮುಗಿದಾಗ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 5 ವಿಕೆಟ್ ನಷ್ಟಕ್ಕೆ 69 ರನ್ ಗಳಿಸಿತು. ಅಂತಿಮವಾಗಿ ಕೋಲ್ಕತ್ತಾ ತಂಡ 16.2 ಓವರ್‌ಗಳಲ್ಲಿ 116 ರನ್‌ ಗಳಿಸಿ ಆಲೌಟ್‌ ಆಯಿತು.

ಗುರಿ ಬೆನ್ನತ್ತಿದ್ದ ಮುಂಬೈ ಎರಡು ವಿಕೆಟ್‌ ನಷ್ಟಕ್ಕೆ 121 ರನ್‌ ಗಳಿಸಿ ಗೆಲುವಿನ ನಗೆ ಬೀರಿತು. ಮುಂಬೈ ಪರ ರಯಾನ್ ರಿಕಲ್ಟನ್(reculton) 41 ಎಸೆತಗಳಲ್ಲಿ 62 ಚಚ್ಚಿದರು. ಸೂರ್ಯಕುಮಾರ್​ ಯಾದವ್​ ಕೇವಲ 9 ಎಸೆತಗಳಲ್ಲಿ 27 ಬಾರಿಸಿ ತಂಡದ ಗೆಲುವಿಗೆ ನೆರವಾದರು. ಮುಂಬೈ ತಂಡದ ಈ ಗೆಲುವಿನಲ್ಲಿ ವೇಗಿ ಅಶ್ವನಿ ಕುಮಾರ್(ashwini kumar) ಮತ್ತು ಆರಂಭಿಕ ಆಟಗಾರ ರಯಾನ್ ರಿಕಲ್ಟನ್ ಪ್ರಮುಖ ಪಾತ್ರ ವಹಿಸಿದರು.

ಮುಂಬೈ ಪರ ಬೌಲರ್ ಅಶ್ವನಿಕುಮಾರ್​ ಅವರು ನಾಲ್ಕು ವಿಕೆಟ್​ಗಳನ್ನು ಉರುಳಿಸುವ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜರಾದರು. ​

Category
ಕರಾವಳಿ ತರಂಗಿಣಿ