image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಚೀನಾದ ಆಟಗಾರನ ಸೋಲಿಸಿವಿಶ್ವ ಚೆಸ್​ ಚಾಂಪಿಯನ್​ಷಿಪ್​ ಗೆದ್ದ ದೊಮ್ಮರಾಜು ಗುಕೇಶ್

ಚೀನಾದ ಆಟಗಾರನ ಸೋಲಿಸಿವಿಶ್ವ ಚೆಸ್​ ಚಾಂಪಿಯನ್​ಷಿಪ್​ ಗೆದ್ದ ದೊಮ್ಮರಾಜು ಗುಕೇಶ್

​ಸಿಂಗಾಪುರ: ಭಾರತದ ಗ್ರ್ಯಾಂಡ್‌ಮಾಸ್ಟರ್ ದೊಮ್ಮರಾಜು ಗುಕೇಶ್ ಅವರು ಗುರುವಾರ ನಡೆದ ವಿಶ್ವ ಚೆಸ್ ಚಾಂಪಿಯನ್‌ಶಿಪ್​ನಲ್ಲಿ ಚೀನಾದ ಡಿಂಗ್ ಲಿರೆನ್ ಅವರನ್ನು ಸೋಲಿಸುವ ಮೂಲಕ ಅತ್ಯಂತ ಕಿರಿಯ ವಿಶ್ವ ಚೆಸ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಕಳೆದ 13 ಪಂದ್ಯಗಳಲ್ಲಿ ಡ್ರಾ ಸಾಧಿಸುತ್ತಾ ಬಂದಿದ್ದ ಗುಕೇಶ್​ ಇಂದು ನಡೆದ 14ನೇ ಪಂದ್ಯದಲ್ಲಿ ಜಯ ಸಾಧಿಸುವ ಮೂಲಕ 2024ರ ಸಾಲಿನ ವಿಶ್ವ ಚಾಂಪಿಯನ್‌ಶಿಪ್​​ ಗೆದ್ದುಕೊಂಡರು. ಚೆಸ್​​ ಆಟದ 138 ವರ್ಷಗಳಲ್ಲಿ ಏಷ್ಯಾದ ಇಬ್ಬರು ಸ್ಪರ್ಧಿಗಳು ಫೈನಲ್​ಗೆ ತಲುಪಿದ್ದು ಇದೇ ಮೊದಲು. ಚೀನಾ ಮತ್ತು ಭಾರತದ ಆಟಗಾರರ ನಡುವಿನ ಸೆಣಸಾಟದಲ್ಲಿ ಜಯ ಗುಕೇಶ್​​ ಅವರದ್ದಾಯಿತು.

ಹಾಲಿ ವಿಶ್ವ ಚಾಂಪಿಯನ್ ಆಗಿದ್ದ ಚೀನಾದ 32 ವರ್ಷದ ಡಿಂಗ್ ಲಿರೆನ್ ಅವರು ಭಾರತದ ಗ್ರ್ಯಾಂಡ್​ಮಾಸ್ಟರ್​ಗೆ ಕಳೆದ 13 ಪಂದ್ಯಗಳಲ್ಲಿ ತೀವ್ರ ಪೈಪೋಟಿ ನೀಡಿದ್ದರು. ಇಬ್ಬರೂ 6.5 ಸಮಾನ ಅಂಕ ಗಳಿಸಿದ್ದರು. ಗೆಲುವಿನ ಬಳಿಕ ಗುಕೇಶ್ ಅವರಿಗೆ 21.21 ಕೋಟಿ ರೂಪಾಯಿ (2.5 ಮಿಲಿಯನ್ ಅಮೆರಿಕನ್​ ಡಾಲರ್​) ಬಹುಮಾನ ಲಭಿಸಿದೆ.18 ವರ್ಷದ ಭಾರತದ ಗ್ರ್ಯಾಂಡ್​ಮಾಸ್ಟರ್​ ಡಿ. ಗುಕೇಶ್​ ವಿಶ್ವ ಚೆಸ್​​ ಚಾಂಪಿಯನ್​​ ಗೆದ್ದ ವಿಶ್ವದ ಅತಿ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇದಕ್ಕೂ ಮೊದಲು ರಷ್ಯಾದ ದಂತಕಥೆ ಗ್ಯಾರಿ ಕಾಸ್ಪರೋವ್ ಅವರು 1985ರಲ್ಲಿ 22ನೇ ವಯಸ್ಸಿನಲ್ಲಿ ಚಾಂಪಿಯನ್​ ಆಗಿದ್ದರು. ಈ ದಾಖಲೆಯನ್ನು ಭಾರತೀಯ ಮುರಿದರು.

Category
ಕರಾವಳಿ ತರಂಗಿಣಿ