image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ರಾಜಸ್ಥಾನ ರಾಯಲ್​ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡಕ್ಕೆ ಸೋಲು

ರಾಜಸ್ಥಾನ ರಾಯಲ್​ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡಕ್ಕೆ ಸೋಲು

ಮುಂಬೈ :  ಕಂಡಿದೆ. ನಿನ್ನೆ ರಾಜಸ್ಥಾನ ರಾಯಲ್ ವಿರುದ್ಧದ ಪಂದ್ಯದಲ್ಲಿ 6 ರನ್​ಗಳಿಂದ ಪರಾಭವಗೊಂಡಿದೆ. ಇದು ಚೆನ್ನೈ ತಂಡದ ಸತತ ಎರಡನೇ ಸೋಲಾಗಿದೆ. ಇದಕ್ಕೂ ಮುನ್ನ ಶುಕ್ರವಾರ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ವಿರುದ್ಧ ತವರಿನಲ್ಲಿ ನಡೆದಿದ್ದ ಪಂದ್ಯದಲ್ಲೂ ಸೋಲು ಅನುಭವಿಸಿತ್ತು.

ಗುಹವಾಟಿಯ ಮೈದಾನದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ರಾಜಸ್ಥಾನ ನೀಡಿದ್ದ 183 ರನ್​ಗಳ ಗುರಿಯನ್ನು ಬೆನ್ನಟ್ಟಿದ ಚೆನ್ನೈ ತಂಡ ಆರಂಭದಿಂದಲೇ ಸಂಕಷ್ಟಕ್ಕೆ ಸಿಲುಕಿತು. ಮೊದಲ ಓವರ್‌ನಲ್ಲಿ ರಚಿನ್ ರವೀಂದ್ರ ಕ್ಲೀನ್​ ಬೋಲ್ಡ್​ ಆದ ಕಾರಣ ಚೆನ್ನೈ ತಂಡಕ್ಕೆ ಚೇಸಿಂಗ್ ಕಷ್ಟಕರವಾಯಿತು. ರಾಹುಲ್ ತ್ರಿಪಾಠಿ (23), ಶಿವಂ ದುಬೆ (18) ಉತ್ತಮ ಆಟವಾಡಿದರೂ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ಉಳಿಯಲು ಸಾಧ್ಯವಾಗಲಿಲ್ಲ. ವಿಜಯ್ ಶಂಕರ್ (9) ಕೂಡ ಹೀಗೆ ಬಂದು ಹಾಗೆ ತೆರಳಿದರು.

ಒಂದೆಡೆ ಸಿಎಸ್​ಕೆ ವಿಕೆಟ್​ ಕಳೆದುಕೊಳ್ಳುತ್ತಿದ್ದರೂ ರುತುರಾಜ್ ನಾಯಕನ ಇನ್ನಿಂಗ್ಸ್ ಆಡಿದರು. 44 ಎಸೆತಗಳಲ್ಲಿ 7 ಬೌಂಡರಿ ಮತ್ತು ಸಿಕ್ಸರ್​ ಸಹಾಯದಿಂದ ರುತುರಾಜ್ 63ರನ್​ ಬಾರಿಸಿದರು ಇದರೊಂದಿಗೆ ಅರ್ಧಶತಕ ಪೂರ್ಣಗೊಳಿಸಿದರು.

ಕೊನೆಯ 5 ಓವರ್‌ಗಳಲ್ಲಿ 61 ರನ್‌ಗಳು ಬೇಕಾಗಿದ್ದಾಗ, ಹಸರಂಗ ಬೌಲಿಂಗ್‌ನಲ್ಲಿ ಸಿಕ್ಸರ್ ಬಾರಿಸಿದ ರುತುರಾಜ್ ಮುಂದಿನ ಎಸೆತದಲ್ಲೇ ಔಟಾದರು ಇದರೊಂದಿಗೆ ತಂಡದ ಮೇಲೆ ಒತ್ತಡ ಹೆಚ್ಚಿತು. ನಂತರ, ಕ್ರೀಸ್‌ನಲ್ಲಿದ್ದ ಧೋನಿ ಮತ್ತು ಜಡೇಜಾ ಕೊನೆ ವರೆಗೂ ಹೋರಾಡಿದರು ತಂಡಕ್ಕೆ ಗೆಲುವ ಧಕ್ಕಲಿಲ್ಲ. ಸಂದೀಪ್​ ಶರ್ಮಾ ಎಸೆತದಲ್ಲಿ ಧೋನಿ ಔಟ್ ಆಗಿ ಪೆವಿಲಿಯನ್‌ಗೆ ಸೇರುತ್ತಿದ್ದಂತೆ ಚೆನ್ನೈ ತಂಡದ ಗೆಲುವಿನ ಭರವಸೆ ಹುಸಿಗೊಳಿಸಲಾಯಿತು.

ಇದಕ್ಕೂ ಮುನ್ನ ಟಾಸ್ ಸೋತು ಬ್ಯಾಟಿಂಗ್ ಆಯ್ದುಕೊಂಡ ರಾಜಸ್ಥಾನ ತಂಡ ಉತ್ತಮ ಸ್ಕೋರ್​ ಕಲೆಹಾಕಿತು. ನಿತೀಶ್ ರಾಣಾ (81) ಅವರ ಅದ್ಭುತ ಇನ್ನಿಂಗ್ಸ್‌ನೊಂದಿಗೆ ತಂಡವು 200+ ಸ್ಕೋರ್ ಗಳಿಸುವ ನಿರೀಕ್ಷೆಯಿತ್ತು, ಆದರೆ, ದ್ವಿತೀಯಾರ್ಧದಲ್ಲಿ ಎಡವಿತು. ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ (4) ಕೇವಲ ಸಿಂಗಲ್​ ಡಿಜಿಟ್​ಗೆ ಹಿನ್ನಡೆ ಅನುಭವಿಸಿ ನಿರಾಸೆ ಮೂಡಿಸಿದರು. ರಿಯಾನ್ ಪರಾಗ್ (37) ಕೂಡ ಮಿಂಚಿನ ಬ್ಯಾಟಿಂಗ್​ ನಡೆಸಿದ್ದು ತಂಡದ ಸ್ಕೋರ್​ ಹೆಚ್ಚಳಕ್ಕೆ ಕಾರಣವಾಯ್ತು.

Category
ಕರಾವಳಿ ತರಂಗಿಣಿ