image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕುಸ್ತಿಯಿಂದ ನಿಷೇಧಗೊಂಡ ಕುಸ್ತಿಪಟು ಬಜರಂಗ್ ಪೂನಿಯಾ

ಕುಸ್ತಿಯಿಂದ ನಿಷೇಧಗೊಂಡ ಕುಸ್ತಿಪಟು ಬಜರಂಗ್ ಪೂನಿಯಾ

ನವದೆಹಲಿ: ಕುಸ್ತಿಪಟು ಬಜರಂಗ್ ಪೂನಿಯಾ ಅವರನ್ನು ರಾಷ್ಟ್ರೀಯ ಉದ್ದೀಪನಾ ಮದ್ದು ವಿರೋಧಿ ಸಂಸ್ಥೆ  ನಾಲ್ಕು ವರ್ಷಗಳ ಕಾಲ ಕುಸ್ತಿಯಿಂದ ನಿಷೇಧಿಸಿದೆ. ಹರಿಯಾಣದ ಸೋನಿಪತ್‌ನಲ್ಲಿ ಡೋಪಿಂಗ್ ಪರೀಕ್ಷೆಗೆ ಮೂತ್ರದ ಮಾದರಿ ಸಲ್ಲಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಈ ಶಿಕ್ಷೆಗೆ ಗುರಿಪಡಿಸಲಾಗಿದೆ.

ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕುಸ್ತಿ ಸ್ಪರ್ಧೆಯಲ್ಲಿ ಮುಂದಿನ ನಾಲ್ಕು ವರ್ಷಗಳ ಕಾಲ ಪೂನಿಯಾ ಪಾಲ್ಗೊಳ್ಳುವಂತಿಲ್ಲ. ಜೊತೆಗೆ, ತರಬೇತಿ ಪಡೆಯದಂತೆಯೂ ಕ್ರಮ ಕೈಗೊಳ್ಳಲಾಗಿದೆ.

ರಾಷ್ಟ್ರೀಯ ತಂಡದ ಆಯ್ಕೆ ಹಿನ್ನೆಲೆಯಲ್ಲಿ ಡೋಪ್ ಪರೀಕ್ಷೆಗೆ ಮಾದರಿಗಳನ್ನು ಸಂಗ್ರಹಿಸಲು ನಾಡಾ ತಂಡ ಬಜರಂಗ್ ಅವರ ಬಳಿ ಬಂದಿತ್ತು. ಈ ವೇಳೆ ಅವರು ಡೋಪ್ ಪರೀಕ್ಷೆಗೆ ನಿರಾಕರಿಸಿದ್ದರಿಂದ ಹಾಗೂ ಡೋಪಿಂಗ್ ಪರೀಕ್ಷೆ ನೀತಿ ಸಂಹಿತೆ ಉಲ್ಲಂಘಿಸಿದ ಕಾರಣಕ್ಕೆ ನಾಡಾ, ನಿಷೇಧ ಹೇರುವ ಮೂಲಕ ಕಠಿಣ ಕ್ರಮ ಕೈಗೊಂಡಿದೆ.

Category
ಕರಾವಳಿ ತರಂಗಿಣಿ