image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ವಿದರ್ಭ ತಂಡವನ್ನು ಸೋಲಿಸಿ ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿಗೆ ಮುತ್ತಿಕ್ಕಿದೆ

ವಿದರ್ಭ ತಂಡವನ್ನು ಸೋಲಿಸಿ ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿಗೆ ಮುತ್ತಿಕ್ಕಿದೆ

ವಡೋದರಾ: ದೇಶಿ ಏಕದಿನ ಕ್ರಿಕೆಟ್​ನ ಪ್ರತಿಷ್ಠಿತ ವಿಜಯ್ ಹಜಾರೆ ಟ್ರೋಫಿಯನ್ನು ಕರ್ನಾಟಕ ಐದನೇ ಬಾರಿ ಗೆದ್ದುಕೊಂಡಿತು. ವಡೋದರಾದಲ್ಲಿ ಶನಿವಾರ ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಮಯಾಂಕ್ ಅಗರವಾಲ್ ನಾಯಕತ್ವದ ಕರ್ನಾಟಕ ತಂಡವು 36 ರನ್​ಗಳಿಂದ ಕರುಣ್ ನಾಯರ್ ನಾಯಕತ್ವದ ವಿದರ್ಭ ತಂಡದ ಮೇಲೆ ಭರ್ಜರಿ ಜಯಭೇರಿ ಬಾರಿಸಿತು. ಈ ಮೂಲಕ ಐದು ವರ್ಷದ ಬಳಿಕ ರಾಜ್ಯ ತಂಡವು ದೇಶಿ ಏಕದಿನ ಕ್ರಿಕೆಟ್​ನ ಚಾಂಪಿಯನ್​ ಪಟ್ಟ ಅಲಂಕರಿಸಿತು.

ವಡೋದರಾದ ಕೋತಂಬಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ವಿದರ್ಭ ತಂಡವು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಇದರಿಂದಾಗಿ ಕರ್ನಾಟಕ ತಂಡ ಮೊದಲು ಬ್ಯಾಟಿಂಗ್ ಅವಕಾಶ ಪಡೆಯಿತು. ಮಯಾಂಕ್ ಬಳಗ ಉತ್ತಮ ಆರಂಭ ಪಡೆಯದಿದ್ದರೂ ಮಧ್ಯಮ ಕ್ರಮಾಂಕದಲ್ಲಿ ಅಬ್ಬರಿಸಿತು.

ಆರಂಭಿಕರಾಗಿ ಆಗಮಿಸಿದ್ದ ಮಯಾಂಕ್ (32 ರನ್), ಪಡಿಕಲ್ (8 ರನ್), ಅನೀಶ್ (21) ರನ್​ ಗಳಿಸಿ ಪೆವಿಲಿಯನ್ ಸೇರಿದರು. ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್​ಗೆ ಬಂದ ಸ್ಮರಣ್ ರವಿಚಂದ್ರನ್ ಅಮೋಘ ಶತಕ (101 ರನ್), ಕೃಷ್ಣನ್ ಶ್ರೀಜಿತ್ (78 ರನ್) ಮತ್ತು ಅಭಿನವ್ ಮನೋಹರ್ (79 ರನ್, 42 ಎಸೆತ) ಬಿರುಸಿನ ಆಟದ ನೆರವಿನಿಂದ ತಂಡ 50 ಓವರ್​ಗಳಲ್ಲಿ 6 ವಿಕೆಟ್ ನಷ್ಟಕ್ಕೆ 348 ರನ್ ಗಳಿಸಿತು. 48.2 ಓವರ್​ಗಳಲ್ಲಿ 312 ರನ್​ಗಳಿಗೆ ತನ್ನೆಲ್ಲ ವಿಕೆಟ್ ಕಳೆದುಕೊಂಡು ವಿದರ್ಭ ಸೋಲನುಭವಿಸಿತು. ಈ ಮೂಲಕ ಚೊಚ್ಚಲ ಟ್ರೋಫಿ ಗೆಲ್ಲುವ ಕನಸು ನನಸಾಗಲಿಲ್ಲ.

Category
ಕರಾವಳಿ ತರಂಗಿಣಿ