ಹೈದರಾಬಾದ್ : ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಅಂತಿಮ ಏಕದಿನ ಪಂದ್ಯದ ವೇಳೆ ಮೈದಾನದಲ್ಲಿ ನಡೆದ ರೋಚಕ ಘಟನೆಯೊಂದು ಕ್ರಿಕೆಟ್ ಅಭಿಮಾನಿಗಳ ಮನ ಗೆದ್ದಿದೆ. ನ್ಯೂಜಿಲೆಂಡ್ ಬ್ಯಾಟಿಂಗ್ ಮಾಡುತ್ತಿದ್ದಾಗ ಭಾರತೀಯ ಅಭಿಮಾನಿಯೊಬ್ಬ ರಾಷ್ಟ್ರಧ್ವಜ ಹಿಡಿದು ಮೈದಾನಕ್ಕೆ ನುಗ್ಗಿದ್ದನು. ಆತನನ್ನು ಹಿಡಿಯಲು ಓಡಿದ ಭದ್ರತಾ ಸಿಬ್ಬಂದಿ ಜಾರಿಬಿದ್ದಾಗ ತ್ರಿವರ್ಣ ಧ್ವಜ ನೆಲಕ್ಕೆ ಬೀಳುವಂತಿತ್ತು.
ಇದನ್ನು ಗಮನಿಸಿದ ವೇಗಿ ಮೊಹಮ್ಮದ್ ಸಿರಾಜ್ ತಕ್ಷಣವೇ ಓಡಿಬಂದು ಭದ್ರತಾ ಸಿಬ್ಬಂದಿಯ ಕೈಯಿಂದ ರಾಷ್ಟ್ರಧ್ವಜವನ್ನು ಪಡೆದುಕೊಂಡು, ಅದನ್ನು ಗೌರವಯುತವಾಗಿ ಸಹ ಆಟಗಾರನಿಗೆ ನೀಡಿ ಸುರಕ್ಷಿತವಾಗಿ ಕಳುಹಿಸಿದರು. ಸಿರಾಜ್ ಅವರ ಈ ಸಮಯಪ್ರಜ್ಞೆ ಹಾಗೂ ರಾಷ್ಟ್ರಧ್ವಜದ ಮೇಲಿನ ಗೌರವಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಾರ ಮೆಚ್ಚುಗೆ ವ್ಯಕ್ತವಾಗಿದೆ. ಪಂದ್ಯದಲ್ಲೂ ಅತ್ಯುತ್ತಮ ಪ್ರದರ್ಶನ ನೀಡಿದ ಸಿರಾಜ್ 10 ಓವರ್‌ಗಳಲ್ಲಿ 50 ನೀಡಿ 2 ವಿಕೆಟ್ ಕಬಳಿಸಿದರು. ಅಂತಿಮವಾಗಿ ಭಾರತ ತಂಡವು 22 ರನ್‌ಗಳಿಂದ ಗೆಲುವು ಸಾಧಿಸಿ, 5 ಪಂದ್ಯಗಳ ಏಕದಿನ ಸರಣಿಯನ್ನು 3-1 ಅಂತರದಿಂದ ತನ್ನದಾಗಿಸಿಕೊಂಡಿತು.