image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ಆರ್​ಸಿಬಿಗೆ 50 ರನ್​ಗಳ ಗೆಲುವು

ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ಆರ್​ಸಿಬಿಗೆ 50 ರನ್​ಗಳ ಗೆಲುವು

ಮುಂಬೈ : ಐಪಿಎಲ್​ನ ಎಂಟನೇ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಭರ್ಜರಿ ಗೆಲುವು ಸಾಧಿಸಿದೆ. ಶುಕ್ರವಾರ ನಡೆದ ಈ ಪಂದ್ಯದಲ್ಲಿ RCB vs CSK ತಂಡಗಳು ಮುಖಾಮುಖಿ ಆಗಿದ್ದವು. ಈಹೈವೋಲ್ಟೆಜ್​ ಕದನದಲ್ಲಿ ಆರ್​ಸಿಬಿ ತಂಡ 50 ರನ್‌ಗಳಿಂದ ಸಿಎಸ್​ಕೆ ತಂಡವನ್ನು ಮಣಿಸಿತು. ಇದರೊಂದಿಗೆ ಬೆಂಗಳೂರು ತಂಡದ 17 ವರ್ಷದ ಕನಸು ನನಸಾಗಿದೆ.

ಚೆನ್ನೈನ ಭದ್ರಕೋಟಿ ಆಗಿರುವ ಚೆಪಾಕ್ ಕ್ರೀಡಾಂಗಣದಲ್ಲಿ ಬರೋಬ್ಬರಿ 17 ವರ್ಷಗಳ ನಂತರ ಆರ್​ಸಿಬಿ ತಂಡ ಸಿಎಸ್​ಕೆ ಪಡೆಯನ್ನು ಮಣಿಸಿ ಗೆಲುವಿನ ಬಾವುಟ ಹಾರಿಸಿದೆ. ಈ ಹಿಂದೆ ಐಪಿಎಲ್ 2008ರ​ ಚೊಚ್ಚಲ ಆವೃತ್ತಿಯಲ್ಲಿ ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ ಬೆಂಗಳೂರು ತಂಡವು ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಸಿಎಸ್‌ಕೆ ತಂಡವನ್ನು ಮಣಿಸಿತ್ತು.

ಈ ಪಂದ್ಯದಲ್ಲಿ ಟಾಸ್ ಗೆದ್ದ ಸಿಎಸ್‌ಕೆ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿತು. ಆದರೆ ಈ ಪ್ಲಾನ್​ ಅವರಿಗೆ ಕೈ ಹಿಡಿಯಲಿಲ್ಲ. ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಅಬ್ಬರದೊಂದಿಗೆ ಬ್ಯಾಟಿಂಗ್​ ಮಾಡಿತು. ಫಿಲ್​ ಸಾಲ್ಟ್​ (32), ವಿರಾಟ್​ ಕೊಹ್ಲಿ (31), ಪಡಿಕ್ಕಲ್ (27) ಅವರ ಬಿರುಸಿನ ಬ್ಯಾಟಿಂಗ್ ಮತ್ತು ನಾಯಕ ರಜತ್ ಪಾಟಿದಾರ್ ಅರ್ಧಶತಕದ ನೆರವಿನಿಂದ ಆರ್‌ಸಿಬಿ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 196 ರನ್ ಗಳಿಸಿತು.

ಈ ಗುರಿಯನ್ನು ಬೆನ್ನತ್ತಿದ ಸಿಎಸ್​ಕೆ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 146 ರನ್‌ಗಳಿಸಲಷ್ಟೇ ಶಕ್ತವಾಯ್ತು. ತಂಡದ ಪರ ರಚಿನ್ ರವೀಂದ್ರ 41 ರನ್ ಗಳಿಸಿ ಅಗ್ರ ಸ್ಕೋರರ್ ಎನಿಸಿಕೊಂಡರೆ, ರವೀಂದ್ರ ಜಡೇಜಾ 25 ರನ್ ಗಳಿಸಿದರು. ಕೊನೆಯಲ್ಲಿ ಅಬ್ಬರಿಸಿದ ಧೋನಿ 16 ಎಸೆತಗಳಲ್ಲಿ 30 ರನ್ ಗಳಿಸಿ ಅಜೇಯರಾಗುಳಿದರು. ನಾಯಕ ಋತುರಾಜ್​ ಖಾತೆ ತೆರೆಯದೆ ಶೂನ್ಯಕ್ಕೆ ಪೆವಿಲಿಯನ್​ ಸೇರಿದರು.

 

Category
ಕರಾವಳಿ ತರಂಗಿಣಿ