image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಪಾಕಿಸ್ಥಾನಕ್ಕೆ ಮತ್ತೊಂದು ಶಾಕ್ ನೀಡಿದ ಟೀಂ ಇಂಡಿಯಾ

ಪಾಕಿಸ್ಥಾನಕ್ಕೆ ಮತ್ತೊಂದು ಶಾಕ್ ನೀಡಿದ ಟೀಂ ಇಂಡಿಯಾ

ನವದೆಹಲಿ : ಭಾರತ ಮತ್ತು ಪಾಕಿಸ್ಥಾನ ನಡುವಿನ ಸಂಬಂಧ ಹದಗೆಟ್ಟು ಸುಮಾರು ವರ್ಷಗಳೆ ಕಳೆದಿವೆ. ಇದರ ಪರಿಣಾಮ ಕ್ರಿಕೆಟ್​ ಮೇಲೂ ಬೀರಿದೆ. 2008ರ ಏಷ್ಯಾಕಪ್​ ಬಳಿಕ ಪಾಕಿಸ್ಥಾನದಲ್ಲಿ ನಡೆದ ಯಾವುದೇ ಪಂದ್ಯಾವಳಿಗಳಲ್ಲಿ ಟೀಂ ಇಂಡಿಯಾ ಒಮ್ಮೆಯೂ ಭಾಗಿಯಾಗಿಲ್ಲ. ಅಲ್ಲದೇ ಪಾಕ್​ ಆತಿಥ್ಯ ವಹಿಸಿಕೊಳ್ಳಲಿರುವ 2025ರ ಚಾಂಪಿಯನ್ಸ್​ ಟ್ರೋಫಿ ಸೇರಿ ಯಾವುದೇ ಟೂರ್ನಿಗಳನ್ನು ಆಡಲು ಟೀಂ ಇಂಡಿಯಾ ಅಲ್ಲಿಗೆ ತೆರಳಲ್ಲ ಎಂದೂ ಈಗಾಗಲೇ ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ (BCCI) ಸ್ಪಷ್ಟನೆ ನೀಡಿದೆ. ಇದೀಗ ಪಾಕ್​ಗೆ ಮತ್ತೊಂದು ಶಾಕ್​ ನೀಡಿದೆ.

ಹೌದು, ಇದೇ ತಿಂಗಳು ನವೆಂಬರ್ 23 ರಿಂದ ಡಿಸೆಂಬರ್ 3 ರವರೆಗೆ ಪಾಕಿಸ್ಥಾನದಲ್ಲಿ ಅಂಧರ ಟಿ20 ವಿಶ್ವಕಪ್​ ನಡೆಯಲಿದೆ. ಕಳೆದ ಟಿ20ಯಲ್ಲಿ ವಿಶ್ವಚಾಂಪಿಯನ್​ ಆಗಿದ್ದ ಅಂಧರ ಟೀಂ ಇಂಡಿಯಾ ಈ ಬಾರಿಯೂ ಕಪ್​ ಎತ್ತಿ ಹಿಡಿಯುವ ಫೆವರೀಟ್​ ತಂಡವಾಗಿತ್ತು. ಆದರೆ ಪಾಕ್​​ನಲ್ಲಿ ವಿಶ್ವಕಪ್​ ಆಯೋಜಿಸಿದ್ದರಿಂದ ವಿದೇಶಾಂಗ ಸಚಿವಾಲಯ ಹಾಲಿ ಚಾಂಪಿಯನ್ ಟೀಂ ಇಂಡಿಯಾಗೆ ಪಾಕ್​ಗೆ ಕಳುಹಿಸಲು ನಿರಾಕರಿಸಿದೆ. ಈ ಹಿನ್ನೆಲೆ ಭಾರತ ತಂಡ ಟೂರ್ನಿಯಿಂದಲೇ ಹಿಂದೆ ಸರಿದಿದೆ.

ಈ ಮೊದಲ ಭಾರತ ಕ್ರಿಕೆಟ್ ತಂಡವು ಪಾಕಿಸ್ಥಾನಕ್ಕೆ ಪ್ರಯಾಣಿಸಲು ಕ್ರೀಡಾ ಸಚಿವಾಲಯ ಒಪ್ಪಿಗೆ ಸೂಚಿಸಿತ್ತು. ಆದರೆ ಭದ್ರತ ದೃಷ್ಟಿಯಿಂದಾಗಿ ಕೇಂದ್ರ ವಿದೇಶಾಂಗ ಸಚಿವಾಲಯ ಭಾರತ ತಂಡವನ್ನು ಅಲ್ಲಿಗೆ ಕಳುಹಿಸಲು ನಿರಾಕರಿದೆ. ಈ ಬಗ್ಗೆ ಭಾರತೀಯ ಅಂಧರ ಕ್ರಿಕೆಟ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶೈಲೇಂದ್ರ ಯಾದವ್ ಬಹಿರಂಗಪಡಿಸಿದ್ದಾರೆ. ಇದರೊಂದಿಗೆ ಈ ಬಾರಿ ಭಾರತ ತಂಡವಿಲ್ಲದೆ ಅಂಧರ ವಿಶ್ವಕಪ್​ ಟೂರ್ನಿ ನಡೆಯಲಿದೆ.

Category
ಕರಾವಳಿ ತರಂಗಿಣಿ