ಹೈದೆರಾಬಾದ್ : ಉತ್ತರಾಖಂಡದಲ್ಲಿ ನಡೆಯುತ್ತಿರುವ 38ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕ ಭರ್ಜರಿ ಪ್ರದರ್ಶನ ನೀಡುತ್ತಿದ್ದು ಎಲ್ಲಾ ರಾಜ್ಯಗಳ ಹಿಂದಿಕ್ಕೆ ನಂಬರ್ ಒನ್ ಸ್ಥಾನಕ್ಕೇರಿದೆ.
ಜ.28 ರಿಂದ ಪ್ರಾರಂಭವಾಗಿರುವ ರಾಷ್ಟ್ರೀಯ ಕ್ರೀಡಾಕೂಟ ಫೆ.14 ರವರೆಗೆ ನಡೆಯಲಿದೆ. ಸದ್ಯ ಹೆಚ್ಚು ಪದಕ ಗೆದ್ದು ತಂಡವಾಗಿ ಕರ್ನಾಟಕ ಎಲ್ಲಾ ರಾಜ್ಯಗಳ ಹಿಂದಿಕ್ಕಿ ಪದಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಈ ವರೆಗೂ 6 ಚಿನ್ನ, ಎರಡು ಬೆಳ್ಳಿ ಮತ್ತು ಒಂದು ಕಂಚು ಸಮೇತ ಒಟ್ಟು 9 ಪದಕಗಳನ್ನು ಕರ್ನಾಟಕ ಪಡೆದುಕೊಂಡಿದೆ.
ಕ್ರೀಡಾಕೂಟದ ಎರಡನೇ ದಿನವಾದ ಬುಧವಾರ ಸಂಜೆ ಹಲ್ದ್ವಾನಿಯ ಗೌಲಾಪರ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಈಜು ಸ್ಪರ್ಧೆಯಲ್ಲಿ ಕರ್ನಾಟಕದ ಶ್ರೀಹರಿ ನಟರಾಜನ್ ಪುರುಷರ 200 ಮೀಟರ್ ಫ್ರೀಸ್ಟೈಲ್ ಈಜು ಸ್ಪರ್ಧೆಯಲ್ಲಿ ಚಿನ್ನ ಗೆದ್ದರೆ, ಕರ್ನಾಟಕದ 14 ವರ್ಷದ ಧಿನಿಧಿ ದೇಸಿಂಗು ಮಹಿಳಾ ವಿಭಾಗದ 200 ಮೀಟರ್ ಫ್ರೀಸ್ಟೈಲ್ ಈಜು ಮತ್ತು 100 ಮೀಟರ್ ಬಟರ್ ಫ್ಲೈ ಈಜು ಸ್ಪರ್ಧೆ, 4x100 ಫ್ರೀಸ್ಟೈಲ್ ಈವೆಂಟ್ ಸೇರಿ ಒಂದೇ ದಿನ 3 ಚಿನ್ನ ಗೆದ್ದುಕೊಂಡರು.
ಈಜು ಸ್ಪರ್ಧೆಯಲ್ಲಿ ಕರ್ನಾಟಕ ಹೆಚ್ಚು ಪದಕ ಗೆದ್ದು ಪ್ರಾಬಲ್ಯ ಸಾಧಿಸಿದೆ. ಕ್ರೀಡಾಕೂಟದಲ್ಲಿ ಈಜಿನಲ್ಲೇ ಕರ್ನಾಟಕ 4 ಪದಗಕಗಳನ್ನು ಪಡೆದುಕೊಂಡಿದೆ. ಕ್ರೀಡಾಕೂಟ ಮುಕ್ತಾಯಕ್ಕೆ ಇನ್ನೂ 15 ದಿನಗಳ ಬಾಕಿ ಇರುವ ಕಾರಣ ಹೆಚ್ಚಿನ ಕರ್ನಾಟಕ ಹೆಚ್ಚಿನ ಪದಕ ಗೆಲ್ಲುವ ವಿಶ್ವಾಸದಲ್ಲಿದೆ.