ಮೂಡುಬಿದಿರೆ: ಕರಾವಳಿಯಲ್ಲಿ ಕಂಬಳಕೂಟಗಳು ಆರಂಭವಾಗಿದ್ದು, ಕಂಬಳ ಪ್ರೀಯರಲ್ಲಿ ಸಂತೋಷ ಮನೆ ಮಾಡಿದೆ. 15ನೇ ವರ್ಷದ ಜಯ - ವಿಜಯ ಜೋಡುಕರೆ ಕಂಬಳ ಶನಿವಾರ ನಡೆಯಿತು. 164 ಜೊತೆ ಕೋಣಗಳು ಭಾಗವಹಿಸಿದ್ದ ಕಂಬಳವು ಭಾನುವಾರ ಬೆಳಿಗ್ಗೆ ಸಂಪನ್ನವಾಯಿತು. ಜೂನಿಯರ್ ಕೋಣಗಳಿಗೆ ಸೀಮಿತವಾಗಿದ್ದ ಸ್ಪರ್ಧೆಯಲ್ಲಿ ನೇಗಿಲು ಜೂನಿಯರ್ ವಿಭಾಗದಲ್ಲಿ 51 ಜೊತೆ, ಹಗ್ಗ ಜೂನಿಯರ್ ವಿಭಾಗದಲ್ಲಿ 21 ಜೊತೆ ಮತ್ತು ಸಬ್ ಜೂನಿಯರ್ ವಿಭಾಗದಲ್ಲಿ 92 ಜೊತೆ ಕೋಣಗಳು ಭಾಗವಹಿಸಿದ್ದವು.
ಪಣಪಿಲ ಕಂಬಳದ ಫಲಿತಾಂಶ
ಹಗ್ಗ ಜೂನಿಯರ್:- ಪ್ರಥಮ: ಸುರತ್ಕಲ್ ಪಾಂಚಜನ್ಯ ಯೋಗೀಶ್ ಪೂಜಾರಿ ಎ, ಓಟಗಾರ: ಭಟ್ಕಳ ಶಂಕರ್ ದ್ವಿತೀಯ:- ಬೆಳುವಾಯಿ ಪೆರೋಡಿ ಪುತ್ತಿಗೆ ಗುತ್ತು ನರಸಿಂಹ ಕೆ ಶೆಟ್ಟಿ ಎ, ಓಟಗಾರ: ಆದಿ ಉಡುಪಿ ಜಿತೇಶ್ ಸುವರ್ಣ
ನೇಗಿಲು ಜೂನಿಯರ್:- ಪ್ರಥಮ: ಮೂಲ್ಕಿ ಚಿತ್ರಾಪು ಸಾನದಮನೆ ಅಂಬಿಕಾ ರವೀಂದ್ರ ಪೂಜಾರಿ ಎ, ಓಟಗಾರ: ಬಾಂಬ್ರಾಣಬೈಲು ವಂದಿತ್ ಶೆಟ್ಟಿ, ದ್ವಿತೀಯ: ಪಣೋಲಿಬೈಲ್ ಬೊಳ್ಳಯಿ ಚೇತನ್ ಚಂದಪ್ಪ ಪೂಜಾರಿ, ಓಟಗಾರ: ಪಡು ಸಾಂತೂರು ಸುಕೇಶ್ ಪೂಜಾರಿ
ಸಬ್ ಜೂನಿಯರ್:-
ಪ್ರಥಮ: ಶ್ರೀ ಸ್ವಾಮಿಧಾಮ ಹೊಳೆಕಟ್ಟು ಕುಂಭಾಶಿ, ಓಟಗಾರ: ಬೈಂದೂರು ಮಂಜುನಾಥ್ ಗೌಡ, ದ್ವಿತೀಯ: ಮೂಡಾರು ಅಷ್ಟೊಟ್ಟು ಫ್ಲೋರ ರೋಶನ್ ರಂಜಿತ್ ಫೆರ್ನಾಂಡಿಸ್ ಎ, ಓಟಗಾರ: ಕಕ್ಯಪದವು ಮಹಮ್ಮಾಯಿ ಗೌತಮ್ ಗೌಡ