image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಸೋನಾಲ್‌ಬೆನ್‌ಗೆ ಪದಕ ಖಾತ್ರಿ

ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಸೋನಾಲ್‌ಬೆನ್‌ಗೆ ಪದಕ ಖಾತ್ರಿ

ಹೈದರಾಬಾದ್ : ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಪ್ಯಾರಾ ಟೇಬಲ್ ಟೆನಿಸ್ ಆಟಗಾರ್ತಿ ಸೋನಾಲ್‌ಬೆನ್ ಪಟೇಲ್ ಅವರು ದೇಶಕ್ಕೆ ಮೊದಲ ಪದಕ ಖಾತ್ರಿಪಡಿಸಿದ್ದಾರೆ. ಅಂತಿಮ-16ರ ಸುತ್ತಿನ ಪಂದ್ಯದಲ್ಲಿ ದಕ್ಷಿಣ ಕೊರಿಯಾದ ಎರಡು ಬಾರಿಯ ಏಷ್ಯನ್ ಪ್ಯಾರಾ ಗೇಮ್ಸ್ ಪದಕ ವಿಜೇತೆ ಲೀ ಮಿ ಜಿಯು ವಿರುದ್ಧ 3-2 (12-10, 4-11, 9-11, 11-7, 11-4) ಅಂತರದಲ್ಲಿ ರೋಚಕ ಜಯ ಸಾಧಿಸಿದರು. ಇದರ ಬೆನ್ನಲ್ಲೇ ಕ್ವಾರ್ಟರ್ ಫೈನಲ್‌ನಲ್ಲಿ ಬ್ರೆಜಿಲ್‌ನ ಥಾಯಿಸ್ ಫ್ರಾಗಾ ಸೆವೆರೊ ಅವರನ್ನು 3-0 (11-9, 11-4, 11-5) ನೇರ ಸೆಟ್‌ಗಳಿಂದ ಮಣಿಸಿ ಮುನ್ನಡೆದರು. ಐಚಿ-ನಗೋಯದಲ್ಲಿ ನಡೆದ 2026ರ ಏಷ್ಯನ್ ಪ್ಯಾರಾ ಗೇಮ್ಸ್‌ನಲ್ಲಿಯೂ ಸೋನಾಲ್‌ಬೆನ್ ಪಟೇಲ್ ಕಂಚಿನ ಪದಕ ಗೆದ್ದಿದ್ದು, ಆ ಕೂಟದಲ್ಲಿ ಭಾರತ ಪ್ಯಾರಾ ಟೇಬಲ್ ಟೆನಿಸ್‌ನಲ್ಲಿ ಏಳು ಕಂಚಿನ ಪದಕಗಳನ್ನು ಪಡೆದಿತ್ತು.

ಮಹಿಳೆಯರ ಸಿಂಗಲ್ಸ್ ಕ್ಲಾಸ್4-5 ಕ್ವಾರ್ಟರ್ ಫೈನಲ್‌ನಲ್ಲಿ ಭಾರತದ ಮತ್ತೊಬ್ಬ ಟೇಬಲ್ ಟೆನಿಸ್ ಆಟಗಾರ್ತಿ ಭಾವಿನಾ ಪಟೇಲ್ ಅವರು ಚೀನಾದ ಬಿಯಾನ್ ಝೂಂಗ್ ವಿರುದ್ಧ 0-3 (8-11, 7-11, 8-11) ಅಂತರದಲ್ಲಿ ಸೋಲು ಕಂಡಿದ್ದಾರೆ. ಮತ್ತೊಂದೆಡೆ, ಮಿಕ್ಸೆಡ್ ಡಬಲ್ಸ್ ಕ್ಲಾಸ್ ಎಕ್ಸ್‌ಡಿ7 ವಿಭಾಗದಲ್ಲಿ ಕಣಕ್ಕಿಳಿದಿದ್ದ ಶುಭಮನ್ ವಧ್ವಾ ಮತ್ತು ಬೇಬಿ ಸಹನಾ ರವಿ ಜೋಡಿ ಅಂತಿಮ-16ರ ಸುತ್ತಿನಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದಿದೆ.

 

Category
ಕರಾವಳಿ ತರಂಗಿಣಿ