image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಅಂತರಾಷ್ಟ್ರೀಯ ನಿವೃತ್ತಿ ಹಿಂಪಡೆದ ಭಾರತೀಯ ಫುಟ್​ಬಾಲ್​ನ ಲೆಜೆಂಡರಿ ಆಟಗಾರ ಸುನಿಲ್​ ಛೆಟ್ರಿ

ಅಂತರಾಷ್ಟ್ರೀಯ ನಿವೃತ್ತಿ ಹಿಂಪಡೆದ ಭಾರತೀಯ ಫುಟ್​ಬಾಲ್​ನ ಲೆಜೆಂಡರಿ ಆಟಗಾರ ಸುನಿಲ್​ ಛೆಟ್ರಿ

ಹೈದರಾಬಾದ್​: ಭಾರತೀಯ ಫುಟ್​ಬಾಲ್​ನಲ್ಲಿ ಪ್ರಮುಖ ಬೆಳವಣಿಗೆಯೊಂದು ನಡೆದಿದೆ. ಪುಟ್ಭಾಲ್​ ದಂತಕಥೆ 40 ವರ್ಷದ ಸುನೀಲ್ ಛೆತ್ರಿ ಅವರು ತಮ್ಮ ಅಂತಾರಾಷ್ಟ್ರೀಯ ನಿವೃತ್ತಿ ನಿರ್ಧಾರವನ್ನು ಹಿಂಪಡೆದಿದ್ದಾರೆ.

ಫಿಫಾ (FIFA) ನೇತೃತ್ವದಲ್ಲಿ ಇದೇ ತಿಂಗಳಿನಿಂದ 'ಏಷ್ಯನ್​ ಕಪ್​ ಕ್ವಾಲಿಫೈರ್​' ಪಂದ್ಯಗಳು ನಡೆಯಲಿವೆ. ಇದರಲ್ಲಿ ಭಾರತ ತಂಡದ ಪರ ಛೆಟ್ರಿ ಮತ್ತೆ ಮೈದಾನಕ್ಕೆ ಕಾಲಿಡಲಿದ್ದಾರೆ. ಈ ಕುರಿತು ಸ್ವತಃ ಆಲ್‌ ಇಂಡಿಯಾ ಫುಟ್‌ಬಾಟ್ ಫೆಡರೇಶನ್ (AFF) ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದೆ.

"ಸುನಿಲ್​ ಛೆಟ್ರಿ ಮತ್ತೆ ರಾಷ್ಟ್ರೀಯ ಫುಟ್ಬಾಲ್​ ತಂಡಕ್ಕೆ ಹಿಂತಿರುಗಿದ್ದಾರೆ. ತಂಡದ ನಾಯಕ, ಲೆಜೆಂಡರಿ ಆಟಗಾರ ಈ ತಿಂಗಳು ನಡೆಯಲಿರುವ FIFA ಆಯೋಜಿತ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ" ಎಂದು ತಿಳಿಸಿದೆ.

2027ರಲ್ಲಿ ಏಷ್ಯನ್​ AFC ಏಷ್ಯನ್​ ಕಪ್​ಗೆ ಅರ್ಹತೆ ಪಡೆಯಲು ಈ ತಿಂಗಳು ಭಾರತ ಕ್ವಾಲಿಫೈರ್​ ಪಂದ್ಯಗಳನ್ನು ಆಡಲಿದೆ. ಮಾ.19ರಂದು ಮಾಲ್ಡೀವ್ಸ್​ ವಿರುದ್ಧ ಸೌಹಾರ್ದ ಪಂದ್ಯ ನಡೆಯಲಿದೆ. ಆದರೆ ಮಾ.25ರಿಂದ ಅರ್ಹತೆ ಪಂದ್ಯ ಪ್ರಾರಂಭಗೊಳ್ಳಲಿದೆ.

ಮೊದಲ ಅರ್ಹತಾ ಪಂದ್ಯದಲ್ಲಿ ಭಾರತ ಫುಟ್ಬಾಲ್​ ತಂಡ ಬಾಂಗ್ಲಾದೇಶವನ್ನು ಎದುರಿಸಲಿದೆ. ಬಳಿಕ ಜೂನ್​ 10ರಂದು ಹಾಂಕಾಂಗ್​, ಅ.9ರಂದು ಸಿಂಗಾಪುರ, ನ.18ರಂದು ಬಾಂಗ್ಲಾದೇಶ, 2026 ಮಾ.31ರಂದು ಹಾಂಕಾಂಗ್​ ವಿರುದ್ಧ ಕೊನೆಯ ಕ್ವಾಲಿಫೈರ್​ ಪಂದ್ಯ ಆಡಲಿದೆ. ಆದರೆ ಛೆಟ್ರಿ ಬಾಂಗ್ಲಾ ವಿರುದ್ಧ ನಡೆಯುವ ಮೊದಲ ಪಂದ್ಯ ಮಾತ್ರ ಆಡಲಿದ್ದಾರೆ.

40 ವರ್ಷದ ಛೆಟ್ರಿ ಜೂನ್ 2024ರಲ್ಲಿ ಅಂತಾರಾಷ್ಟ್ರೀಯ ಫುಟ್‌ಬಾಲ್‌ನಿಂದ ನಿವೃತ್ತಿ ಪಡೆದಿದ್ದರು. ಕೊನೆಯದಾಗಿ FIFA ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಕುವೈತ್ ವಿರುದ್ಧ ಆಡಿದ್ದರು. ಅಂತಾರಾಷ್ಟ್ರೀಯ ಫುಟ್​​ಬಾಲ್​ನಲ್ಲಿ ಹೆಚ್ಚು ಗೋಲು ಗಳಿಸಿದವರ ಪಟ್ಟಿಯಲ್ಲಿ ಛೆಟ್ರಿ 4ನೇ ಸ್ಥಾನದಲ್ಲಿದ್ದಾರೆ. 19 ವರ್ಷಗಳ ವೃತ್ತಿಜೀವನದಲ್ಲಿ 150 ಅಂತಾರಷ್ಟ್ರೀಯ ಪಂದ್ಯಗಳಲ್ಲಿ ಒಟ್ಟು 94 ಗೋಲುಗಳನ್ನು ಗಳಿಸಿದ್ದಾರೆ.

ಅಂತಾರಾಷ್ಟ್ರೀಯ ಫುಟ್‌ಬಾಲ್‌ನಿಂದ ನಿವೃತ್ತರಾಗಿದ್ದರೂ ಛೆಟ್ರಿ, ಇಂಡಿಯನ್ ಸೂಪರ್ ಲೀಗ್‌ನಲ್ಲಿ ಬೆಂಗಳೂರು ಎಫ್‌ಸಿ ಪರ ಆಡುವುದನ್ನು ಮುಂದುವರೆಸಿದ್ದಾರೆ. ಈ ಋತುವಿನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. 12 ಗೋಲುಗಳೊಂದಿಗೆ ಅತಿ ಹೆಚ್ಚು ಗೋಲು ಗಳಿಸಿದ ಭಾರತೀಯ ಆಟಗಾರರಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. AIFF ಕೋರಿಕೆಯ ಮೇರೆಗೆ, ಛೆಟ್ರಿ ತಮ್ಮ ನಿವೃತ್ತಿಯನ್ನು ಹಿಂಪಡೆದಿದ್ದಾರೆ ಎಂದು ತಿಳಿದು ಬಂದಿದೆ.

Category
ಕರಾವಳಿ ತರಂಗಿಣಿ