image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ನ್ಯೂಜಿಲೆಂಡ್​​ ವಿರುದ್ಧ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ 44 ರನ್​ಗಳಿಂದ ಗೆಲುವು

ನ್ಯೂಜಿಲೆಂಡ್​​ ವಿರುದ್ಧ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ 44 ರನ್​ಗಳಿಂದ ಗೆಲುವು

ದುಬೈ : ಚಾಂಪಿಯನ್ಸ್​ ಟ್ರೋಫಿ ಭಾಗವಾಗಿ ಭಾನುವಾರ (ಮಾರ್ಚ್​ 2) ಭಾರತ ಮತ್ತು ನ್ಯೂಜಿಲೆಂಡ್​ ನಡುವೆ ಎ ಗುಂಪಿನ ಅಂತಿಮ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಸಾಧಿಸಿದೆ.

ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಭಾರತ ನೀಡಿದ್ದ 249 ರನ್​ಗಳ ಸಾಮಾನ್ಯ ಗುರಿಯನ್ನು ಬೆನ್ನತ್ತಿದ ನ್ಯೂಜಿಲೆಂಡ್​ ಸ್ಪಿನ್​ ದಾಳಿಗೆ ಸಿಲುಕಿ 205 ರನ್​ಗಳಿಗೆ ಸರ್ವಪತನ ಕಂಡಿದೆ. ತಂಡದ ಪರ ಕೇನ್​ ವಿಲಿಯಮ್ಸನ್ ಮಾತ್ರ​ ಉತ್ತಮ ಪ್ರದರ್ಶನ ನೀಡಿದರು.

ಅರ್ಧಶತಕದೊಂದಿಗೆ 81 ರನ್​ ಬಾರಿಸಿದರೂ ತಂಡವನ್ನು ಗೆಲುವಿನ ದಡಕ್ಕೆ ಕೊಂಡೊಯ್ಯಲು ಸಾಧ್ಯವಾಗಲಿಲ್ಲ. ಉಳಿದಂತೆ ವಿಲ್​ ಯಂಗ್​ (22), ಸ್ಯಾಂಟ್ನರ್​​ (28), ಬಿಟ್ಟರೆ ಉಳಿದ ಬ್ಯಾಟರ್​ಗಳು 20 ರನ್​ಗಳ ಒಳಗೆ ಔಟಾದರು. ಇದರಿಂದಾಗಿ ಕಿವೀಸ್​ ಪಡೆ ಕೊನೆವರೆಗೂ ಹೋರಾಡಿ 44 ರನ್​ಗಳಿಂದ ಸೋಲೊಪ್ಪಿಕೊಂಡಿತು.

ಇದಕ್ಕೂ ಮುನ್ನ ಟಾಸ್​ ಸೋತು ಬ್ಯಾಟಿಂಗ್​ ಬಂದಿದ್ದ ಭಾರತ ಕೂಡ ಆರಂಭಿಕ ಆಘಾತ ಅನುಭವಿಸಿತು. ಆರಂಭದಲ್ಲೇ 3 ವಿಕೆಟ್​ ಉರುಳಿದವು. ರೋಹಿತ್​ 15 ರನ್​ ಗಳಿಸಿ ಔಟಾದರೆ, ಶುಭ್ಮನ್​ ಗಿಲ್​ 2 ರನ್​​ಗೆ ಪೆವಿಲಿಯನ್​ ಸೇರಿದರು. ಬಳಿಕ ಬಂದ ಕೊಹ್ಲಿ ಕೂಡ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ಉಳಿಯಲಿಲ್ಲ. ಇದರಿಂದಾಗಿ ಭಾರತ 27 ರನ್​ಗೆ 3 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.

ಈ ವೇಳೆ ತಂಡಕ್ಕೆ ಶ್ರೇಯಸ್ ಅಯ್ಯರ್​ (79), ಅಕ್ಷರ್​ ಪಟೇಲ್​ (42), ಹಾರ್ದಿಕ್ ಪಾಂಡ್ಯ (45) ಆಸರೆಯಾದರು. ಈ ಮೂವರ ಬ್ಯಾಟಿಂಗ್​ ನೆರವಿನಿಂದ ಭಾರತ 200ರ ಗಡಿ ದಾಟುವಲ್ಲಿ ಯಶಸ್ವಿ ಆಯ್ತು.

ವರುಣ್​ ಚಕ್ರವರ್ತಿ ಕಮಾಲ್ ​: ಭಾರತದ ಪರ ವರುಣ್​ ಚಕ್ರವರ್ತಿ ಭರ್ಜರಿ ಪ್ರದರ್ಶನ ನೀಡಿದರು. ತಮ್ಮ ಸ್ಪಿನ್​ ಬೌಲಿಂಗ್​ ಮೂಲಕ 5 ವಿಕೆಟ್​ ಉರುಳಿಸಿದರು. ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಜೊತೆಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು. ಚಾಂಪಿಯನ್ಸ್​ ಟ್ರೋಫಿಯಲ್ಲಿ 5 ವಿಕೆಟ್​ ಪಡೆದ ಎರಡನೇ ಭಾರತೀಯ ಬೌಲರ್​ ಎನಿಸಿಕೊಂಡರು. ಇದಕ್ಕೂ ಮೊದಲು ಈ ಸಾಧನೆಯನ್ನು ರವೀಂದ್ರ ಜಡೇಜಾ ಮಾಡಿದ್ದಾರೆ.

Category
ಕರಾವಳಿ ತರಂಗಿಣಿ