image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಭಾರತದ ಕ್ರಿಕೆಟ್​ ದಿಗ್ಗಜ​ ಸುನೀಲ್​ ಗವಾಸ್ಕರ್​ ಗೆ ಕ್ರಿಕೆಟ್​ ಆಸ್ಟ್ರೇಲಿಯಾದಿಂದ ಅವಮಾನ

ಭಾರತದ ಕ್ರಿಕೆಟ್​ ದಿಗ್ಗಜ​ ಸುನೀಲ್​ ಗವಾಸ್ಕರ್​ ಗೆ ಕ್ರಿಕೆಟ್​ ಆಸ್ಟ್ರೇಲಿಯಾದಿಂದ ಅವಮಾನ

ಆಸ್ಟ್ರೇಲಿಯಾ : ಭಾರತ ಮತ್ತು ಆಸ್ಟ್ರೇಲಿಯಾ ಮಧ್ಯೆ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್​ ಸರಣಿ ಇಂದಿಗೆ ಅಂತ್ಯವಾಗಿದೆ. ಈ ರೋಚಕ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡ ಭಾರತವನ್ನು 3-1 ಅಂತರದಿಂದ ಮಣಿಸುವ ಮೂಲಕ ಸರಣಿಯನ್ನು ಕೈವಶ ಮಾಡಿಕೊಂಡಿದೆ. ಈ ಮೂಲಕ ಭಾರತ ತಂಡ 10 ವರ್ಷಗಳ ನಂತರ ಮೊದಲ ಬಾರಿಗೆ ಬಾರ್ಡರ್-ಗವಾಸ್ಕರ್ ಸರಣಿ ಟ್ರೋಫಿಯನ್ನು ಕಳೆದುಕೊಂಡಿತು.

ಏತನ್ಮಧ್ಯೆ, ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದಿದ್ದ ಸರಣಿಯ ಅಂತಿಮ ಟೆಸ್ಟ್ ಪಂದ್ಯದ ಬಳಿಕ ಭಾರತದ ಕ್ರಿಕೆಟ್​ ದಂತಕಥೆ ಸುನೀಲ್​ ಗವಾಸ್ಕರ್​ ಅವರಿಗೆ ಕ್ರಿಕೆಟ್​ ಆಸ್ಟ್ರೇಲಿಯಾ ದೊಡ್ಡ ಅವಮಾನ ಮಾಡಿದ್ದು ಹೆಚ್ಚಿನ ಜನರು ಈ ನಡೆಯನ್ನು ಖಂಡಿಸಿದ್ದಾರೆ. ಅಂತಿಮ ಟೆಸ್ಟ್​ ಪಂದ್ಯದಲ್ಲಿ ಭಾರತ 6 ವಿಕೆಟ್‌ಗಳಿಂದ ಸೋಲನುಭವಿಸಿತು. ಸರಣಿ ನಿರ್ಣಾಯಕ ಟೆಸ್ಟ್‌ನಲ್ಲಿ ಕೇವಲ 163 ರನ್‌ಗಳ ಸಾಧಾರಣ ಗುರಿಯನ್ನು ಪಡೆದಿದ್ದ ಆಸ್ಟ್ರೇಲಿಯಾ ಸುಲಭವಾಗಿ ಗುರಿ ತಲುಪಿತು.

ಪಂದ್ಯದ ಬಳಿಕ ಆಸ್ಟ್ರೇಲಿಯಾ ಆಟಗಾರರಿಗೆ ಬಾರ್ಡರ್​-ಗವಾಸ್ಕರ್​ ಟ್ರೋಫಿ ಹಸ್ತಾಂತರಿಸುವ ವೇಳೆ ಭಾರತೀಯ ದಿಗ್ಗಜ ಕ್ರಿಕೆಟರ್​ ಸುನೀಲ್​ ಗವಾಸ್ಕರ್​ ಅವರಿಗೆ ಕ್ರಿಕೆಟ್​ ಆಸ್ಟ್ರೇಲಿಯಾ ಅವಮಾನ ಮಾಡಿದೆ. ಹೌದು, ಟ್ರೋಫಿ ಹಸ್ತಾಂತರಕ್ಕಾಗಿ ಸುನೀಲ್​ ಗವಾಸ್ಕರ್​ ಅವರಿಗೆ ವೇದಿಕೆಗೆ ಕರೆಯದೆ ಕೇವಲ ಅಲೇನ್​ ಬಾರ್ಡರ್​ ಮೂಲಕ ಆಸೀಸ್​ ಆಟಗಾರರಿಗೆ ಟ್ರೋಫಿ ಹಸ್ತಾಂತರಿಸಲಾಗಿದೆ.

Category
ಕರಾವಳಿ ತರಂಗಿಣಿ