image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ನಾಳೆ ಭಾರತ ಮತ್ತು ಇಂಗ್ಲೆಂಡ್​ ನಡುವೆ ಮೊದಲ ಟಿ-20

ನಾಳೆ ಭಾರತ ಮತ್ತು ಇಂಗ್ಲೆಂಡ್​ ನಡುವೆ ಮೊದಲ ಟಿ-20

ನವದೆಹಲಿ : ಭಾರತ ಮತ್ತು ಇಂಗ್ಲೆಂಡ ನಡುವೆ 5 ಪಂದ್ಯಗಳ ಟಿ-20 ಸರಣಿ ನಾಳೆಯಿಂದ ಪ್ರಾರಂಭವಾಗಲಿದೆ. ಕೋಲ್ಕಾತ್ತಾದ ಈಡೆನ್​ ಗಾರ್ಡನ್​ನಲ್ಲಿ ಉಭಯ ತಂಡಗಳ ನಡುವೆ ಮೊದಲ ಪಂದ್ಯ ನಡೆಯಲಿದೆ. ಪಂದ್ಯಕ್ಕೂ ಒಂದು ದಿನ ಮುನ್ನವೇ ಇಂಗ್ಲೆಂಡ್​ 11 ಆಟಗಾರರ ಅಂತಿಮ ತಂಡವನ್ನು ಪ್ರಕಟಿಸಿದೆ.

ಇಂಗ್ಲೆಂಡ್​​​​​​​​ ಬ್ಯಾಟಿಂಗ್ ವಿಭಾಗ ತುಂಬಾ ಬಲಿಷ್ಠವಾಗಿದ್ದು, 6 ಟಿ-20 ಸ್ಪೇಷಲಿಷ್ಟ್​​ ಗಳನ್ನು ತಂಡಕ್ಕೆ ಸೇರಿಸಲಾಗಿದೆ. ಬೆನ್ ಡಕೆಟ್ ಮತ್ತು ಫಿಲ್ ಸಾಲ್ಟ್ ಆರಂಭಿಕರಾಗಿ ಕಣಕ್ಕಿಳಿಯಲಿದ್ದು, ನಾಯಕ ಜೋಸ್ ಬಟ್ಲರ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಬರಲಿದ್ದಾರೆ.

ಮಧ್ಯಮ ಕ್ರಮಾಂಕದಲ್ಲಿ ಹ್ಯಾರಿ ಬ್ರೂಕ್​, ಜಾಕೋಭ್​ ಬೆಥೆಲ್​, ಲಿವಿಂಗ್​ಸ್ಟನ್​ ಕಾಣಿಸಿಕೊಳ್ಳಿದ್ದಾರೆ. ಆಲ್‌ರೌಂಡರ್ ಜೇಮಿ ಓವರ್ಟನ್ ಕೂಡ ಅತ್ಯುತ್ತಮ ಫಾರ್ಮ್‌ನಲ್ಲಿದ್ದು, ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್​​​​​ಗೆ ಬರಲಿದ್ದಾರೆ. ಈ ತಂಡವನ್ನು ಗಮನಿಸಿದರೇ ಈಡನ್ ಗಾರ್ಡನ್​ನಲ್ಲಿ ನಡೆಯಲಿರುವ ಮೊದಲ ಟಿ20 ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವೆ ಕಠಿಣ ಪೈಪೋಟಿ ಏರ್ಪಡುವ ಸಾಧ್ಯತೆ ಹೆಚ್ಚಾಗಿದೆ.

2023ರ ಏಕದಿನ ವಿಶ್ವಕಪ್ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ಹೊರಗುಳಿದಿದ್ದ ಶಮಿ ಇದೀಗ ಪುನರಾಗಮನ ಮಾಡಲು ಸಜ್ಜಾಗಿದ್ದಾರೆ. 34 ವರ್ಷದ ಶಮಿ 14 ತಿಂಗಳ ನಂತರ ಭಾರತ ತಂಡಕ್ಕೆ ಮರಳಿದ್ದಾರೆ. ವಿಶ್ವಕಪ್ ಬಳಿಕ ಶಮಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಎಡ ಮೊಣಕಾಲಿನ ಊತದಿಂದಾಗಿ ಇತ್ತೀಚಿನ ಆಸ್ಟ್ರೇಲಿಯಾ ಪ್ರವಾಸವನ್ನು ತಪ್ಪಿಸಿಕೊಂಡಿದ್ದರು.

Category
ಕರಾವಳಿ ತರಂಗಿಣಿ