image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ವಿರಾಟ್ ಕೊಹ್ಲಿ ಶತಕದ ನೆರವಿನಿಂದ ಪಾಕಿಸ್ಥಾನದ ವಿರುದ್ಧ ಭಾರತಕ್ಕೆ ಆರು ವಿಕೆಟ್ ಗಳ ಭರ್ಜರಿ ಜಯ

ವಿರಾಟ್ ಕೊಹ್ಲಿ ಶತಕದ ನೆರವಿನಿಂದ ಪಾಕಿಸ್ಥಾನದ ವಿರುದ್ಧ ಭಾರತಕ್ಕೆ ಆರು ವಿಕೆಟ್ ಗಳ ಭರ್ಜರಿ ಜಯ

ದುಬೈ : ತೀವ್ರ ಕುತೂಹಲ ಮೂಡಿಸಿದ್ದ ಚಾಂಪಿಯನ್ ಟ್ರೋಫಿ ಕ್ರಿಕೆಟ್‌ ಪಂದ್ಯದಲ್ಲಿ ಭಾರತ ತಂಡ, ಪಾಕಿಸ್ಥಾನ್ ತಂಡದ ವಿರುದ್ಧ ಸುಲಭ ಜಯ ಸಾಧಿಸುವಲ್ಲಿ ಸಫಲವಾಯಿತು.  ಇನ್ನೂ 7.3 ಓವರ್‌ಗಳು ಬಾಕಿ ಇರುವಾಗಲೇ ಟೀಂ ಇಂಡಿಯಾ ವಿಜಯ ಸಾದಿಸಿದ್ದರಿಂದ ದುಬೈನ ಕ್ರೀಡಾಂಗಣದಲ್ಲಿ ನೆರೆದಿದ್ದ ಲಕ್ಷಾಂತರ ಭಾರತದ ಪರ ಕ್ರಿಕೆಟ್ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು.

ವಿರಾಟ್ ಕೊಹ್ಲಿ ಸೆಂಚುರಿ ಬಾರಿಸುವ ಮೂಲಕ ಸೊಗಸಾದ ಬ್ಯಾಟಿಂಗ್ ಪ್ರದರ್ಶನ ನೀಡಿ, 111 ಬಾಲ್‌ಗಳಲ್ಲಿ 100 ರನ್ ಗಳಿಸುವ ಮೂಲಕ ಔಟಾಗದೇ ತಂಡವನ್ನು ಗೆಲುವಿನ ಗುರಿ ಮುಟ್ಟಿಸಿದರು. ಕೋಯ್ಲಿಗೆ ಸಾಥ್ ಕೊಟ್ಟ ಶ್ರೇಯಸ್‌ ಅಯ್ಯ‌ರ್   67 ಬಾಲ್ ಗಳಿಂದ 56 ರನ್ ಪಡೆದರೆ,

ನಾಯಕ ರೋಹಿತ್ ಶರ್ಮಾ ಸ್ಫೋಟಕ ಬ್ಯಾಟಿಂಗ್‌ ಮಾಡಲು ಹೋಗಿ ಬೇಗ ನಿರ್ಗಮಿಸುವಂತಾಯಿತು. ಆದರೂ 15 ಬಾಲ್‌ಗಳಿಗೆ 20 ರನ್ ಬಾರಿಸಿ ಗಮನ ಸೆಳೆದರು. ಹಾರ್ದಿಕ್ ಪಾಂಡ್ಯ 6 ಬಾಲ್‌ಗೆ 8 ರನ್ ಬಾರಿಸಿ ನಿರ್ಗಮಿಸಿದರು. ಅಕ್ಷ‌ರ್ ಪಟೇಲ್ 3 ರನ್‌ಗಳ ಕೊಡುಗೆ ನೀಡಿದರೆ, ಪಾಕ್ ಪರ ಶಾಹೀನ್ ಆಫ್ರಿಧಿ 2 ವಿಕೆಟ್ ಕಬಳಿಸಿ ಗಮನ ಸೆಳೆದರು.

ಇದಕ್ಕೂ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ, 49.4 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 241 ರನ್‌ಗಳಿಸಿ, ಭಾರತಕ್ಕೆ 242 ರನ್‌ಗಳ ಗೆಲುವಿನ ಗುರಿ ನೀಡಿತ್ತು.

ಪಾಕಿಸ್ತಾನದ ಸೌದ್ ಶಕೀಲ್ 62, ಮೊಹಮ್ಮದ್ ರಿಜ್ವಾನ್ 46, ಖುಷಿಲ್ ಶಾ 38 ರನ್ ಗಳಿಸಿ ತಂಡಕ್ಕೆ ನೆರವಾದರು. ಉಳಿದಂತೆ ಯಾವ ಬ್ಯಾಟ‌ರ್ ಕೂಡ ಭಾರತೀಯ ಬೌಲರ್‌ಗಳ ಎದುರು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲ್ಲಿಲ್ಲ.

Category
ಕರಾವಳಿ ತರಂಗಿಣಿ