image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ನೆಟ್ ಬಾಲ್ ಪಂದ್ಯಾವಳಿ ಗೆಲುವು: ಗೆಲುವಿನ ಸಂಭ್ರಮಾಚರಣೆ

ನೆಟ್ ಬಾಲ್ ಪಂದ್ಯಾವಳಿ ಗೆಲುವು: ಗೆಲುವಿನ ಸಂಭ್ರಮಾಚರಣೆ

ಮಂಗಳೂರು: ರಾಜ್ಯಮಟ್ಟದ ನೆಟ್ ಬಾಲ್ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಸೇಕ್ರೆಡ್ ಹಾರ್ಟ್ಸ್ ಹಿರಿಯ ಪ್ರಾಥಮಿಕ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯರಾದ ಶರ್ಲಿನ್, ವೈಷ್ಣವಿ, ಆರಾಧ್ಯ ಇವರಿಗೆ ಸನ್ಮಾನ ಮತ್ತು  ಸಂಭ್ರಮಾಚರಣೆಯನ್ನು ವಿಜೃಂಭಣೆಯಿಂದ  ಕಲ್ಪನೆ ಮೈದಾನದಲ್ಲಿ ಆಯೋಜಿಸಲಾಗಿತ್ತು. 

ಸ್ಥಳಿಯ ಕಾರ್ಪೋರೇಟರಾದ ಶ್ರೀಕಿಶೋರ್ ಕೊಟ್ಟಾರಿಯವರ ಘನ ಅಧ್ಯಕ್ಷತೆಯಲ್ಲಿ  ಸಾಧನೆಗೈದ ವಿದ್ಯಾರ್ಥಿಗಳನ್ನು ಮತ್ತು ಕ್ರೀಡಾ ಶಿಕ್ಷಕರಾದ ಶ್ರೀಮತಿ ಮಾರ್ಗರೇಟ್ ಮತ್ತು ಶ್ರೀಕೌಶಲ್‌ರವರನ್ನು ಹಾರ ಹಾಕಿ, ಶಾಲು ಹೊದಿಸಿ ಸನ್ಮಾನಿಸಿ ಅಭಿನಂದಿಸಿದರು. ನಂತರ ಭವ್ಯ ಮೆರವಣಿಗೆಯೊಂದಿಗೆ ಶಾಲಾ ಸಭಾಂಗಣಕ್ಕೆ ಆಗಮಿಸಿದ ಕ್ರೀಡಾ ಪಟುಗಳನ್ನು ನೆರೆದ ಎಲ್ಲಾ ಶಿಕ್ಷಕರ, ವಿದ್ಯಾರ್ಥಿಗಳ ಹಾಗೂ ಪೋಷಕರ ಸಮ್ಮುಖದಲ್ಲಿ ಶಾಲಾ ಸಂಚಾಲಕಿಯವರಾದ ಭಗಿನಿ ಜೂಲಿಯಾನ ಮೊನಿಸ್ ಬಿ ಸ್ ರವರು ಕ್ರೀಡಾಪಟುಗಳನ್ನು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಶಾಲಾ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಾಕ್ಷರಾದ ಅರುಣ್ ಸಂತೋಷ್ ಹಾಗೂ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿಕ್ಷಕಿ ಸಿಲ್ವಿಯಾ ಲೋಬೊರವರು ನಿರೂಪಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿಯವರಾದ ಭಗಿನಿ ಅನಿತ ನತಾಲಿಯರವರು ಎಲ್ಲರನ್ನು ವಂದಿಸಿದರು.

Category
ಕರಾವಳಿ ತರಂಗಿಣಿ