ಹೈದರಾಬಾದ್: ಇದೇ ತಿಂಗಳು 16ನೇ ತಾರೀಖಿನಿಂದ ಆಸ್ಟ್ರೇಲಿಯಾದ ಮೇಲ್ಬೋರ್ನ್ನಲ್ಲಿ ಎಫ್1 ರೇಸ್ ಪಂದ್ಯಾವಳಿಗಳು ಪ್ರಾರಂಭವಾಗಲಿವೆ. ಈ ಪ್ರತಿಷ್ಠಿತ ರೇಸಿಂಗ್ ಪಂದ್ಯಕ್ಕೆ ಕರ್ನಾಟಕದ ರೇಸರ್ ಆಯ್ಕೆ ಆಗಿದ್ದಾರೆ. 13 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಭಾರತದ ರೇಸರ್ ಎಫ್1 ರೇಸ್ನಲ್ಲಿ ಕಾಣಿಸಿಕೊಳ್ಳುತ್ತಿದ್ದು, ದೇಶ ಮತ್ತು ರಾಜ್ಯಕ್ಕೆ ಹೆಮ್ಮೆಯ ವಿಷಯವಾಗಿದೆ.
ಪ್ರಸ್ತುತ ಫಾರ್ಮುಲಾ 2ರ ಸ್ಪರ್ಧಿಯಾಗಿರುವ ಬೆಂಗಳೂರು ಮೂಲದ 24 ವರ್ಷದ ಕುಶ್ ಮೈನಿ 'ಅಲ್ಫೈನ್' (Alpine) ತಂಡದ ಮೀಸಲು ಚಾಲಕರಾಗಿ ಆಯ್ಕೆ ಆಗಿದ್ದಾರೆ. ಕಳೆದ 2023ರಲ್ಲಿ ಜೂನಿಯರ್ ಪ್ರೋಗ್ರಾಮರ್ ಆಗಿ ಅಲ್ಪೈನ್ ತಂಡ ಸೇರಿಕೊಂಡಿದ್ದರು. ಇದೀಗ ಅವರನ್ನು ತಂಡದ ಮೀಸಲು ಚಾಲಕನಾಗಿ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಫ್ರಾಂಕೊ ಕೊಲಾಪಿಂಟೊ, ಪಾಲ್ ಅರೋನ್ ಮತ್ತು ರ್ಯೊ ಹಿರಕಾವಾ ಅವರೊಂದಿಗೆ ಮೀಸಲು ಚಾಲಕರಾಗಿ ಕುಶ್ ಕೆಲಸ ಮಾಡಲಿದ್ದಾರೆ.
ಮ್ಯಾನಿ ಪ್ರಸ್ತುತ ಫಾರ್ಮುಲಾ 2 ಚಾಂಪಿಯನ್‌ಶಿಪ್‌ನಲ್ಲಿ ಡ್ಯಾಮ್ಸ್ ಲ್ಯೂಕಾಸ್ ಆಯಿಲ್ ಜೊತೆ ಸ್ಪರ್ಧಿಸುತ್ತಿದ್ದಾರೆ.
ಈ ಬಗ್ಗೆ ಅಲ್ಫೈನ್ ತಂಡ ಹೇಳಿಕೆ ನೀಡಿದ್ದು, ಕುಶ್ ಮೈನಿ ಅವರು ತಂಡಕ್ಕೆ ಟೆಸ್ಟ್ ಮತ್ತು ರಿಸರ್ವ್ ಚಾಲಕನಾಗಿ ಸೇರಿಕೊಂಡಿದ್ದಾರೆ. ಅಲ್ಲದೇ ಕಾರ್ ಡೆವಲಪಿಂಗ್ ಮತ್ತು ಸೆಟಪ್ಗೆ ಸಂಬಂಧಿಸಿದ ಕೆಲಸಗಳನ್ನು ನೋಡಿಕೊಳ್ಳಲಿದ್ದಾರೆ ಎಂದು ತಿಳಿಸಿದೆ. ಈ ಬಗ್ಗೆ ಕುಶ್ ಕುಡ ಪ್ರತಿಕ್ರಿಯೆ ನೀಡಿದ್ದು, ಈ ಋತುವಿನಲ್ಲಿ ಆಲ್ಪೈನ್ ಫಾರ್ಮುಲಾ 1 ತಂಡದ ಟೆಸ್ಟ್ ಮತ್ತು ರಿಸರ್ವ್ ಡ್ರೈವರ್ ಪಾತ್ರವನ್ನು ವಹಿಸಿಕೊಳ್ಳುತ್ತಿರುವ ನನಗೆ ಸಂತೋಷವಾಗಿದೆ" ಎಂದು ಫ್ರಾಂಚೈಸ್ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಮೈನಿ ಹೇಳಿದ್ದಾರೆ.
ಈ ಹಿಂದೆ ನರೇನ್ ಕಾರ್ತಿಕೇಯನ್, ಕರುಣ್ ಚಾಂದೋಕ್ F1 ಸ್ಫರ್ಧಿಗಳಾಗಿದ್ದರು. ಇದೀಗ ಕುಶ್ ಮೈನಿ ಭಾರತ ಮೂರನೇ ಎಫ್ 1 ಸ್ಫರ್ಧಿಯಾಗಿದ್ದಾರೆ.