image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕೂಚ್‌ ಬೆಹಾರ್ ಕ್ರಿಕೆಟ್‌ ಟೂರ್ನಿಯಲ್ಲಿ ವಿರೇಂದ್ರ ಸೆಹವಾಗ್​ ಅವರ ಪುತ್ರ ಆರ್ಯವೀರ್​ ಸೆಹವಾಗ್ ದ್ವಿಶತಕ ಸಿಡಿಸಿ ಗಮನ ಸೆಳೆದಿದ್ದಾರೆ

ಕೂಚ್‌ ಬೆಹಾರ್ ಕ್ರಿಕೆಟ್‌ ಟೂರ್ನಿಯಲ್ಲಿ ವಿರೇಂದ್ರ ಸೆಹವಾಗ್​ ಅವರ ಪುತ್ರ ಆರ್ಯವೀರ್​ ಸೆಹವಾಗ್ ದ್ವಿಶತಕ ಸಿಡಿಸಿ ಗಮನ ಸೆಳೆದಿದ್ದಾರೆ

ಹೈದೆರಾಬಾದ್ : ಭಾರತ ಕ್ರಿಕೆಟ್ ತಂಡದ ಡ್ಯಾಶಿಂಗ್ ಓಪನರ್ ವಿರೇಂದ್ರ ಸೆಹವಾಗ್ ಅವರ ಪುತ್ರ ಆರ್ಯವೀರ್ ಸೆಹವಾಗ್‌ ತಮ್ಮ ತಂದೆಯ ಹಾದಿಯಲ್ಲೇ ಸಾಗುತ್ತಿದ್ದಾರೆ. ಕಳೆದ ತಿಂಗಳು ವೃತ್ತಿಪರ ಕ್ರಿಕೆಟ್‌ಗೆ ಕಾಲಿಟ್ಟ 15ರ ಹರೆಯದ ಆರ್ಯವೀರ್, ಕೂಚ್ ಬೆಹಾರ್ ಟ್ರೋಫಿ ಟೂರ್ನಿಯಲ್ಲಿ ದ್ವಿಶತಕ ಸಿಡಿಸಿದ್ದಾರೆ. ದೆಹಲಿ ಪರ ಆಡುತ್ತಿರುವ ಇವರು ಮೇಘಾಲಯ ವಿರುದ್ಧದ ಪಂದ್ಯದಲ್ಲಿ ಗಮನಾರ್ಹ ಪ್ರದರ್ಶನ ನೀಡಿದರು. ದೆಹಲಿ ಮತ್ತು ಮೇಘಾಲಯ ತಂಡಗಳ ನಡುವೆ ನಡೆದ ಈ ಪಂದ್ಯದಲ್ಲಿ ಆರ್ಯವೀರ್ 200 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದ್ದಾರೆ. 2 ಸಿಕ್ಸರ್‌ ಮತ್ತು 34 ಬೌಂಡರಿಗಳು ಇವರ ಇನ್ನಿಂಗ್ಸ್‌ನಲ್ಲಿದ್ದವು. ಸದ್ಯ ಅಜೇಯರಾಗಿ ಕ್ರೀಸ್‌ನಲ್ಲಿದ್ದಾರೆ.

ಈ ಇನ್ನಿಂಗ್ಸ್‌ನಲ್ಲಿ ಆರ್ಯವೀರ್​ 87ರ ಸ್ಟ್ರೈಕ್ ರೇಟ್‌ನೊಂದಿಗೆ ಬ್ಯಾಟಿಂಗ್ ಮಾಡಿದ್ದಾರೆ. ಆರ್ಯವೀರ್ ಸೆಹವಾಗ್ ಅವರ ಸ್ಫೋಟಕ ಆಟದಿಂದಾಗಿ ಡೆಲ್ಲಿ ತಂಡ ಮೇಘಾಲಯ ವಿರುದ್ಧ 208 ರನ್‌ಗಳ ಮುನ್ನಡೆ ಸಾಧಿಸಿದೆ. ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ ಮೇಘಾಲಯ ಮೊದಲ ಇನ್ನಿಂಗ್ಸ್‌ನಲ್ಲಿ 260 ರನ್‌ಗಳಿಗೆ ಆಲೌಟ್ ಆಗಿತ್ತು. ಬಳಿಕ ಬ್ಯಾಟಿಂಗ್ ಆರಂಭಿಸಿದ ದೆಹಲಿ ಬೃಹತ್ ಮೊತ್ತದತ್ತ ಸಾಗಿತು. ಎರಡನೇ ದಿನದಾಟದ ಅಂತ್ಯಕ್ಕೆ ಎರಡು ವಿಕೆಟ್ ನಷ್ಟಕ್ಕೆ 468 ರನ್ ಗಳಿಸಿದೆ.

Category
ಕರಾವಳಿ ತರಂಗಿಣಿ