image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಡಬ್ಲ್ಯೂಬಿಬಿಎಲ್‌ನಲ್ಲಿ ಅಪರೂಪದ 'ಫ್ರೀ-ಬಾಲ್ ಬೌಲ್ಡ್' ಔಟ್

ಡಬ್ಲ್ಯೂಬಿಬಿಎಲ್‌ನಲ್ಲಿ ಅಪರೂಪದ 'ಫ್ರೀ-ಬಾಲ್ ಬೌಲ್ಡ್' ಔಟ್

ಹೈದರಾಬಾದ್ : ಮಹಿಳಾ ಬಿಗ್ ಬ್ಯಾಷ್ ಲೀಗ್ (WBBL) ಪಂದ್ಯದಲ್ಲಿ ಬ್ರಿಸ್ಬೇನ್ ಹೀಟ್ ಮತ್ತು ಮೆಲ್ಬೋರ್ನ್ ರೆನೆಗೇಡ್ಸ್ ತಂಡಗಳು ಸೆಣಸಾಟ ನಡೆಸಿದವು. ಮೊದಲು ಬ್ಯಾಟಿಂಗ್ ಮಾಡಿದ ಬ್ರಿಸ್ಬೇನ್ ಹೀಟ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 137 ರನ್ ಕಲೆಹಾಕಿತು. ಗುರಿ ಬೆನ್ನತ್ತಿದ ಮೆಲ್ಬೋರ್ನ್ ರೆನೆಗೇಡ್ಸ್ ತಂಡ 3 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿತು. ಆದರೆ ಈ ಪಂದ್ಯದಲ್ಲಿ ಮೆಲ್ಬೋರ್ನ್ ರೆನೆಗೇಡ್ಸ್ ತಂಡದ ಡಿಯಾಂಡ್ರಾ ಡಾಟಿನ್ ಒಂದೇ ಒಂದು ಎಸೆತವನ್ನು ಎದುರಿಸದೆ ಅಚ್ಚರಿ ರೀತಿಯಲ್ಲಿ ಔಟಾಗಿದ್ದು ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಕ್ರೀಸ್‌ಗೆ ಬಂದ ಡಾಟಿನ್ ಒಂದೇ ಒಂದು ಚೆಂಡನ್ನೂ ಆಡದೆ ಸ್ಟಂಪ್‌ಗಳಿಂದ ಸುಮಾರು ಐದು ಮೀಟರ್ ದೂರದಲ್ಲಿ ನಿಂತರು. ಆ ವೇಳೆ ಬೌಲರ್ ಸರಾ ಎಸೆದ ಚೆಂಡು ನೇರವಾಗಿ ಸ್ಟಂಪ್‌ಗೆ ಬಡಿಯಿತು ಮತ್ತು ಅಂಪೈರ್ ಔಟ್ ಎಂದು ತೀರ್ಪು ನೀಡಿದರು. ಕ್ರಿಕೆಟ್ ಇತಿಹಾಸದಲ್ಲೇ ಇಂತಹ 'ಫ್ರೀ-ಬಾಲ್ ಬೌಲ್ಡ್' ಔಟ್ ಘಟನೆ ನಡೆದಿರುವುದು ಇದೇ ಮೊದಲು ಎನ್ನಲಾಗಿದೆ.

ಸಾಮಾನ್ಯ ಕ್ರಿಕೆಟ್‌ನಲ್ಲಿ ಟೈಮ್ ಔಟ್ ನಿಯಮದ ಪ್ರಕಾರ ನಿಗದಿತ ಸಮಯದಲ್ಲಿ ಬ್ಯಾಟರ್ ಕ್ರೀಸ್‌ನಲ್ಲಿರದಿದ್ದರೆ ಮೇಲ್ಮನವಿ ಸಲ್ಲಿಸಿ ಔಟ್ ಪಡೆಯಬಹುದು. ಆದರೆ WBBL ಆಟದ ಷರತ್ತುಗಳು ಮತ್ತು ಎಂಸಿಸಿ ನಿಯಮ 40ರ ಅಡಿಯಲ್ಲಿ ವಿಕೆಟ್ ಬಿದ್ದ 75 ಸೆಕೆಂಡುಗಳೊಳಗೆ ಹೊಸ ಬ್ಯಾಟರ್ ಚೆಂಡು ಎದುರಿಸಲು ಸಿದ್ಧರಾಗಿರಬೇಕು. ತಡವಾದರೆ ಫೀಲ್ಡಿಂಗ್ ತಂಡ ಟೈಮ್ ಔಟ್ ಮನವಿ ಮಾಡಬಹುದು. ಆಗ ಅಂಪೈರ್ ಬೌಲರ್‌ಗೆ 'ಫ್ರೀ ಬಾಲ್' ಎಸೆಯಲು ಅವಕಾಶ ನೀಡುತ್ತಾರೆ. ಬ್ಯಾಟರ್ ಚೆಂಡನ್ನು ಎದುರಿಸದೆ ಕ್ರೀಸ್ ಹಾಗೂ ವಿಕೆಟ್‌ನಿಂದ ದೂರ ನಿಲ್ಲಬೇಕು. ಈ ವೇಳೆ ಚೆಂಡು ಸ್ಟಂಪ್‌ಗೆ ತಗುಲಿದರೆ ಬ್ಯಾಟರ್ ಔಟ್ ಆಗುತ್ತಾರೆ; ಚೆಂಡು ಸ್ಟಂಪ್‌ಗೆ ತಪ್ಪಿದರೆ ಇನ್ನಿಂಗ್ಸ್ ಮುಂದುವರಿಸಬಹುದು.

 

Category
ಕರಾವಳಿ ತರಂಗಿಣಿ